India
  • search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಮರಿ ಪ್ರಾಣಿಗಳ ಕಲರವ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 06; ಲಾಕ್‌ಡೌನ್ ಹಿನ್ನಲೆಯಲ್ಲಿ ಪಾರ್ಕ್, ಝೂಗಳಿಗೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಜನರು ಉದ್ಯಾನವನಗಳಿಗೆ ಬರದಿದ್ದರೂ, ಝೂಗಳಲ್ಲಿ ಮಾತ್ರ ಪ್ರಾಣಿಗಳ ಕಲರವ ಜೋರಾಗಿದೆ.

ಮಂಗಳೂರಿನ ಪಿಲಿಕುಳ ಝೂನಲ್ಲಿ ಪ್ರಾಣಿಗಳ ಸಂತಾನಾಭಿವೃದ್ಧಿವಾಗಿದೆ. ಪಿಲಿಕುಳದ ಹುಲಿ 'ರಾಣಿ' ಮೂರು ಮರಿಗಳಿಗೆ ಜನ್ಮ ನೀಡಿದೆ. ರಾಣಿ 2019ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂಬ 5 ಮರಿಗಳಿಗೆ ಜನ್ಮ ನೀಡಿತ್ತು.

 ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಕ್ರಂ ಹುಲಿ ಸಾವು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಕ್ರಂ ಹುಲಿ ಸಾವು

ಈಗ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಇನ್ನು 16 ದಿನಗಳಲ್ಲಿ ಮರಿಗಳು ಕಣ್ಣು ತೆರೆಯಲಿದೆ. ಮೂರು ಮರಿಗಳನ್ನು ಸೇರಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ! ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!

ಇನ್ನು ಪಿಲಿಕುಳದಲ್ಲಿ ಕಾಡುನಾಯಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾದ 'ಬೋಳ್' ಎಂಬ ಕಾಡುನಾಯಿ ಈಗ ಏಳು ಮರಿಗಳಿಗೆ ಜನ್ಮ ನೀಡಿದೆ. ಬೋಳ್ ನಾಯಿ ಈ ಹಿಂದೆ 5 ಮರಿಗಳಿಗೆ ಜನ್ಮ ನೀಡಿತ್ತು. ಇನ್ನೊಂದು ನಾಯಿ 10 ಮರಿಗಳಿಗೆ ಜನ್ಮ‌ನೀಡಿತ್ತು. ಪಿಲಿಕುಳ ಮೃಗಾಲಯದಲ್ಲಿ ಕಾಡುನಾಯಿಗಳ ಸಂಖ್ಯೆ ಸದ್ಯ 33ಕ್ಕೇರಿದೆ.

ಮೈಸೂರು; ಕೊರೊನಾಗೆ ತತ್ತರಿಸಿದ ರೈತರ ನಿದ್ದೆಗೆಡಿಸಿದ ಹುಲಿ ಮೈಸೂರು; ಕೊರೊನಾಗೆ ತತ್ತರಿಸಿದ ರೈತರ ನಿದ್ದೆಗೆಡಿಸಿದ ಹುಲಿ

ಪಿಲಿಕುಳದಲ್ಲಿ ಉಷ್ಟ್ರ ಪಕ್ಷಿಯ ವರ್ಗಕ್ಕೆ ಸೇರಿದ ರಿಯಾ ಎಂಬ ಪಕ್ಷಿ ಸಂಕುಲವೂ ವೃದ್ಧಿಯಾಗುತ್ತಿದೆ. ಆ ಮೊಟ್ಟೆಗಳಿಗೆ ಕೃತಕ ಕಾವು ನೀಡಲಾಗುತ್ತಿದ್ದು, ಒಂದು‌ ಬಿಳಿ ರಿಯಾ ಜನ್ಮ ತಾಳಿದೆ. ಎರಡು ಬಿಳಿ ಮತ್ತು ಎರಡು ಕಂದು ರಿಯಾಗಳನ್ನು ಈ ಹಿಂದೆ ಕೇರಳದ ತಿರುವನಂತಪುರಂನಿಂದ ಪ್ರಾಣಿ ವಿನಿಮಯದಡಿ ತರಲಾಗಿತ್ತು.

New Guest For Pilikula Biological Park

ಇನ್ನು ಅಪರೂಪದ ರೆಟಿಕ್ಯುಲೇಟೆಡ್ ಹೆಬ್ಬಾವು 20 ಮೊಟ್ಟೆಗಳಿಗೆ ಕಾವು ನೀಡುತ್ತಿದ್ದು, ಕಳೆದ ಬಾರಿ 17ಮರಿಗಳಿಗೆ ಜನ್ಮ ನೀಡಿತ್ತು. ಇದೇ ರೀತಿ ಪಿಲಿಕುಳದ ನಾಗಮಣಿ ಎಂಬ ಹೆಸರಿನ ಕಾಳಿಂಗಸರ್ಪವೂ ಆರು ಮೊಟ್ಟೆಗಳನ್ನು ಇಟ್ಟಿದ್ದು,ಅವುಗಳಿಗೆ ಕೃತಕ ಕಾವು ನೀಡಲಾಗುತ್ತಿದೆ.

ಪಿಲಿಕುಳದಲ್ಲಿ ಒಟ್ಟು 19 ಕಾಳಿಂಗಸರ್ಪಗಳಿವೆ. ಕಾಳಿಂಗ ಸರ್ಪಗಳಿಗೆ ವೈಜ್ಞಾನಿಕವಾಗಿ ಕೃತಕ ಕಾವು ನೀಡಿ ಸಂತಾನಾಭಿವೃದ್ಧಿ ಮಾಡಿದ ಕೀರ್ತಿ ಪಿಲಿಕುಳ ಜೈವಿಕ ಮೃಗಾಲಯದ್ದಾಗಿದೆ.

English summary
New guest for Pilikula zoo at Mangaluru. Tigress Rani has given birth to three cubs. The cubs are healthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X