ಮೂಡುಬಿದಿರೆ : ಭಜರಂಗದಳ ಕಾರ್ಯಕರ್ತನಿಗೆ ಬೆದರಿಕೆ ಕರೆ
ಮೂಡುಬಿದಿರೆ, ನವೆಂಬರ್ 02 : ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಬಳಿಕ ಮೂಡಬಿದಿರೆಯಲ್ಲಿ ಜೀವ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಾಟಕ ಕಲಾವಿದ ತೋಡಾರು ನಿವಾಸಿ ವಿಶ್ವನಾಥ ಶೆಟ್ಟಿ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಶುಕ್ರವಾರ ರಾತ್ರಿ ಅನಾಮಧೇಯ ವ್ಯಕ್ತಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ. ವಿಶ್ವನಾಥ ಶೆಟ್ಟಿ ಅವರು ನಾಟಕ ಕಲಾವಿದರಾಗಿದ್ದು, ಭಜರಂಗದಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಆದ್ದರಿಂದ, ಬೆದರಿಕೆ ಕರೆ ಮಾಡಲಾಗಿದೆ. [ಹಿಂದೂ ವಿರೋಧಿಗಳನ್ನು ಕೊಲ್ಲದೆ ಬಿಡಲಾರೆ]

'ನೀನು ಹಿಂದೂ ಸಂಘಟನೆಯಲ್ಲಿ ತೊಡಗುತ್ತೀಯಾ?. ಪ್ರಶಾಂತ್‍ನನ್ನು ಕೊಲೆ ಮಾಡಿದವರು ನಾವೇ. ದನ ಸಾಗಾಟ ಮಾಡುವಾಗ ತಡೆದು ನಿಲ್ಲಿಸುತ್ತೀಯಾ? ನಿನ್ನನ್ನು ಮುಂದಿನ ದಿನದಲ್ಲಿ ಕೊಚ್ಚಿ ಕೊಂದು ಹಾಕುವುದೇ ನನ್ನ ಮೊದಲ ಟಾರ್ಗೆಟ್' ಎಂದು ಬೆದರಿಕೆ ಹಾಕಿದ್ದಾರೆ. [ಪ್ರಶಾಂತ್ ಪೂಜಾರಿ ಹತ್ಯೆಗೆ ಕಾರಣವೇನು?]
ಕರೆ ಬಂದ ನಂಬರ್ ಮತ್ತು ಬೆದರಿಕೆ ಕರೆಯ ವಾಯ್ಸ್ ರೆಕಾರ್ಡಿಂಗ್ ಅನ್ನು ವಿಶ್ವನಾಥ ಶೆಟ್ಟಿ ಅವರು ದೂರಿನ ಜೊತೆ ಪೊಲೀಸರಿಗೆ ಸಲ್ಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಶಾಂತ್ ಪೂಜಾರಿ ಹತ್ಯೆಯಾದ ನಂತರ ಮೂಡಬಿದಿರೆಯ ಸಂಘಪರಿವಾರ ನಾಯಕರು, ಬಿಜೆಪಿ ಮುಖಂಡರುಗಳಿಗೆ ವಿದೇಶದಿಂದ ಬೆದರಿಕೆ ಕರೆಗಳು ಬರುತ್ತಿವೆ. [ಮೂಡುಬಿದಿರೆಗೆ ಸಿಸಿಟಿವಿ ಕಣ್ಗಾವಲಿನ ಅಗತ್ಯವಿದೆ]
ಸಚಿವರಿಗೂ ಕರೆ ಬಂದಿದೆ : ಯುವಜನ ಸೇವಾ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಆರೋಗ್ಯ ಸಚಿವ ಯು.ಟಿ.ಖಾದರ್ ಮತ್ತು ಅರಣ್ಯ ಸಚಿವ ರಮನಾಥ ರೈ ಅವರಿಗೂ ಬೆದರಿಕೆ ಕರೆಗಳು ಬಂದಿವೆ. ಹಿಂದೂ ಯುವಕರನ್ನು ಮುಟ್ಟಿದ್ರೆ ಸಹಿಸಲಾರೆ. ಕರಾವಳಿಯ ಇಸ್ಲಾಂ ಭಯೋತ್ಪಾದಕರಿಗೂ ಇದೊಂದು ಎಚ್ಚರಿಕೆ ಎಂದು ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ.












Click it and Unblock the Notifications