ದೇಶದಲ್ಲಿ ಲವ್ ಜಿಹಾದ್ ಎಲ್ಲಿಯೂ ನಡೆದಿಲ್ಲ: ಮಂಗಳೂರಿನಲ್ಲಿ ಮುಸ್ಲಿಂ ಜಸ್ಟೀಸ್ ಫೋರಂ ಕಮಿಟಿ ಸ್ಪಷ್ಟನೆ
ಮಂಗಳೂರು, ನವೆಂಬರ್, 30: ದೇಶದಲ್ಲಿ ಎಲ್ಲಿಯೂ ಲವ್ ಜಿಹಾದ್ ನಡೆದಿಲ್ಲ. ಪ್ರೀತಿಯ ಹಿನ್ನೆಲೆಯಲ್ಲಿ ಹಿಂದೂ ಯುವತಿಯರೇ ಸ್ವಇಚ್ಛೆಯಿಂದ ಮತಾಂತರಗೊಂಡ ಪ್ರಕರಣ ನಡೆದಿದೆ. ಬಲವಂತದ ಮತಾಂತರವನ್ನು ಮುಸ್ಲಿಂ ಸಮುದಾಯ ಬೆಂಬಲಿಸುವುದಿಲ್ಲ. ಒಂದು ವೇಳೆ ಹಾಗೇನಾದರೂ ನಡೆದರೆ ಅದನ್ನು ನಾವು ವಿರೋಧಿಸುತ್ತೇವೆ ಎಂದು ಮುಸ್ಲಿಂ ಜಸ್ಟಿಸ್ ಫೋರಂ ಕಮಿಟಿ ಮಂಗಳೂರಿನಲ್ಲಿ ಹೇಳಿದೆ.
ಮಂಗಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ ಮುಸ್ಲಿಂ ಜಸ್ಟಿಸ್ ಫೋರಂ ಕಮಿಟಿಯ ಸ್ಥಾಪಕಾಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ಮಾತನಾಡಿ, "ದೇಶದ ಯಾವುದೇ ಪೊಲೀಸ್ ಠಾಣೆಗಳಲ್ಲಿ ಈವರೆಗೆ ಲವ್ ಜಿಹಾದ್ ಬಗ್ಗೆ ಒಂದು ಪ್ರಕರಣವೂ ದಾಖಲಾಗಿಲ್ಲ. ಮುಸ್ಲಿಂ ಯುವತಿಯರನ್ನು ಹಿಂದೂ ಯುವಕರು ಮದುವೆಯಾಗುತ್ತಾರೆ. ನಂತರ ಒಂದೆರಡು ವರ್ಷಗಳಲ್ಲಿಯೇ ಚಿತ್ರಹಿಂಸೆ ನೀಡಿ ಅವರನ್ನು ಕೊಂದಿರುವ ಪ್ರಕರಣಗಳು ನಡೆದಿವೆ. ಇದು ಯಾವ ಜಿಹಾದ್?," ಎಂದು ರಫೀಯುದ್ದೀನ್ ಕುದ್ರೋಳಿ ಪ್ರಶ್ನಿಸಿದರು.
ಮಾಧ್ಯಮಗಳಿಂದ ಸಮಾಜಕ್ಕೆ ತಪ್ಪು ಸಂದೇಶ
"ದೆಹಲಿಯ ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪಾರ್ಸಿ ಸಮುದಾಯದವನಾಗಿದ್ದಾನೆ. ಆದರೆ ಆತನನ್ನು ಮಾಧ್ಯಮಗಳು ಮುಸ್ಲಿಂ ಎಂದು ಬಿಂಬಿಸುತ್ತಿದ್ದು, ಸಮಾಜಕ್ಕೆ ತಪ್ಪು ಸಂದೇಶವನ್ನು ಸಾರುತ್ತಿವೆ. ಅದೇ ರೀತಿ ಗೋಸಾಗಾಟ ಮಾಡುವವರು ಹಾಗೂ ಏಜೆಂಟ್‌ಗಳು ಮುಸ್ಲಿಮರೇತರರು ಆಗಿರುತ್ತಾರೆ. ಆದರೆ ವಾಹನಗಳ ಚಾಲಕರು ಮಾತ್ರ ಮುಸ್ಲಿಮರು ಆಗಿರುತ್ತಾರೆ. ಅವರು ಸಣ್ಣಪುಟ್ಟ ಹಣಕ್ಕಾಗಿ ಬಂದು ಈ ಕೃತ್ಯಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ," ಎಂದು ಹೇಳಿದ್ದಾರೆ.

ಜಮಾಅರ್‌ನ ಪ್ರವಚನದಲ್ಲಿ ಹೇಳುವುದೇನು?
ಇನ್ನು ಗಾಂಜಾ ಪ್ರಕರಣದಲ್ಲಿ ಬಹಳಷ್ಟು ಮುಸ್ಲಿಂ ಯುವಕರ ಹೆಸರು ಕೇಳಿ ಬರುತ್ತಿವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾವು ಚಿಂತನೆ ನಡೆಸುತ್ತೇವೆ. ಅದೇ ರೀತಿ ಶುಕ್ರವಾರದಂದು ಜಮಾಅರ್‌ನ ಪ್ರವಚನದಲ್ಲಿ ಗಾಂಜಾ ವ್ಯಸನಿಗಳಾಗಬಾರದು, ಅನೀತಿ, ಅನಾಚಾರಗಳ, ಅನ್ಯಾಯಗಳನ್ನು ಎಸಗಬಾರದು ಎಂದು ತಿಳಿ ಹೇಳಲಾಗುತ್ತದೆ. ಅಲ್ಲದೆ ಈ ಕೃತ್ಯಗಳಲ್ಲಿ ತೊಡಗಿದವರನ್ನು ಜಮಾಅತ್‌ನ ಸಂಪರ್ಕದಿಂದ ಕಡಿತಗೊಳಿಸಲಾಗುತ್ತದೆ ಎಂದು ಸೂಚನೆ ನೀಡುತ್ತೇವೆ ಅಂತಾ ಹೇಳಿದ್ದಾರೆ. ಅಲ್ಲದೇ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು ಸರ್ಕಾರದಿಂದ ಮಾಡುವ ಯೋಜನೆಯಲ್ಲ. ಅದು ಮುಸ್ಲಿಮರ ಹಣದಿಂದಲೇ ಮಾಡುವಂತದ್ದು, ಸರ್ಕಾರದಲ್ಲಿ ಹಣ ಎಲ್ಲಿದೆ? ಲವ್ ಜಿಹಾದ್ ಮಾಡುವವರಿಗೆ ಮರಣ ಶತಸಿದ್ಧ ಎಂಬ ಬಜರಂಗದಳ ಕಾರ್ಯಕರ್ತ ಹೇಳಿರುವುದು ಅವರ ಅಸ್ತಿತ್ವ ಪ್ರದರ್ಶನದ ಹೇಳಿಕೆಯಾಗಿದೆ. ಸಂಘಟನೆಯ ಗುರಾಣಿ ಹಿಡಿದು ಸಮಾಜದಲ್ಲಿ ಕಂದಕ ಸೃಷ್ಟಿಸುವ ಹೇಳಿಕೆ ನೀಡುವುದನ್ನು ವಿರೋಧಿಸಬೇಕಾಗಿದೆ ಎಂದು ರಫೀಯುದ್ದೀನ್ ಕುದ್ರೋಳಿ ಹೇಳಿದ್ದಾರೆ.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ











Click it and Unblock the Notifications