ಟ್ವೀಟ್ ಗಳಿಂದ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ: ಸಂಸದ ನಳೀನ್

ಮಂಗಳೂರು, ಮೇ 17: ದಕ್ಷಿಣ ಕನ್ನಡ ಕ್ಷೇತ್ರದ ಸಂಸದ 'ಚೌಕಿದಾರ್' ನಳೀನ್ ಕುಮಾರ್ ಕಟೀಲು ಅವರು ತಮ್ಮ ಟ್ವೀಟ್ ಪ್ರಮಾದಕ್ಕೆ ಕ್ಷಮೆಯಾಚಿಸಿದ್ದಾರೆ. ಗೋಡ್ಸೆ, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ ನೀಡುತ್ತಾ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಎಂದು ನೀಡಿ ಟ್ವೀಟ್ ಮಾಡಿ, ಕ್ರೂರ ಕೊಲೆಗಾರ ಯಾರು ಎಂದು ಪ್ರಶ್ನಿಸಿದ್ದರು. ನಳೀನ್ ಅವರ ಟ್ವೀಟ್ ಗೆ ಕಾಂಗ್ರೆಸ್ಸಿಗರಿಂದ ಪ್ರತಿಕ್ರಿಯೆಗಳು ಬಂದಿತ್ತು. ಸ್ಥಳೀಯರು ಕ್ಷೇತ್ರದ ಸಮಸ್ಯೆ ಬಗ್ಗೆ ಮೊದಲು ಗಮನಹರಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಇದಾದ ಬಳಿಕ ಎಚ್ಚೆತ್ತುಕೊಂಡ ನಳೀನ್ ಕುಮಾರ್ ಕಟೀಲ್ ಅವರು ಈಗ ಯೂ ಟರ್ನ್ ಹೊಡೆದಿದ್ದಾರೆ. ನನ್ನ ಟ್ವೀಟ್ ಗಳಿಂದ ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಇತ್ತೀಚಿನ ಟ್ವೀಟ್ ನಲ್ಲಿ ಕ್ಷಮೆ ಕೋರಿದ್ದಾರೆ.

MP Nalin Kumar Kateel apologies for tweet on Rajiv Gandhi

#ChowkidarsPleaseSupportTrueIndology #bringbacktrueindology" ಎಂಬ ಹ್ಯಾಶ್ ಟ್ಯಾಗ್ ಬಳಸಿ ತಮ್ಮ ಖಾತೆಯಲ್ಲಿ ಏನೋ ವ್ಯತ್ಯಾಸವಾಗಿದೆ. ನನ್ನ ಖಾತೆಯನ್ನು ಪುನರ್ ಸ್ಥಾಪಿಸಿ ಎಂದು ಟ್ವಿಟ್ಟರ್ ಗೆ ಸಂಸದ ನಳೀನ್ ಕೋರಿದ್ದಾರೆ.

ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು? ಎಂದು ನಿಳಿನ್​ ಕುಮಾರ್​ ಅವರು ಟ್ವೀಟ್​ ಮಾಡಿದ್ದು, ವಿವಾದದ ಸ್ವರೂಪ ಪಡೆದುಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+