ಮಳವೂರಿಯಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ:ಯುವಕನ ಬಂಧನ

ಮಂಗಳೂರು, ಫೆಬ್ರವರಿ 03: ಮರದಿಂದ ತೆಂಗಿನಕಾಯಿ ಕಿತ್ತುಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಹೊರವಲಯದ ಮಳವೂರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಯುವಕನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಂಗಳೂರಿನ ಮರಕಡ ನಿವಾಸಿ ವೆಂಕಟೇಶ್ (28) ಎಂದು ಗುರುತಿಸಲಾಗಿದೆ. ಮುಂಜಾನೆ ಮನೆಯ ಅಂಗಳದಲ್ಲಿ ಸಂತ್ರಸ್ತ ಮಹಿಳೆ ಕೆಲಸದಲ್ಲಿ ನಿರತಳಾಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ವೆಂಕಟೇಶ್, 'ನಾನು ತೆಂಗಿನಕಾಯಿ ತೆಗೆಯುವ ಕೆಲಸ ಮಾಡುತ್ತಿದ್ದು, ನಿಮ್ಮಲ್ಲಿರುವ ತೆಂಗಿನಕಾಯಿಗಳನ್ನು ತೆಗೆಯುತ್ತೇನೆ' ಎಂದು ಹೇಳಿ, ಮರವನ್ನು ಏರಿ ತೆಂಗಿನಕಾಯಿಗಳನ್ನು ತೆಗೆದಿದ್ದ.

ಬಳಿಕ ಮಹಿಳೆ ತೆಂಗಿನಕಾಯಿಗಳನ್ನು ಗೋಣಿಚೀಲದಲ್ಲಿ ಸಂಗ್ರಹಿಸಲು ಮುಂದಾದಾಗ ವೆಂಕಟೇಶ್ ಹಿಂದಿನಿಂದ ತಬ್ಬಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

One arrest for rape attempt in Mangaluru

ಏಕಾಏಕಿ ಆಘಾತಕ್ಕೆ ಒಳಗಾದ ಮಹಿಳೆ ಜೋರಾಗಿ ಕಿರುಚಿದಾಗ ನೆರೆಮನೆಯವರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ವೆಂಕಟೇಶ್ ಅಲ್ಲಿಂದ ತಕ್ಷಣ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+