ಕಡಬ-ಮೂಡಬಿದಿರೆ ತಾಲೂಕುಗಳಿಗೆ ಮಾರ್ಚ್ 7 ರಂದು ಅಧಿಕೃತ ಚಾಲನೆ
ಮಂಗಳೂರು, ಮಾರ್ಚ್ 03: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳಿಗೆ ಮಾರ್ಚ್ 7 ರಂದು ಅಧಿಕೃತ ಚಾಲನೆ ದೊರಕಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದಿಂದ ಈಗಾಗಲೇ ಅಧಿಸೂಚನೆಗೊಂಡು ಘೋಷಣೆಯಾಗಿರುವ ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳಿಗೆ ಮಾರ್ಚ್ 7 ರಂದು ಕಂದಾಯ ಸಚಿವ ದೇಶಪಾಂಡೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
10 ಲಕ್ಷ ಜನಸಂಖ್ಯೆ ಹೊಂದಿರುವ ಮಂಗಳೂರು ತಾಲೂಕಿನಲ್ಲಿ ಕೆಲಸದ ಒತ್ತಡ ತೀವ್ರವಾಗಿರುವ ಹಿನ್ನೆಲೆಯಲ್ಲಿ ಇದೀಗ ಉಳ್ಳಾಲ ತಾಲೂಕು ಘೋಷಣೆ ಆ ಒತ್ತಡವನ್ನು ಕಡಿಮೆಗೊಳಿಸಲಿದೆ. ಆಡಳಿತಾತ್ಮಕ ವಿಚಾರದಲ್ಲಿ ಹಾಗೂ ಸರಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವಲ್ಲಿ, ಜನರಿಗೆ ತಲುಪುವಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟರು.

ಮುಂಬರುವ ದಿನಗಳಲ್ಲಿ ಮಿನಿ ವಿಧಾನಸೌಧ, ತಾಲೂಕು ಪಂಚಾಯತ್ ಕಚೇರಿ, ರಿಜಿಸ್ಟ್ರಾರ್ ಕಚೇರಿ, ತಾಲೂಕು ಮಟ್ಟದ ನ್ಯಾಯಾಲಯ, 100 ಬೆಡ್‌ಗಳ ಆಸ್ಪತ್ರೆ, ಕ್ರೀಡಾಂಗಣ, ಅಂಬೇಡ್ಕರ್ ಭವನ ನಿರ್ಮಾಣವಾಗಲಿದ್ದು ನೂತನ ಉಳ್ಳಾಲ ತಾಲೂಕು ಮಂಗಳೂರು ಗ್ರಾಮಾಂತರ/ ಉಳ್ಳಾಲ ತಾಲೂಕು ಆಗಿ ಗುರುತಿಸಲ್ಪಡಲಿದೆ ಎಂದು ಖಾದರ್ ಹೇಳಿದರು.












Click it and Unblock the Notifications