ಮಂಗಳೂರಿನಲ್ಲಿ ವಿನೂತನ ಪರಿಸರ ಜಾಗೃತಿ ಕಾರ್ಯಕ್ರಮ
ಮಂಗಳೂರು, ಜೂನ್ 3 : ಕಳೆದ ಮೂರು ವರ್ಷಗಳಲ್ಲಿ ಅಭಿವೃದ್ಧಿಯ ಕಾರಣಕ್ಕಾಗಿ 140 ಮರಗಳನ್ನು ಕಡಿಯಲಾಗಿದೆ. ಇದರಿಂದ ಆಗಿರುವ ನಷ್ಟವನ್ನು ಸರಿತೂಗಿಸಲು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್ ಗಳಲ್ಲಿ ಕನಿಷ್ಠ ತಲಾ 25ರಂತೆ ಒಟ್ಟು 1,500 ಗಿಡಗಳನ್ನು ನೆಡುವ ಮೂಲಕ ಪರಿಸರ ಸಮತೋಲನ ಕಾಪಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.
ಜೂನ್ 5ರಂದು ನಗರದ ಪುರಭವನದಲ್ಲಿ ಸಾಂಕೇತಿಕವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಆಯಾ ವಾರ್ಡ್ ನ ಸದಸ್ಯರ ಮಾರ್ಗದರ್ಶನದಲ್ಲಿ ಆರೋಗ್ಯ ನಿರೀಕ್ಷಕರು ಈ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಿದ್ದಾರೆ ಎಂದವರು ಹೇಳಿದರು.[ಸುಬ್ರಮಣ್ಯ ಬಳಿ ನದಿಯಲ್ಲಿ ಮುಳುಗಿ ಮಾವ ಅಳಿಯ ಸಾವು]

ದೇಶದಲ್ಲಿನ 4041 ನಗರ ಪ್ರದೇಶಗಳಲ್ಲಿ ಮೂಲದಲ್ಲೇ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಲು ಉದ್ದೇಶಿಸಲಾಗಿದೆ. ಇದರಂದು ಜೂ. 5ರಂದು ಮನಪಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರಿಗೆ ಪ್ರತಿಜ್ಞೆ ನೀಡು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್ ಹೇಳಿದರು.
ಮಳೆಗಾದಲ್ಲಿ ಸೂಕ್ಷ್ಮ ಜೀವಿಗಳು ಹಾಗೂ ರೋಗ ವಾಹಕಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ವಿಶೇಷವಾಗಿ ಹೊಟೇಲ್ ಮಾಲಕರು ಗಮನ ಹರಿಸಬೇಕು
ಹೊಟೇಲ್ ಮಾಲಕರು ಗ್ರಾಹಕರಿಗೆ ಬಿಸಿ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು ಎಂದರು.
ಕಳೆದ ಬಾರಿ ಮನಪಾ ವತಿಯಿಂದ ಹಲವು ಬಾರಿ ನಗರದ ಕೆಲವೆಡೆ ಹೊಟೇಲ್ ಗಳಿಗೆ ದಾಳಿ ನಡೆಸಲಾಗಿದೆ. ಆದ್ದರಿಂದ ಈ ಬಾರಿ ಅದಕ್ಕೆ ಅವಕಾಶ ನೀಡದೆ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.












Click it and Unblock the Notifications