ಕಾಂಗ್ರೆಸ್ ಪಿಎಂ ಅಭ್ಯರ್ಥಿಯನ್ನು ಮೋದಿ ತೀರ್ಮಾನ ಮಾಡೋದಲ್ಲ
ಮಂಗಳೂರು, ಮೇ 9: 'ಪ್ರಧಾನಿ ಹುದ್ದೆ ವಹಿಸಿಕೊಳ್ಳಲು ನಾನು ಸಿದ್ಧ' ಎಂದ ರಾಹುಲ್ ಗಾಂಧಿಯವರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೇವಡಿ ಮಾಡಿದ್ದರು. ಈ ಸಂಬಂಧ ಇದೀಗ ಪ್ರಧಾನಿ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, "ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯನ್ನು ನರೇಂದ್ರ ಮೋದಿ ತೀರ್ಮಾನ ಮಾಡೋದಲ್ಲ. ಅದನ್ನು ಕಾಂಗ್ರೆಸ್ ಹಿರಿಯ ನಾಯಕರು ನಿರ್ಧಾರ ಮಾಡುತ್ತಾರೆ. ಬಹುಮತ ಬಂದರೆ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ. ಆದರೆ, ಈ ವಿಚಾರವನ್ನು ಕಾಂಗ್ರೆಸಿನ ಹಿರಿಯ ನಾಯಕರು ನಿರ್ಧರಿಸುತ್ತಾರೆ," ಎಂದು ಅವರು ತೀಕ್ಷ್ಣ ಪ್ರತಿಕ್ರಿಯೆ ನಿಡಿದ್ದಾರೆ.
ಇನ್ನು ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಬಿಂಬಿಸುವ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಅವರು, "ನರೇಂದ್ರ ಮೋದಿ ಹಿರಿಯರನ್ನು ಬಿಟ್ಟು ಪ್ರಧಾನಿಯಾಗಿಲ್ಲವೇ" ಎಂದು ತಿರುಗೇಟು ನೀಡಿದ್ದಾರೆ.

"ಕರ್ನಾಟಕದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಅತೀ ಕೆಟ್ಟ ಸರ್ಕಾರವಾಗಿತ್ತು. 5 ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡಿತ್ತು," ಎಂದು ಕಿಡಿಕಾರಿರುವ ಅವರು, "ಆರೆಸ್ಸೆಸ್- ಬಿಜೆಪಿ ದೇಶವನ್ನು ಹಿಂದು ರಾಷ್ಟ್ರ ಮಾಡಲು ಹೊರಟಿದೆ," ಎಂದಿದ್ದಾರೆ.
"ಮೋದಿ- ಷಾ ಟೀಮ್ ಕರ್ನಾಟಕವನ್ನು ಭ್ರಷ್ಟ ಸರಕಾರ ಎಂದಿದ್ದಾರೆ. ಭ್ರಷ್ಟಾಚಾರ ಆಗಿದ್ದರೆ ಇಷ್ಟು ಅಭಿವೃದ್ಧಿ ಆಗೋಕೆ ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ ಅವರು, "2014 ರಲ್ಲಿ ನರೇಂದ್ರ ಮೋದಿ ಹವಾ ಇತ್ತು. ಆದರೆ ಇಂದು ದೇಶದಲ್ಲಿ ನರೇಂದ್ರ ಮೋದಿ ಪರ ಅಲೆ ಇಲ್ಲ," ಎಂದು ಅವರು ಹೇಳಿದರು.












Click it and Unblock the Notifications