• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮಹಾತ್ಮಾ ಗಾಂಧೀಜಿಯಂತೆ ಗೋಡ್ಸೆ ಕೂಡಾ ದೇಶಭಕ್ತ'

By ಐಸಾಕ್ ರಿಚರ್ಡ್, ಮಂಗಳೂರು
|

ಮಂಗಳೂರು, ಡಿ.21: ನಗರದ ಬಲ್ಮಠ ರಸ್ತೆಯಲ್ಲಿರುವ ಅಮ್ನೇಶಿಯ ಪಬ್‌ಗೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಶನಿವಾರ ನಗರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ದೇಶಭಕ್ತಿ ವಿಷಯದಲ್ಲಿ ಗಾಂಧೀಜಿ ಹಾಗೂ ಗೋಡ್ಸೆ ಸಮಾನರು ಎಂದು ವಿವಾದಿತ ಹೇಳಿಕೆ ನೀಡಿದರು.

2009ರ ಜ.24 ರಂದು ಸಂಜೆ ನಗರದ ಅಮ್ನೇಶಿಯ ಪಬ್‌ಗೆ ದಾಳಿ ನಡೆಸಿ ಪಾರ್ಟಿ ನಡೆಸುತ್ತಿದ್ದ ಯುವಕ, ಯುವತಿಯರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. [ರಾಜ್ಯದಲ್ಲಿ ಶ್ರೀರಾಮ ಸೇನೆ ನಿಷೇಧಕ್ಕೆ ಚಿಂತನೆ]

ಈ ಬಗ್ಗೆ 40ಕ್ಕೂ ಹೆಚ್ಚು ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಲ್ಲಿ ಮುತಾಲಿಕ್ ಸೇರಿ 31 ಮಂದಿ ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮುಂದಿನ ವಿಚಾರಣೆಯನ್ನು ಕೋರ್ಟ್ ಜ.27ಕ್ಕೆ ಮುಂದೂಡಿದೆ.

ಗೋಡ್ಸೆ ದೇಶ ಭಕ್ತ: ನ್ಯಾಯಾಲಯದಿಂದ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಉತ್ತರ ಪ್ರದೇಶದ ಬಿಜೆಪಿ ಸಂಸದ ಸಾಕ್ಷಿ ಮಹಾರಜ್ ಇತ್ತೀಚೆಗೆ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, 'ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥೂರಾಮ ಗೋಡ್ಸೆ ಕೂಡಾ ಗಾಂಧೀಜಿಯಷ್ಟೇ ದೇಶಭಕ್ತ. ಗಾಂಧೀಜಿಯನ್ನು ಕೊಂದ ವಿಷಯ ತಪ್ಪು ಅಥವಾ ಸರಿ ಎಂದು ನಾನು ಹೇಳುವುದಿಲ್ಲ. ಆದರೆ ಗೋಡ್ಸೆ ಅಪ್ಪಟ ದೇಶಭಕ್ತ, ಅಖಂಡ ಭಾರತದ ಕಲ್ಪನೆಯನ್ನು ಕಂಡವರು' ಎಂದು ಹೇಳಿದರು. [ಗಾಂಧೀಜಿ ಹಂತಕ ಕುರಿತ ಚಿತ್ರ ಬಿಡುಗಡೆಗೆ ಸಿದ್ಧ]

ಮರು ಮತಾಂತರಕ್ಕೆ ಸಮರ್ಥನೆ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮರು ಮತಾಂತರವನ್ನು ಸಮರ್ಥಿಸಿದ ಮುತಾಲಿಕ್, ಮತಾಂತರಗೊಂಡವರು ಮೂಲತಃ ಹಿಂದೂಗಳೇ. ಅವರು ಮತ್ತೆ ಯಾವುದೇ ಆಮಿಷ ಇಲ್ಲದೆ ಹಿಂದೂ ಧರ್ಮಕ್ಕೆ ಬರುವುದಾದರೆ ಅವರನ್ನು ಸ್ವಾಗತಿಸುತ್ತೇವೆ ಎಂದರು.

ಪಬ್ ದಾಳಿ ಪ್ರಕರಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಮರು ಜೀವ ದೊರೆತಿದ್ದು, ಕಾಂಗ್ರೆಸ್ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಶ್ರೀ ರಾಮ ಸೇನೆ ಸಂಘಟನೆಗೆ ಪ್ರವೀಣ್ ವಾಲ್ಕೆ ಬಂದ ಬಳಿಕ ಸಂಘಟನೆ ವೇಗ ಪಡೆದಿದ್ದು, ಮತ್ತಷ್ಟು ವಿಸ್ತಾರಗೊಳ್ಳಲಿದೆ ಎಂದು ಹೇಳಿದರು. ​

ಕಳೆದ 10 ವರ್ಷಗಳಲ್ಲಿ ಸುಮಾರು 1700 ಮಂದಿಯನ್ನು ಮರು ಮತಾಂತರ ಮೂಲಕ ಹಿಂದೂ ಧರ್ಮಕ್ಕೆ ವಾಪಸ್ ಕರೆಸಿಕೊಳ್ಳುವಲ್ಲಿ ಶ್ರೀರಾಮಸೇನೆ ಯಶಸ್ವಿಯಾಗಿದೆ. ಸೋನಿಯಾ ಗಾಂಧಿ ಅವರು ಕ್ರೈಸ್ತ ಮತ ಪ್ರಚಾರಕ್ಕಾಗಿ ಅನ್ಯ ಮತಗಳನ್ನು ತುಳಿದರು ಎಂದು ಮುತಾಲಿಕ್ ಅಭಿಪ್ರಾಯಪಟ್ಟರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sri Rama Sene Chief Pramod Muthalik has slammed the State Congress Government for re-opening the pub attack case.appearing before the Second JMF Court here on December 20, Saturday in connection with the case, Muthalik also kicked off a controversy on this occasion by stating "Nathuram Godse was equally patriotic as Mahatma Gandhi,"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more