ಮೈಸೂರು: ಟ್ರಿಣ್ ಟ್ರಿಣ್ ಯೋಜನೆ ಸೈಕಲ್ ಕಳ್ಳತನ ಆರೋಪಿ ಅಂದರ್

ಮೈಸೂರು, ಜೂನ್ 2 : ಯೋಜನೆ ಜಾರಿಯಾಗುವ ಮುನ್ನವೇ ಕಳುವಾಗಿದ್ದ ಟ್ರಿಣ್ ಟ್ರಿಣ್ ಯೋಜನೆಯ ಸೈಕಲ್ ಕದ್ದ ಚೋರನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. .

ಬಂಧಿತನನ್ನು ಶ್ರೀರಂಗಪಟ್ಟಣ ನಿವಾಸಿ ನಾಗೇಂದ್ರ(38) ಎಂದು ಗುರುತಿಸಲಾಗಿದೆ. ಈತ ಮಾರ್ಚ್ 17ರಂದು ಮೈಸೂರಿನ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಪಾರ್ಕ್ ಮುಂಭಾಗ ಡಾಕಿಂಗ್ ಹಾಬ್ ನಲ್ಲಿ ನಿಲ್ಲಿಸಿದ್ದ ಸೈಕಲ್‌ ಕದ್ದೊಯ್ದಿದ್ದ.

Mysuru Trin Trin bicycles theft; accused arrested

ಈ ಬಗ್ಗೆ ಅಶೋಕ್ ಪುರಂ ಠಾಣೆಯಲ್ಲಿ ದಾಖಲಾಗಿತ್ತು. ಹಾಬ್ ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾ ದೃಶ್ಯದ ಮೂಲಕ ಕಳ್ಳನ ಚಹರೆಯನ್ನು ಪತ್ತೆ ಹಚ್ಚಿದ ಪೊಲೀಸರು ಕಳ್ಳನನ್ನು ಬಂಧಿಸವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಅಶೋಕ್ ಪುರಂ ಪೊಲೀಸ್ ಸಿಬ್ಬಂದಿಗಳಾದ ಮಹದೇವ್, ಆನಂದ್, ಗಿರೀಶ್ ಪಾಲ್ಗೊಂಡಿದ್ದರು. ಬಂಧಿತನಿಂದ ಸೈಕಲ್ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಿಬ್ಬಂದಿಗಳ ಕಾರ್ಯವನ್ನು ಕೆ.ಆರ್.ಎಸಿಪಿ ಮಲ್ಲಿಕ್, ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಶ್ಲಾಘಿಸಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+