ಮಂಗಳೂರಿನ ಕದ್ರಿಯಲ್ಲಿ ಮಾವು - ಹಲಸಿನ ಘಮ ಘಮ
ತೋಟಗಾರಿಕೆ ಇಲಾಖೆ ಹಾಗು ಕರ್ನಾಟಕ ರಾಜ್ಯ ಅಭಿವೃದ್ಧಿ ಮಾರುಕಟ್ಟೆ ನಿಗಮದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಿನ್ನೆ ಯಿಂದ ಮಾವು-ಹಲಸಿನ ಮೇಳ ಆರಂಭವಾಗಿದ್ದು, ಮೇ 25 ರವರೆಗೂ ನಡೆಯಲಿದೆ.
ಮಂಗಳೂರು, ಮೇ 20: ಹಸಿದು ಹಲಸು, ಉಂಡು ಮಾವು ಅನ್ನೋದು ಗಾದೆ. ಆದರೆ ಹಸಿದಾಗಲೂ, ಹೊಟ್ಟೆ ತುಂಬಿದಾಗಲೂ ತಿನ್ನಬೇಕೆನ್ನಿಸುವ ಘಮ ಗಮ ಪರಿಮಳ ಬೀರುವ ಈ ಹಣ್ಣುಗಳು ಇದೀಗ ಎಲ್ಲೆಡೆ ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಾವು ಮತ್ತು ಹಲಸಿನ ಮೇಳಗಳು ಈಗಾಗಲೇ ಹಲವೆಡೆ ನಡೆಯುತ್ತಿದ್ದು, ಕದ್ರಿಯಲ್ಲೂ ಮಾವು-ಹಲಸಿನ ಮೇಳದ ಘಮ ಹರಡಿದೆ.
ತೋಟಗಾರಿಕೆ ಇಲಾಖೆ ಹಾಗು ಕರ್ನಾಟಕ ರಾಜ್ಯ ಅಭಿವೃದ್ಧಿ ಮಾರುಕಟ್ಟೆ ನಿಗಮದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಿನ್ನೆ (ಮೇ 19)ಯಿಂದ ಮೇಳ ಆರಂಭವಾಗಿದ್ದು ಮೇ 25 ರವರೆಗೂ ನಡೆಯಲಿದೆ. ಮಾವು ಹಾಗೂ ಹಲಸಿನ ಮೇಳಕ್ಕೆ ನೂರಾರು ಜನರು ಸಾಕ್ಷಿಯಾಗಲಿದ್ದಾರೆ.[ಮೈಸೂರಿನಲ್ಲಿ ಹಣ್ಣುಗಳ ರಾಜನ ಕಾರುಬಾರು ಬಲು ಜೋರು]
ಹತ್ತಾರು ತಳಿಗಳ ಮಾವು ಮತ್ತು ಹಲಸುಗಳು ಪ್ರದರ್ಶನವೂ ಇದ್ದು, ಆರಂಭದ ದಿನವೇ ಗ್ರಾಹಕರು ಅಪರೂಪದ ಹಣ್ಣುಗಳನ್ನು ಕೊಳ್ಳಲು ಮುಗಿಬಿದ್ದ ದೃಶ್ಯ ಕಂಡುಬರುತ್ತಿತ್ತು.[ಮೈಸೂರಿನಲ್ಲಿ ಆರಂಭವಾಗಿದೆ ಮಾವು ಮೇಳ]
ಈ ಬಗ್ಗೆ ಮಾತನಾಡಿದ ಮಂಗಳೂರು ಉಸ್ತುವಾರಿ ಸಚಿವ ರಮಾನಾಥ ರೈ, 'ರೈತರು ಬೆಳೆದ ಬೆಳೆಗಳಿಗೆ ನೇರ ಮಾರುಕಟ್ಟೆ ಒದಗಿಸುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಇಂತಹ ಮೇಳವನ್ನು ಆಯೋಜಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮಾವು ಮತ್ತು ಹಲಸು ಲಾಭದಾಯಕ ಬೆಳೆಯಾಗಿ ಗುರುತಿಸಿಕೊಂಡಿದೆ. ಹೆಚ್ಚಿನ ರೈತರು ಇದರಲ್ಲಿ ತೊಡಗಿಸಿಕೊಂಡು ಪ್ರಯೋಜನ ಪಡೆಯುತ್ತಿದ್ದಾರೆ' ಎಂದರು.[ಕದ್ರಿಯಲ್ಲಿ ಮೇ 19 -25 ರವರೆಗೆ ಮಾವು ಮತ್ತು ಹಲಸು ಮೇಳ]

