ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ
ಮಂಗಳೂರು, ಅಕ್ಟೋಬರ್ 26: ಪ್ರಿಯಕರನೊಂದಿಗೆ ಜಗಳವಾದ ಹಿನ್ನೆಲೆಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಅತ್ತಾವರದಲ್ಲಿ ನಡೆದಿದೆ.
ಕೇರಳ ಮೂಲದ ಅನುಪಮಾ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಅತ್ತಾವರ ಮಂಜುಶೆಟ್ಟಿ ಕಾಂಪೌಂಡಿನ ಶ್ರೀ ದೇವಿ ಅಪಾರ್ಟ್ ಮೆಂಟಿನ ಎರಡನೇ ಮಹಡಿಯ ಕೋಣೆಯೊಂದರಲ್ಲಿ ವಿದ್ಯಾರ್ಥಿನಿ ವಾಸವಾಗಿದ್ದಳು. ಯುವತಿಯ ತಾಯಿ ವಿದೇಶದಲ್ಲಿದ್ದು ಈಕೆ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಕಲಿಯುತ್ತಿದ್ದಳು.
ಅಪಾರ್ಟ್ ಮೆಂಟಿನಲ್ಲಿ ಕಳೆದೊಂದು ವರ್ಷದಿಂದ ವಾಸವಿದ್ದ ಆಕೆ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದೆ. ಈತ ಚೆನ್ನೈನಲ್ಲಿ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ. ಅನುಪಮಾ ಇರುವ ಅಪಾರ್ಟ್ ಮೆಂಟಿಗೆ ಆಗಾಗ ಬಂದು ಹೋಗುತ್ತಿದ್ದ. ಇತ್ತೀಚೆಗೆ ಅನುಪಮಾ ಮತ್ತು ಸ್ನೇಹಿತ ಅಲೆನ್ ಮಧ್ಯೆ ಜಗಳವಾದ್ದು, ಆತ ಅನುಪಮಾಳ ಮದುವೆಯ ಬೇಡಿಕೆಯನ್ನು ನಿರಾಕರಿಸಿದ್ದ ಎಂದು ಹೇಳಲಾಗಿದೆ.

ಆಗ ಅಪಾರ್ಟ್ ಮೆಂಟ್ ಮಾಲೀಕರು ಅಲೆನ್ ಗೆ ಬುದ್ಧಿಮಾತು ಹೇಳಿದ್ದರು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿನಿ ನನ್ನ ಸಾವಿಗೆ ಅಲೆನ್ ಕಾರಣ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಮಂಗಳೂರಿನ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.











Click it and Unblock the Notifications