ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರಿಗೆ ಬಂತು ಅಗ್ನಿ ಶಮನ ಮಿಸ್ಟ್‌ ತಂತ್ರಜ್ಞಾನ ಬೈಕ್‌!

|
Google Oneindia Kannada News

ಮಂಗಳೂರು, ಜೂನ್ 08 : ಸಣ್ಣ-ಪುಟ್ಟ ಬೆಂಕಿ ಅವಘಡದ ವೇಳೆ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪುತ್ತೂರು ಅಗ್ನಿಶಾಮಕ ಠಾಣೆಗೆ ಮಿಸ್ಟ್ ತಂತ್ರಜ್ಞಾನದ ಬುಲೆಟ್‌ ಮಾದರಿಯ ಬೈಕ್ ಕಾಲಿಟ್ಟಿದೆ.

ತುರ್ತು ಅಗ್ನಿಶಮನದ ಸಂದರ್ಭ, ಇಕ್ಕಟ್ಟಾದ ಸ್ಥಳದಲ್ಲಿ ಸಂಚಾರಕ್ಕೆ ಈ ಬುಲೆಟ್ ಬೈಕ್ ಬಳಕೆಯಾಗಲಿದೆ. 350 ಸಿಸಿ ಸಾಮರ್ಥ್ಯದ ರಾಯಲ್ ಎನ್ಫೀಲ್ಡ್ ಬೈಕ್ ನ್ನು ಬೆಂಕಿ ನಂದಕ ಬುಲೆಟ್ ಎಂದು ನಾಮಕರಣ ಮಾಡಲಾಗಿದೆ.

ಈಗಾಗಲೇ ಎರಡು ಫೈರ್ ಟೆಂಡರ್ ಮತ್ತು ಒಂದು ರಿಸ್ಕೀ ಟೆಂಡರ್ ವಾಹನ ಇರುವ ಪುತ್ತೂರು ಅಗ್ನಿಶಾಮಕ ಠಾಣೆಗೆ ನಾಲ್ಕನೆಯ ವಾಹನವಾಗಿ ಈ ಬುಲೆಟ್ ಸೇರ್ಪಡೆಗೊಂಡಿದೆ. ಹಾಗಾದರೆ ಇದರ ವಿಶೇಷತೆಗಳೇನು?, ಇದರ ಬಳಕೆ ಹೇಗೆ ಮತ್ತು ಎಲ್ಲಿ ಎಂಬುವುದನ್ನು ತಿಳಿಯಲು ಮುಂದೆ ಓದಿ..

ಈ ಬುಲೆಟ್‌ ನಲ್ಲಿರುವ ವಿಶೇಷತೆಗಳೇನು?

ಈ ಬುಲೆಟ್‌ ನಲ್ಲಿರುವ ವಿಶೇಷತೆಗಳೇನು?

ರಾಯಲ್‌ ಎನ್‌ಫೀಲ್ಡ್‌ನ 350 ಸಿಸಿ ಸಾಮರ್ಥ್ಯದ ಬೈಕ್ ಅನ್ನು ಬೆಂಕಿ ನಂದಕ ಬುಲೆಟ್‌ ಆಗಿ ಪರಿವರ್ತಿಸಲಾಗಿದೆ. ಬೈಕ್ ನ ಹಿಂಭಾಗದಲ್ಲಿ ಹತ್ತು ಲೀಟರ್‌ ಸಾಮರ್ಥ್ಯದ ಫೋಮ್(ದ್ರಾವಣ) ತುಂಬಿರುವ ಅಗ್ನಿಶಮನ ಉಪಕರಣಗಳನ್ನು ಅಳವಡಿಸಲಾಗಿದೆ. ಅದರ ಸುತ್ತ ಸಣ್ಣ ಗಾತ್ರದ 2.ಕೆ.ಜಿ ಸಾಮರ್ಥ್ಯದ ಏರ್‌ ಸಿಲಿಂಡರ್‌ ಇದೆ. ಪಕ್ಕದಲ್ಲಿರುವ ಹೈಡ್ರಾಲಿಕ್ ಉಪಕರಣ ಸಿಲಿಂಡರ್‌ ಒಳಗಿನ ದ್ರಾವಣವನ್ನು ಹೊರಕ್ಕೆ ಚಿಮ್ಮಿಸಲು ಸಹಾಯ ಮಾಡುತ್ತದೆ. ಜತೆಗೆ ಬೈಕ್ ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸೈರನ್‌, ಧ್ವನಿವರ್ಧಕ, ಕೆಂಪು ದೀಪಗಳಿವೆ.

ಇದರ ಬಳಕೆ ಹೇಗೆ?

ಇದರ ಬಳಕೆ ಹೇಗೆ?

