ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಯಕ್ಷಗಾನ ಡಿಪ್ಲೋಮಾ ಕೋರ್ಸ್

|
Google Oneindia Kannada News

ಮಂಗಳೂರು, ಜೂನ್ 15: ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ತೆಂಕುತಿಟ್ಟು ಮತ್ತು ಬಡಗುತಿಟ್ಟಿಗೆ ಸಂಬಂಧಿಸಿದಂತೆ ಆಳ್ವಾಸ್ ಯಕ್ಷಗಾನ ಡಿಪ್ಲೋಮಾ ಕೋರ್ಸನ್ನು ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಿದೆ.

ಸಂಪೂರ್ಣ ಉಚಿತ ಶಿಕ್ಷಣದ ಪೂರ್ಣಾವಧಿ ಎರಡು ವರ್ಷಗಳ ಡಿಪ್ಲೋಮಾ ಕೋರ್ಸ್ ಇದಾಗಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದವರು ಅಥವಾ 16 ರಿಂದ 25 ವಯೋಮಾನದವರು ಈ ಕೋರ್ಸ್ ತೆಗೆದುಕೊಳ್ಳಬಹುದು.

Moodabidre Alva’s to provide free Yakshagana course to interested students

ಯಕ್ಷಗಾನ ಡಿಪ್ಲೋಮಾ ಕೋರ್ಸ್ ನೊಂದಿಗೆ ಕಾಲೇಜು ಶಿಕ್ಷಣವನ್ನು ಕಲಿಯುವ ಹಂಬಲವಿದ್ದವರಿಗೆ ದೂರ ಶಿಕ್ಷಣದಡಿಯಲ್ಲಿ ಉಚಿತವಾಗಿ ಎಸ್.ಎಸ್.ಎಲ್.ಸಿ, ಪಿಯುಸಿ, ಡಿಗ್ರಿ ಕೋರ್ಸನ್ನು ಮಾಡುವ ಸದವಕಾಶವನ್ನು ತೆರೆದಿಟ್ಟಿದೆ. ಸಂಸ್ಥೆಯಿಂದ ಮಾಸಿಕ ವಿದ್ಯಾರ್ಥಿ ವೇತನವನ್ನು ನೀಡುವುದರ ಜೊತೆಗೆ ತೆಂಕುತಿಟ್ಟು ಬಡಗುತಿಟ್ಟನ್ನು ಪ್ರತ್ಯೇಕವಾಗಿ ಕಲಿಯುವ ಕೋರ್ಸ್ ಇದಾಗಿದೆ.

ಪಠ್ಯದ ಪಕ್ಷಿನೋಟ:

ಹಿಮ್ಮಳ ಮತ್ತು ಮುಮ್ಮೇಳ, ಯೋಗ, ಇಂದಿನ ಅಗತ್ಯ ಗಳಿಗೆ ಅನುಗುಣವಾಗಿ ಇಂಗ್ಲಿಷ್ ಕಲಿಕೆ, ರಾಮಾಯಣ ಮತ್ತು ಮಹಾಭಾರತ ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ ಇತರ ಕಾವ್ಯ, ಯಕ್ಷಗಾನಕ್ಕೆ ಪೂರಕವಾಗಿ ಕನ್ನಡ ಮತ್ತು ಸಂಸ್ಕೃತಿ ಬೋಧನೆ, ಕರ್ನಾಟಕ ಸಂಗೀತದ ಪ್ರಾಥಮಿಕ ಬೋಧನೆ, ಯಕ್ಷಗಾನ ಅಧ್ಯಯನ, ಆರು ತಿಂಗಳ ಯೋಗಿತಾ ಕಾರ್ಯ, ಯಕ್ಷಗಾನ ಕೊರಿಯೋಗ್ರಫಿಯ ಅಧ್ಯಯನ, ನಾಡಿನ ಪ್ರಖ್ಯಾತ ಕಲಾವಿದದರಿಂದ ಪ್ರಾತ್ಯಕ್ಷಿಕೆಗಳ ಜತೆಗೆ ಯಕ್ಷಗಾನಧಾರಿತ ನಿರಂತರ ಚಟುವಟಿಕೆಗಳು ಇದರಲ್ಲಿ ಸೇರಿವೆ.

ಆಸಕ್ತರು ಕೂಡಲೇ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಬಹುದು ಹಾಗೂ ಯಕ್ಷಗಾನದಲ್ಲಿ ಡಿಪ್ಲೋಮಾ ಕೋರ್ಸ್ ಉಚಿತವಾಗಿ ಪಡೆಯಬಹುದು.

English summary
The Alav’s Educational institution to provide free Yakshagana course for those interested in the field of Yakshagana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X