ಮಂಗಳೂರು: ಶರತ್ ಹತ್ಯೆ ಆರೋಪಿ ಸಂಬಂಧಿಕರ ಮೇಲೆ ಹಲ್ಲೆ
ಮಂಗಳೂರು, ಸೆಪ್ಟೆಂಬರ್ 25 : ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಯ ಸಂಬಂಧಿಗಳ ಮೇಲೆ ದುಷ್ಕರ್ಮಿ ಹಲ್ಲೆ ಮಾಡಿದ್ದಾರೆ.
ಉಪ್ಪಿನಂಗಡಿಯಲ್ಲಿರುವ ಶರತ್ ಮಡಿವಾಳ ಹತ್ಯೆ ಆರೋಪಿ ಸಂಬಂಧಿ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಮನೆಯಲ್ಲಿದ್ದ ಮಹಿಳೆ ಮತ್ತು ಇನ್ನೋರ್ವ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆಯಿಂದಾಗಿ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪುಗಳನ್ನು ಚದುರಿಸಿದ ಪ್ರಸಂಗವೂ ನಡೆದಿದೆ.
ಝಕಾರಿಯಾ(35) ಮತ್ತು ಮನೆಯೊಳಗಿದ್ದ ಸಂಬಂಧಿ ಜಮೀಲಾ (40) ಎಂಬವರ ಮೇಲೆ ಹಲ್ಲೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಶರತ್, ಅಶ್ವತ್ಥ್, ರಿತೇಶ್ ಎನ್ನುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜುಲೈ 4ರಂದು ಶರತ್ ಮಡಿವಾಳ್ ಹತ್ಯೆ ನಡೆದಿತ್ತು. ಶರತ್ ಹತ್ಯೆಯ ಪ್ರಮುಖ ಆರೋಪಿ ಇಂತಿಯಾಜ್ ಪೊಲೀಸರ ಕೈಗೆ ಸಿಗದೇ ವಿದೇಶದಲ್ಲಿ ತಲೆಮರಿಸಿಕೊಂಡಿದ್ದಾನೆ.












Click it and Unblock the Notifications