ಈ ಬೈಕ್ ನಲ್ಲಿ ಚಾಲಕ, ಹಿಂಬದ ಸವಾರ ಕುಳಿತುಕೊಳ್ಳಬಹುದು. ಕಾರ್ಯಾಚರಣೆ ಸಂದರ್ಭ ಬೈಕ್ ನ ಹಿಂಭಾಗದಲ್ಲಿರುವ ಎರಡು ಸಿಲಿಂಡರ್‌ ತೆಗೆದು ಬೆನ್ನಿಗೆ ನೇತು ಹಾಕಲು ಸಾಧ್ಯವಿದೆ. ಸಿಲಿಂಡರ್‌ ಜತೆಗಿನ ಗನ್ ಟ್ರಗರ್ ಅದುಮಿದರೆ, 25 ರಿಂದ 35 ಅಡಿಯಷ್ಟು ದೂರ ಅಗ್ನಿ ನಿಯಂತ್ರಣ ದ್ರಾವಣ ಹೊರಕ್ಕೆ ಚಿಮ್ಮಿ, ಬೆಂಕಿ ನಂದಿಸಲು ಸಾಧ್ಯವಾಗುತ್ತದೆ.

ಇದರ ಬಳಕೆ ಕಷ್ಟ

ಇದರ ಬಳಕೆ ಕಷ್ಟ

ಬುಲೆಟ್‌ ಪ್ರಯೋಜನ ಅಂದರೂ, ಅದರ ಬಳಕೆ ಸುಲಭ ಅಲ್ಲ. 350 ಸಿಸಿ ಬೈಕ್ ನಲ್ಲಿ ಸವಾರ ಸೇರಿ ಇಬ್ಬರು ಕುಳಿತುಕೊಳ್ಳಲು ಸ್ಥಳ ಇದ್ದರೂ, ಅಗ್ನಿ ನಿಯಂತ್ರಣ ಸಾಧನ ಸೇರಿದರೆ ಒಟ್ಟು ತೂಕ 500 ಕೆ.ಜಿ ದಾಟುತ್ತದೆ. ಹಾಗಾಗಿ ಎಕ್ಸ್‌ ಪರ್ಟ್ ಗಳೇ ಬೈಕ್ ಚಲಾಯಿಸಬೇಕಷ್ಟೆ. ಏರು ಮಾರ್ಗದಲ್ಲಿ ಬೈಕ್ ನಿಲ್ಲಿಸಿದರೆ, ಸವಾರನಿಗೆ ಭಾರ ತಡೆದುಕೊಳ್ಳುವ ಶಕ್ತಿ ಬೇಕು. ಇಲ್ಲದಿದ್ದರೆ ಪಲ್ಟಿ. ಆಕಸ್ಮಿಕವಾಗಿ ಬಿದ್ದರೆ, ಹಿಂಬದಿ ಸವಾರನಿಗೆ ಗಾಯ ಉಂಟಾಗುವುದು ಖಂಡಿತ. ಅಪಾಯದ ಸಂದರ್ಭ ಹಿಂಬದಿ ಸವಾರ ಪಾರಾಗಲು ಬೇಕಾದ ವ್ಯವಸ್ಥೆ ಇಲ್ಲದಿರುವುದು ಅಪಾಯಕ್ಕೆ ಮುಖ್ಯ ಕಾರಣ.

ಬಳಕೆ ಎಲ್ಲೆಲ್ಲಿ?

ಬಳಕೆ ಎಲ್ಲೆಲ್ಲಿ?

ಸಣ್ಣ ಪ್ರಮಾಣದ ಗ್ಯಾಸ್‌ ಸೋರಿಕೆ, ವಿದ್ಯುತ್‌ ಶಾರ್ಟ್‌ ಸರ್ಕ್ಯೂ, ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಹಾಗೂ ಇತರೆ ಬೆಂಕಿ ಅವಘಡ ಸಂಭವಿಸಿದಾಗ ಇದನ್ನು ಬಳಸಲಾಗುತ್ತದೆ. ಅಗ್ನಿಶಾಮಕ ದಳದ ದೊಡ್ಡ ಗಾತ್ರದ ವಾಹನಗಳು ಇಕ್ಕಟ್ಟಾದ ಸ್ಥಳದಲ್ಲಿ ಸಂಚರಿಸುವುದು ತ್ರಾಸದಾಯಕವಾಗಿರುವ ಕಾರಣ, ಈ ಬುಲೆಟ್‌ ವಾಹನ ಶೀಘ್ರ ಸ್ಪಂದನೆಗೆ ಅನುಕೂಲ ಎಂಬ ಕಾರಣ ಹೊಂದಲಾಗಿದೆ.

English summary
The lastest Mist Technology Royal Enfield bike of 350 CC enters into Puttur Fire Brigade station. The bike is launched to go faster and easier to those areas were it would be difficult for trucks to enter
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X