ಬಾಲಿವುಡ್ ನಟ ನಾನಾ ಪಾಟೇಕರ್ ಮಂಗಳೂರಿಗೆ ಬಂದಿದ್ದೇಕೆ?
ಮಂಗಳೂರಿನ ರಾಮಕೃಷ್ಣ ಮಠ ನಗರದಲ್ಲಿ ಹಮ್ಮಿಕೊಂಡಿದ್ದ 'ಸ್ವಚ್ಛ ಭಾರತ್ ಜಾಗೃತಿ ಜಾಥಾ'ಕ್ಕೆ ಜನಪ್ರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಚಾಲನೆ ನೀಡಿದರು.
ಮಂಗಳೂರು, ಫೆಬ್ರವರಿ 12: ಮಂಗಳೂರಿನ ರಾಮಕೃಷ್ಣ ಮಠ ನಗರದಲ್ಲಿ ಹಮ್ಮಿಕೊಂಡಿದ್ದ 'ಸ್ವಚ್ಛ ಭಾರತ್ ಜಾಗೃತಿ ಜಾಥಾ'ಕ್ಕೆ ಜನಪ್ರಿಯ ಬಾಲಿವುಡ್ ನಟ ನಾನಾ ಪಾಟೇಕರ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು'ನಮ್ಮ ಮನಸ್ಸು ಸಕಾರಾತ್ಮಕ ಯೋಚನೆ ಮಾಡುತ್ತಿದ್ದರೆ ನಮ್ಮ ಸುತ್ತ- ಮುತ್ತಲಿನ ಪರಿಸರ ಸ್ವಚ್ಛವಾಗಿರುತ್ತೆ' ಎಂದು ಅಭಿಪ್ರಾಯಪಟ್ಟಿದ್ದಾರೆ. [ಬಂಧಿತ ಶಾರ್ಪ್ ಶೂಟರ್ಸ್ ಗಳಿಂದ ಶ್ರೀರಾಮ ಸೇನೆ ಮುಖ್ಯಸ್ಥನ ಹತ್ಯೆಗೆ ಸಂಚು?]

ಹಂಪನಕಟ್ಟೆಯಲ್ಲಿ ಆರಂಭಗೊಂಡ ಜಾಥಾಕ್ಕೆ ರಸ್ತೆ ಬದಿಯ ಕಂಪೌಂಡ್ ಗೋಡೆಯಲ್ಲಿನ ಮನುಷ್ಯನ ಚಿತ್ರಕ್ಕೆ ಬಣ್ಣ ತುಂಬುವ ಮೂಲಕ ಅವರು ಚಾಲನೆ ನೀಡಿದರು. 'ಸ್ವಚ್ಛತೆ ಕಾಪಾಡುವುದು ನಮ್ಮ ಜವಾಬ್ದಾರಿ. ಆದರೆ ಇಂದು ಸ್ವಚ್ಛತೆಗಾಗಿ ಅಭಿಯಾನ ನಡೆಸುವ ಪರಿಸ್ಥಿತಿ ಬಂದಿರುವುದು ಖೇದಕರ' ಎಂದರು. [ಮಂಗಳೂರು: ಧರಣಿ ನಿರತರ ಬಂಧನ; ಅನಿರ್ಧಿಷ್ಟಾವಧಿ ಜಿಲ್ಲಾ ಬಂದ್‌ಗೆ ಕರೆ]

ಬಳಿಕ ರಾಮಕೃಷ್ಣ ಮಠದ ಸ್ವಾಮೀಜಿಗಳೊಂದಿಗೆ ಜಾಥಾದಲ್ಲಿ ಒಂದಿಷ್ಟು ದೂರ ನಾನಾ ಕೂಡಾ ಹೆಜ್ಜೆ ಹಾಕಿದರು. ಈ ವೇಳೆ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications