• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುರತ್ಕಲ್ ಟೋಲ್‌ನಲ್ಲಿ ಸುಂಕ ವಸೂಲಿಯ ಅಗತ್ಯವಿಲ್ಲ: ಖಾದರ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ನವೆಂಬರ್ 17: ಸುರತ್ಕಲ್ ಟೋಲ್‌ಗೇಟ್‌ ಅನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಗೆಜೆಟೆಡ್ ನೋಟಿಫಿಕೇಶನ್ ಕಳುಹಿಸಿದರೂ, ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಸುಂಕ ವಸೂಲಿ ಯಥಾಸ್ಥಿತಿಯಲ್ಲಿ ನಡೆಯುತ್ತಿದೆ ಎಂಬ ಆರೋಪ- ಪ್ರತ್ಯಾರೋಪಗಳ ನಡುವೆ ಮಾಜಿ ಸಚಿವ ಯುಟಿ ಖಾದರ್, ಟೋಲ್ ವಿಚಾರದಲ್ಲಿ ಹೊಸ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಬಂಟ್ವಾಳದಿಂದ ಸುರತ್ಕಲ್ ನಡುವಿನ ಹೆದ್ದಾರಿ ಅಭಿವೃದ್ಧಿಯ ಪಾಲು ಶೇ 75. ಎನ್ಎಚ್ಎಐ ಭರಿಸಿದ್ದರೆ, ಶೇ. 25 ಎನ್ಎಂಪಿಟಿ ಭರಿಸಿದೆ. ಆದ್ದರಿಂದ ಸುರತ್ಕಲ್ ಟೋಲ್ ಗೇಟ್ ಮಾಡುವ ಅಗತ್ಯವೇ ಇರಲಿಲ್ಲ. ಇದೀಗ ಕೇಂದ್ರ ಸರಕಾರ ಬಾಕಿ ಉಳಿದಿದೆ ಎಂದು ಹೇಳುತ್ತಿರುವ 130 ಕೋಟಿ ರೂ.ವನ್ನು ಕೈಬಿಟ್ಟು ಟೋಲ್ ಸುಂಕವನ್ನು ವಿನಾಯಿತಿ ಮಾಡಲಿ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

Surathkal toll gate cancelled : ಸತತ ಹೋರಾಟಕ್ಕೆ ಮಣಿದ ಕೇಂದ್ರ: ಸುರತ್ಕಲ್ ಟೋಲ್ ಗೇಟ್ ರದ್ದು Surathkal toll gate cancelled : ಸತತ ಹೋರಾಟಕ್ಕೆ ಮಣಿದ ಕೇಂದ್ರ: ಸುರತ್ಕಲ್ ಟೋಲ್ ಗೇಟ್ ರದ್ದು

ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಗೆ ಖರ್ಚು ಮಾಡಿರುವ ಹೂಡಿಕೆಯಲ್ಲಿ ಇನ್ನೂ 130 ಕೋಟಿ ರೂ. ಬರಲು ಬಾಕಿಯಿದೆ ಎಂದು ಹೇಳುತ್ತಿದೆ. ಆದರೆ ಕೇಂದ್ರ ಸರಕಾರ ಟೋಲ್ ವಸೂಲಾತಿಯನ್ನು ಗುತ್ತಿಗೆ ಕಂಪೆನಿಗೆ ವಹಿಸಿದ್ದು ಎಷ್ಟು ಸರಿ. ಈ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದೇಕೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಬಿಸಿ ರೋಡ್‌ನಿಂದ ಸುರತ್ಕಲ್‌ವರೆಗೆ ಹೆದ್ದಾರಿ ನಿರ್ಮಿಸಲು 360 ಕೋಟಿರೂ ವೆಚ್ಚದಲ್ಲಿ 36 ಕಿಮೀ ಉದ್ದದ ರಸ್ತೆಗೆ ಟೆಂಡರ್‌ ಕೆರೆಯಾಗಿತ್ತು. ಈ ಕಾಮಗಾರಿಗೆ 465 ಕೋಟಿ ರೂ ಬಿಲ್‌ ಬಿಲ್ ಪಾವತಿಸಲಾಗಿದೆ. ಇದಕ್ಕೆ ನವಮಂಗಳೂರು ಬಂದರು ಮಂಡಳಿ ಶೇ. 25ರಷ್ಟು ಮತ್ತು ಎನ್‌ಎಚ್‌ಎಐ ಶೇ. 75ರಷ್ಟನ್ನು ಭರಿಸಿದೆ ಎಂದರು.

