ಜೋಡುಪಾಲ ಭೂ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಯು.ಟಿ ಖಾದರ್

ಮಂಗಳೂರು, ಆಗಸ್ಟ್ 18: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಂಪಾಜೆ ಸಮೀಪದ ಜೋಡುಪಾಲದಲ್ಲಿ ಸಂಭವಿಸಿದ ಗುಡ್ಡ ಕುಸಿತ ಘಟನೆಯಲ್ಲಿ ಸುಮಾರು 300 ಜುನರು ನಿರಾಶ್ರಿತರಾಗಿದ್ದಾರೆ. ಮನೆ ಮಠ ಕಳೆದುಕೊಂಡ ಈ ನಿರಾಶ್ರಿತರಿಗೆ ಸುಳ್ಯ ತಾಲ್ಲೂಕಿನ ಆರಂತೋಡು ತೆಕ್ಕಿಲ ಸಮುದಾಯ ಭವನದಲ್ಲಿ ಆಶ್ರಯ ನೀಡಲಾಗಿದೆ.

ಜೋಡುಪಾಲದ ಗುಡ್ಡ ಕುಸಿತದ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದರು. ನಂತರ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದ ಸಚಿವ ಯು.ಟಿ.ಖಾದರ್ ಸಂತ್ರಸ್ತರಿಗೆ ಮಾತನಾಡಿ ಧೈರ್ಯ ತುಂಬಿದರು. ಪರಿಸ್ಥತಿ ತಿಳಿಗೊಳ್ಳುತ್ತಿದ್ದಂತೆ ನಿರಾಶ್ರಿತರಿಗೆ ಹಾಗೂ ಸಾವಿಗೀಡಾದ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ನೀಡುವುದಾಗಿ ಅವರು ತಿಳಿಸಿದರು.

Minister U T Khadar Visited Jodupala landslide spot

ಕಳೆದ ಶನಿವಾರ ಮಂಗಳೂರಿನಿಂದ 8 ಮಂದಿ ಸದಸ್ಯರ ಕುಟುಂಬ ಕೇರಳ ತ್ರಿಶ್ಯೂರಿನ ಡಿವೈನ್ ರಿಟ್ರೀಟ್ ಸೆಂಟರ್ ಗೆ ಪ್ರಾರ್ಥನೆಗೆ ತೆರಳಿತ್ತು. ಆದರೆ ಅಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಪರಿಸ್ಥತಿ ಹಿನ್ನೆಲ್ಲೆಯಲ್ಲಿ ರಿಟ್ರೀಟ್ ಸೆಂಟರ್ ಸಿಲುಕಿಕೊಂಡಿದ್ದಾರೆ . ಅಪಾಯದಲ್ಲಿ ಸಿಲುಕಿದವರನ್ನುಕಂಬ್ಲಪದವು ನಿವಾಸಿ ರವಿಕುಟಿನ್ಹ, ಸ್ಟೀವನ್ ಕುಟಿನ್ಹ, ಮುಡಿಪು ಸುರೇಶ್ ಪ್ರಕಾಶ್, ವಿಟ್ಲದ ಸುನಿಲ್, ವಿಜಯಡ್ಕದ ಫಿಲಿಪ್ ಡಿಸೋಜಾ, ಪತ್ನಿ ಹಾಗೂ ಇಬ್ಬರು ಮಕ್ಕಳು ಎಂದು ಹೇಳಾಗಿದೆ.

ಕೇರಳದ ತ್ರಿಶ್ಶೂರ್ ಮುರಿಂಗೂರು ಬಳಿ ಈ ರಿಟ್ರೀಟ್ ಸೆಂಟರ್ ಇದ್ದು ರಿಟ್ರೀಟ್ ಸೆಂಟರ್ ಸುತ್ತಲೂ ಪ್ರವಾಹದಿಂದಾಗಿ ಹೊರಗಿನ ಸಂಪರ್ಕ ಕಡಿತ ಗೊಂಡಿದೆ. ಆಹಾರ ಹಾಗೂ ಹೊರಗಿನ ಸಂಪರ್ಕ ದೊರೆಯದೆ ಕಂಗಾಲಾಗಿರುವ 8 ಮಂದಿ ಸಹಾಯ ಹಸ್ತಕ್ಕಾಗಿ ಸಚಿವ ಯು.ಟಿ.ಖಾದರ್, ಮಾಜಿ ಶಾಸಕ ಜೆ.ಆರ್.ಲೋಬೊರನ್ನು ಸಂಪರ್ಕಿಸಿದ್ದಾರೆ. ಅದಲ್ಲದೇ ಈ ರಿಟ್ರೀಟ್ ಸೆಂಟರ್ ನಲ್ಲಿ ಮಂಗಳೂರಿನ ಇನ್ನೂ 200 ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದ್ದು ಅವರು ಕೂಡ ರಕ್ಷಣೆಗೆ ಮಾಜಿ ಶಾಸಕ ಜೆ ಆರ್ ಲೋಬೋ ಅವರನ್ನು ಸಂಪರ್ಕಿಸಿದ್ದಾರೆ.

Minister U T Khadar Visited Jodupala landslide spot

ರಿಟ್ರಿಟ್ ಸೆಂಟರ್ ನಲ್ಲಿ ಸಿಲುಕಿದವರ ರಕ್ಷಣೆಗೆ ಸಚಿವ ಯು.ಟಿ.ಖಾದರ್ ಹಾಗೂ ಮಾಜಿ ಶಾಸಕ ಜೆ.ಆರ್.ಲೋಬೋ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+