ರ‍್ಯಾಲಿ ತಡೆಯಲು ರಾಜ್ಯ ಸರಕಾರದಿಂದ ತುರ್ತುಪರಿಸ್ಥಿತಿ : ಸಂಸದ ನಳಿನ್
ಮಂಗಳೂರು, ಸೆಪ್ಟೆಂಬರ್ 5: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ 'ಮಂಗಳೂರು ಚಲೋ' ಬೈಕ್ ರ್ಯಾಲಿಯನ್ನು ತಡೆಯಲು ರಾಜ್ಯ ಸರಕಾರ ಹಿಂಬಾಗಿಲ ಮೂಲಕ ತುರ್ತುಪರಿಸ್ಥಿತಿಯನ್ನು ಹೇರುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.
In Pics : ಮಂಗಳೂರು ಚಲೋ rallyಯನ್ನು ಬುಡದಲ್ಲೇ ಹೊಸಕಿದ ಕಾಂಗ್ರೆಸ್
ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ನಡೆದಂತಹ 11 ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವಂತಹ ಪಿಎಫ್ಐ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಸೆಪ್ಟಂಬರ್ 7 ರಂದು ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದೆ. ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಹಿಂಬಾಗಿಲಿನಿಂದ ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಪ್ರತಿಭಟನಾ ರ್ಯಾಲಿ ತಡೆಯುತ್ತಿದೆ," ಎಂದು ಆರೋಪಿಸಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟದ ಹಕ್ಕಿದ್ದು, ಬಿಜೆಪಿ ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಸರಕಾರದ ಹುನ್ನಾರವನ್ನು ಮೆಟ್ಟಿ ನಿಲ್ಲುವ ಶಕ್ತಿ ಬಿಜೆಪಿ ಪಕ್ಷಕ್ಕಿದೆ ಎಂದು ಅವರು ಹೇಳಿದರು.
'ಮಂಗಳೂರು ಚಲೋ' ಬೈಕ್ ರ್ಯಾಲಿಯನ್ನು ನಡೆಸಿಯೇ ಸಿದ್ಧ ಎಂದು ಈ ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಸೆಪ್ಟಂಬರ್ 12 ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ನಡೆಸಲು ಉದ್ಧೇಶಿಸಿರುವ ಸಾಮರಸ್ಯ ಯಾತ್ರೆಯೂ ಕೂಡಾ ಕೋಮು ಸೂಕ್ಷ್ಮ ಪ್ರದೇಶದಲ್ಲೇ ಸಾಗಲಿಕ್ಕಿದ್ದು, ಅದಕ್ಕೆ ಪೋಲೀಸರು ಹೇಗೆ ಅನುಮತಿ ಕೊಡುತ್ತಾರೆ ಎನ್ನುವುದನ್ನೂ ನಾವು ನೋಡಿಕೊಳ್ಳುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.












Click it and Unblock the Notifications