ಮಂಗಳೂರು-ಮುಂಬೈ ಐರಾವತ ಬಸ್ ಸೇವೆ ಸ್ಥಗಿತ

ಮಂಗಳೂರು, ಜುಲೈ 06 : ಮಂಗಳೂರು-ಮುಂಬೈ ನಡುವೆ ಸಂಚಾರ ನಡೆಸುತ್ತಿದ್ದ ಕೆಎಸ್ಆರ್‌ಟಿಸಿಯ ಐರಾವತ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಷ್ಟದ ಕಾರಣ ಹೇಳಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಸೆಪ್ಟೆಂಬರ್‌ ನಂತರ ಪುನಃ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

ಮಳೆಗಾಲ ಆರಂಭವಾದ ನಂತರ ಮಂಗಳೂರು-ಮುಂಬೈ ನಡುವೆ ಪ್ರಯಾಣಿಸುವ ಜನರ ಸಂಖ್ಯೆ ಕಡಿಮೆ ಆಗಿದೆ. ಆದ್ದರಿಂದ, ಸಂಸ್ಥೆಗೆ ನಷ್ಟ ಉಂಟಾಗುತ್ತಿದ್ದು ಐರಾವತ ಹವಾನಿಯಂತ್ರಿತ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. [KSRTC ಪ್ರಯಾಣದರ ಕಡಿತ]

ksrtc

ಮಂಗಳೂರು-ಮುಂಬೈ ನಡುವಿನ ಪ್ರತಿ ಟ್ರಿಪ್‌ಗೆ ಸುಮಾರು 90 ಸಾವಿರ ರೂ. ಆದಾಯ ಬರಬೇಕಿತ್ತು. ಆದರೆ, ಈಗ ಅದು 35 ಸಾವಿರಕ್ಕೆ ಕುಸಿತಗೊಂಡಿದೆ. ನಷ್ಟ ಮಾಡಿಕೊಂಡು ಬಸ್ ಓಡಿಸುವುದು ಬೇಡ ಎಂಬ ತೀರ್ಮಾನ ಕೈಗೊಂಡಿರುವ ಸಂಸ್ಥೆ ಸೇವೆ ನಿಲ್ಲಿಸಿದೆ. [ಐರಾವತ ಡೈಮಂಡ್ ಕ್ಲಾಸ್ ಬಸ್ಸಿನ ವಿಶೇಷತೆಗಳು]

ಕೆಎಸ್ಆರ್‌ಟಿಸಿಯ ವಿಭಾಗೀಯ ನಿಯಂತ್ರಕರಾದ ವಿವೇಕಾನಂದ ಹೆಗಡೆ ಅವರು ಈ ಕುರಿತು ಮಾಹಿತಿ ನೀಡಿದ್ದು, ಮುಂಗಾರು ಅವಧಿ ಮುಗಿದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ. ಆಗ ಪುನಃ ಬಸ್ ಸೇವೆಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಹೊಸ ಬಸ್ ಸೇವೆ ಆರಂಭ : ಮಂಗಳೂರು-ಮುಂಬೈ ಮಾರ್ಗದಲ್ಲಿ ನೂತನ ಬಸ್ ಸೇವೆಯನ್ನು ಆರಂಭಿಸುವ ಉದ್ದೇಶವೂ ಕೆಎಸ್ಆರ್‌ಟಿಸಿ ಮುಂದಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವ ಐರಾವತ ಡೈಮಂಡ್‌ ಕ್ಲಾಸ್‌ ಬಸ್ ಸೇವೆಗೆ ಕೆಎಸ್ಆರ್‌ಟಿಸಿ ಕೆಲವು ದಿನಗಳ ಹಿಂದೆ ಚಾಲನೆ ನೀಡಿದೆ. ಈ ಮಾರ್ಗದಲ್ಲಿ ಡೈಮಂಡ್ ಕ್ಲಾಸ್ ಬಸ್ ಸೇವೆ ಆರಂಭಿಸುವ ಉದ್ದೇಶವೂ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+