ಉಗ್ರರನ್ನು ಮುಗಿಸಲು ಭಾರತೀಯ ಸೇನೆಗೆ ಭಗವಂತ ಭೀಮ ಬಲ ನೀಡಲಿ:ಒಡಿಯೂರು ಶ್ರೀ

ಮಂಗಳೂರು, ಫೆಬ್ರವರಿ 15: ಪಾಕ್ ಪ್ರೇರಿತ ಉಗ್ರರು ಸಿಆರ್ ಪಿಎಫ್ ಯೋಧರ ವಾಹನದ ಮೇಲೆ ನಡೆಸಿರುವ ದಾಳಿಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಶ್ಮೀರದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಸಂತಾಪದ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಉಗ್ರರಿಗೆ ತಕ್ಕ ಪಾಠ ಕಲಿಸಲು ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸುವಂತೆ ಒತ್ತಾಯ ಬಲಗೊಳ್ಳುತ್ತಿದೆ.

ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ, ಉಗ್ರರ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ್ದು, ಉಗ್ರರನ್ನು ಮುಗಿಸಲು ನಮ್ಮ ಸೇನೆಗೆ ಭಗವಂತ ಭೀಮ ಬಲ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

Odiyoor swamiji condemned terror attack on CRPF convoy

ನಮ್ಮ ಸುಖ, ಸಂತೋಷದ ಹಿಂದೆ ಯೋಧರ ತ್ಯಾಗ-ಬಲಿದಾನವಿದೆ. ಇದನ್ನು ಅರ್ಥ ಮಾಡಿಕೊಂಡು ಯೋಧರಿಗೆ ಸಾಂತ್ವನ ಹೇಳುವ ಕಾರ್ಯ ಸಮಾಜ ಮಾಡಬೇಕು. ಉಗ್ರರು ಈ ಹೇಯ ಕೃತ್ಯಕ್ಕೆ ಖಂಡಿಸುವ ಜತೆಗೆ ಪ್ರತ್ಯುತ್ತರ ನೀಡುವ ಕಾರ್ಯವಾಗಬೇಕು. ಎದೆಕೊಟ್ಟು ಸೆಟೆದು ನಿಲ್ಲುವ ಕಾರ್ಯ ಯೋಧರಿಂದ ನಡೆಯಲಿ ಎಂದು ಹೇಳಿದರು.

ಉಗ್ರರ ಈ ನೀಚ ಕೃತ್ಯಕ್ಕೆ ದೇವರ ಬಲ ಯಾವತ್ತೂ ಇರುವುದಿಲ್ಲ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+