ವಿವಿಧ ಜಿಲ್ಲೆಯ ರೈತರು ಭಾಗಿ
ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ರೈತರು, ಮಾವು ಮತ್ತು ಹಲಸಿನ ಮೇಳದಲ್ಲಿ ಪಾಲ್ಗೊಂಡು ತಾವು ಬೆಳೆದ ವಿವಿಧ ಜಾತಿಯ ಮಾವು-ಹಲಸನ್ನು ಮರಾಟ ಮಾಡುತ್ತಿದ್ದಾರೆ.

ತರಹೇವಾರಿ ಮಾವು
ಅಲ್ಪೋನ್ಸ್, ನೀಲಂ, ಬೈಗನ್ ಪಲ್ಲಿ, ಕೈಸರ್, ಬಾದಾಮ್, ಮಲ್ಲಿಕಾ, ಸೆಂಡೂರ್, ದೇಹಾರಿ, ಮಲ್ಗೋವಾ, ತೋತಾಪುರಿ, ದಿಲ್ಪಸಂದ್, ಕೇಸರ್ ಸೇರಿದಂತೆ ಹಲವು ಬಗೆಯ ಮಾವುಗಳು ಮೇಳದಲ್ಲಿವೆ.

ಹಲಸಿಗೂ ಬರವಿಲ್ಲ
ಚಂದ್ರ ಹಲಸು, ಭೈರಸಂದ್ರ, ಸ್ವರ್ಣ, ತೂಬುಗೆರೆ, ಸಕ್ರೆಪಟ್ನ, ಚನ್ನರಾಯಪಟ್ನ, ರುದ್ರಾಕ್ಷಿ ಸೇರಿದಂತೆ ಹಲವು ತಳಿಯ, ಬಾಯಲ್ಲಿ ನೀರೂರಿಸುವ ಹಲಸುಗಳು ಗ್ರಾಹಕರಿಗಾಗಿ ಕಾದಿವೆ.

ಕದ್ರಿ ಉದ್ಯಾನವನದ ತುಂಬ ಘಮ ಘಮ
ಬಗೆ ಬಗೆಯ ಹಲಸು, ಮಾವಿನ ಹಣ್ಣುಗಳ ರಾಶಿಯ ಅಂಗಣವಾಗಿ ಪರಿವರ್ತನೆಗೊಂಡಿದೆ ಕದ್ರಿ ಉದ್ಯಾನವನ. ಘಮ್ಮನ್ನುವ ಈ ತಾಣಕ್ಕೆ ದಿನ ದಿನವೂ ಜಮಾಯಿಸುತ್ತಿರುವ ಹಣ್ಣುಪ್ರಿಯರು ತಮ್ಮಿಷ್ಟದ ಹಣ್ಣನ್ನು ಕೊಂಡು ಸವಿಯುತ್ತಿದ್ದಾರೆ.

ಇನ್ನೊಂದು ವಾರ ಮೇಳ
ಮೇಳ ಇನ್ನೂ ಆರು ದಿನ ನಡೆಯಲಿದ್ದು, ಒಟ್ಟು ಒಂದು ವಾರದ ಮೇಳ ಇದಾಗಿದೆ. ಅಪರೂಪದ ಜಾತಿಯ ಹಣ್ಣಿನ ಮಾರಾಟ, ಖರೀದಿಗೆ ಅವಕಾಶವಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆ ಮಧ್ಯವರ್ತಿಗಳ ಹಾವಳಿಗೆ ತುತ್ತಾಗಬಾರದೆಂಬ ಕಾರಣಕ್ಕಾಗಿ ಇಂಥ ಮೇಳಗಳು ನಡೆಯುತ್ತಿವೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications