ವಾಯುಸೇನೆ ವಿಮಾನದಲ್ಲಿದ್ದರೆ ಮಂಗಳೂರ ಸೈನಿಕ?

ಮಂಗಳೂರು, ಜುಲೈ, 23: ನಾಪತ್ತೆಯಾದ ವಾಯುಸೇನೆ ವಿಮಾನದಲ್ಲಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಏಕನಾಥ್ ಶೆಟ್ಟಿ ಎಂಬ ವ್ಯಕ್ತಿಯೊಬ್ಬರು ಇದ್ದರು ಎಂಬ ಮಾಹಿತಿ ತಿಳಿದು ಬಂದಿದೆ.

ಆದರೆ ಈ ಕುರಿತು ಭಾರತೀಯ ಸೇನೆಯಿಂದ ಯಾವುದೇ ರೀತಿಯ ಅಧಿಕೃತ ಹೇಳಿಕೆ ಲಭ್ಯವಾಗಿಲ್ಲ. ಏಕನಾಥ್ ಶೆಟ್ಟಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.[ತಾಂತ್ರಿಕ ದೋಷಗಳಿದ್ದರೂ ವಿಮಾನ ಟೇಕಾಫ್ ಆಗಿತ್ತೆ?]

mangaluru
Photo Credit:

ವಿಮಾನ ಟೇಕಾಫ್ ಆಗುವ ಮುನ್ನ ತಮ್ಮ ಮನೆಗೆ ಕರೆ ಮಾಡಿ, ತಾನು ಈ ವಿಮಾನದಲ್ಲಿ ಇರುವುದಾಗಿ ಅವರು ತಮ್ಮ ಪತ್ನಿಗೆ ತಿಳಿಸಿದ್ದರು. ಗುರುವಾಯನಕೆರೆ ಮೂಲದ 48 ವರ್ಷದ ಏಕನಾಥ ಶೆಟ್ಟಿಯವರು ಸೇನೆಯಿಂದ ನಿವೃತ್ತರಾದ ಬಳಿಕವೂ ಸೇವೆಯಲ್ಲಿ ಮುಂದುವರಿದ್ದರು. ಮನೆಯವರು ಶೆಟ್ಟಿ ಅವರನ್ನು ಸಂಪರ್ಕ ಮಾಡಲು ಸಾಧ್ಯವಾಗಿಲ್ಲ.[29 ಜನರಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ]

mangaluru

ಶುಕ್ರವಾರ ಬೆಳಗ್ಗೆ ಚೆನ್ನೈನ ತಾಂಬರಮ್ ಹೊರಟಿದ್ದ ವಿಮಾನ ಬಂಗಾಳ ಕೊಲ್ಲಿ ಮೇಲೆ ಹಾರುತ್ತಿದ್ದಾಗ ನಾಪತ್ತೆಯಾಗಿದೆ. ನಿನ್ನೆ ಬೆಳಗ್ಗೆಯಿಂದ ಆ ಹಿಂದೆ ಕಂಡು ಕೇಳರಿಯದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದರೂ ವಾಯುಪಡೆಯ ಈ ವಿಮಾನ ಪತ್ತೆಯಾಗಿಲ್ಲ. ಆರು ಜನ ಸಿಬ್ಬಂದಿ ಸೇರಿದಂತೆ ಸುಮಾರು 29 ಜನರಿದ್ದ ವಿಮಾನ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+