ಇನ್ನು ಕೇಂದ್ರ ಸರ್ಕಾರ ಸುರತ್ಕಲ್ ಟೋಲ್‌ಗೇಟ್ ರದ್ದು ಆಗಿಲ್ಲ ಹೆಜಮಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನಗೊಂಡಿದೆ. ಶಾಸಕರಿಗೆ, ಸಂಸದರಿಗೆ ಇಚ್ಛಾಶಕ್ತಿ ಇದ್ದರೆ ಎರಡು ಟೋಲ್‌ಗೇಟ್‌ಗಳ ವಿಲೀನದ ಬದಲು ಸುರತ್ಕಲ್‌ ಟೋಲ್‌ಗೇಟ್‌ ರದ್ದು ಪಡಿಸಲು ಕೇಂದ್ರ ಭೂಸಾರಿಗೆ ಸಚಿವರನ್ನು ಒತ್ತಾಯಿಸಬಹುದಿತ್ತು. ಇನ್ನು ಹೆಜಮಾಡಿ ಟೋಲ್‌ಗೇಟ್‌ನಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡಿದರೆ ಮೂಡಬಿದರೆ, ಮೂಲ್ಕಿ ಕ್ಷೇತ್ರದ ಜನರಿಗೆ ಹೆಚ್ಚು ಅನ್ಯಾಯವಾಗಲಿದೆ. ಆದರೂ ಅಲ್ಲಿನ ಶಾಸಕರು ಮೌನ ವಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕೀಯ ಲಾಭಕ್ಕೆ ಯತ್ನ

ಟೋಲ್‌ಗೇಟ್‌ ರದ್ದುಗೊಳಿಸಲು ಸಾಕಷ್ಟು ಹೋರಾಟ ನಡೆದಿದೆ. ಊಟ ನಿದ್ರೆ ಬಿಟ್ಟು ಹೋರಾಟ, ಧರಣಿ ನಡೆಸಲಾಗಿದೆ. ಇದೆಲ್ಲರ ಶ್ರೇಯ ಕರಾವಳಿಯ ಹೋರಾಟಗಾರರಿಗೆ ಸಲ್ಲಬೇಕು. ಅಹೋರಾತ್ರಿ ಹೋರಾಟ ಮಾಡಿರುವ ಸ್ಥಳಕ್ಕೆ ಒಂದು ಬಾರಿಯೂ ತೆರಳದ ಜನಪ್ರತಿನಿಧಿಗಳು ರಾಜಕೀಯ ಲಾಭ ಪಡೆಯಲು ತಮ್ಮಿಂದಾಗಿ ಆಗಿದೆ ಎಂದು ಹೇಳಿಕೆ ನೀಡಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದರು.

Not Necessary to Collect toll at Suratkal Toll Gate: UT Khader

ಇದೇ ಸಂದರ್ಭದಲ್ಲಿ ಹೆಜಮಾಡಿಗೆ ಟೋಲ್ ಗೇಟ್ ಮರ್ಜ್ ಆದರೂ KA19 ವಾಹನಗಳಿಗೆ ವಿನಾಯಿತಿ ನೀಡಬೇಕು. ಟೋಲ್ ಸುಂಕವನ್ನೂ ಕಡಿಮೆ ಮಾಡಬೇಕು ಎಂದು ಯುಟಿ ಖಾದರ್ ಆಗ್ರಹಿಸಿದ್ದಾರೆ.

English summary
NMPT paid a 25 % share for highway development works between Bantwal to suratkal. So there was no need to construct a toll gate at Suratkal at suratkal, said Deputy leader of opposition in Assembly UT Khader,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X