ಮಂಗಳೂರು ಹಿಂಸಾಚಾರ: ಸಿಸಿಟಿವಿ ದೃಶ್ಯಗಳು ಹೇಳುತ್ತೆ ಹೊಸ ಕಥೆಯೊಂದನ್ನಾ!
Recommended Video
ಮಂಗಳೂರು, ಡಿ 24: ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ದದ ಪ್ರತಿಭಟನೆ, ಇದ್ದಕ್ಕಿದ್ದಂತೇ, ಗೋಲಿಬಾರ್ ನಲ್ಲಿ ಇಬ್ಬರನ್ನು ಬಲಿತೆಗೆದುಕೊಂಡಿತು ಎಂದರೆ, ಇದರ ಹಿಂದೆ ಷಡ್ಯಂತ್ರವಿತ್ತೇ ಅಥವಾ ಇದೊಂದು ಪೂರ್ವನಿಯೋಜಿತವೇ ಎನ್ನುವ ಸಂಶಯ ಕಾಡುತ್ತಿತ್ತು.
ಈಗ, ಮಂಗಳೂರು ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ಫುಟೇಜ್ ಮತ್ತು ಫೋಟೋಗಳನ್ನು ನೋಡಿದರೆ, ಈ ಸಂಶಯೆಕ್ಕೆ ಪುಷ್ಟಿ ನೀಡುವಂತಿದೆ. ಫುಟೇಜ್ ಪ್ರಕಾರ, ಗೂಡ್ಸ್ ಆಟೋದಲ್ಲಿ ಪ್ರತಿಭಟನಾಕಾರರು ಕಲ್ಲು ತರಿಸಿಕೊಂಡಿದ್ದು ಸ್ಪಷ್ಟವಾಗಿದೆ.
ಸಿಎಎ ವಿರುದ್ಧ ನಡೆದ ಹೋರಾಟದ ಬಗ್ಗೆ ಯಾವುದೇ ಮಾಹಿತಿಗಳಿದ್ದರೆ ಪೊಲೀಸರ ಜೊತೆ ಹಂಚಿಕೊಳ್ಳಬಹುದು. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಪೊಲೀಸರು, ಸಾಮಾಜಿಕ ತಾಣದ ಮೂಲಕ ಮನವಿ ಮಾಡಿದ್ದರು.
ಮಂಗಳೂರು ಗಲಭೆ ವಿಚಾರದಲ್ಲಿ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲೂ ಹಲವು ಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈಮೇಲ್ - [email protected] ಅಥವಾ ವಾಟ್ಸಾಪ್ ಸಂಖ್ಯೆ 9480802327 ಮೂಲಕ ಮಾಹಿತಿ ನೀಡಬಹುದೆಂದು ಮಂಗಳೂರು ಪೊಲೀಸರು ಹೇಳಿದ್ದರು.

ಕಾಂಗ್ರೆಸ್ಸಿನಿಂದ ಏಳೂವರೆ ಲಕ್ಷ
ಗೋಲೀಬಾರ್ ನಲ್ಲಿ ಮೃತಪಟ್ಟ ಇಬ್ಬರಿಗೆ ರಾಜ್ಯ ಸರಕಾರದಿಂದ ಹತ್ತು ಲಕ್ಷ, ಕಾಂಗ್ರೆಸ್ಸಿನಿಂದ ಏಳೂವರೆ ಲಕ್ಷ ಮತ್ತು ಜೆಡಿಎಸ್ ನಿಂದ ಐದು ಲಕ್ಷ ಪರಿಹಾರ ಪ್ರಕಟಗೊಂಡಿತ್ತು. ಮಂಗಳೂರು ಪೊಲೀಸರು, ಹಿಂಸಾಚಾರದಲ್ಲಿ ತೊಡಗಿದವರನ್ನು 'ದಂಗೆಕೋರರು' ಎಂದು ಕರೆದಿದ್ದಾರೆ.

ಎಲ್ಲರನ್ನೂ ಮುಂದೆ ಬನ್ನಿ ಎಂದು ಪ್ರಚೋದಿಸುತ್ತಿರುವ ವಿಡಿಯೋ
ಪೊಲೀಸರತ್ತ ಕಲ್ಲು ತೂರುತ್ತಿದ್ದ ಯುವಕರ ಗುಂಪು, ಎಲ್ಲರನ್ನೂ ಮುಂದೆ ಬನ್ನಿ ಎಂದು ಪ್ರಚೋದಿಸುತ್ತಿರುವ ವಿಡಿಯೋ ಕೂಡಾ ಬಹಿರಂಗಗೊಂಡಿದೆ. ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡು, ಟೈರ್ ಸುಡುತ್ತಿದ್ದ ದಂಗೆಕೋರರು, ಅಲ್ಲೇ ನಿಂತಿದ್ದ ಪೊಲೀಸರ ಮೇಲೆ ಅವ್ಯಾಹತವಾಗಿ ಕಲ್ಲು ತೂರಾಟ ನಡೆಸುತ್ತಿರುವ ವಿಡಿಯೋ ಕೂಡಾ ಇದೆ.

ಎರಡು ದೊಡ್ಡ ಮರದ ಕೋಲನ್ನು ರಸ್ತೆಗೆ ಅಡ್ಡ
ಪೊಲೀಸ್ ವ್ಯಾನ್ ಬರುವುದನ್ನು ಅರಿಯುವ ದಂಗೆಕೋರರು, ಎರಡು ದೊಡ್ಡ ಮರದ ಕಂಬವನ್ನು ರಸ್ತೆಗೆ ಅಡ್ಡಹಾಕಿ, ಪರಾರಿಯಾಗುತ್ತಿರುವ ವಿಡಿಯೋ ಬಿಡುಗಡೆಯಾಗಿದೆ. ವ್ಯಾನ್ ವಾಪಸ್ ತೆರಳುತ್ತಿದ್ದಂತೇ, ಮತ್ತೆ ವಾಪಸ್ ಬಂದು, ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತದೆ.
|
ಹಿಂಸಾಚಾರ 'ಕಾಂಗ್ರೆಸ್ ಪ್ರಾಯೋಜಿತ'
ಮಂಗಳೂರು ಪೊಲೀಸರು ಬಿಡುಗಡೆ ಮಾಡಿದ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟಿನಿಂದ ಶೇರ್ ಮಾಡಿಕೊಂಡಿರುವ ಬಿಜೆಪಿ ರಾಜ್ಯ ಘಟಕ, ಹಿಂಸಾಚಾರ 'ಕಾಂಗ್ರೆಸ್ ಪ್ರಾಯೋಜಿತ' ಎಂದು ದೂರಿದೆ. ಇದು ಕಾಂಗ್ರೆಸ್ ಪ್ರಾಯೋಜಿತ ಕೃತ್ಯ ಎನ್ನುವುದಕ್ಕೆ ಸಂಶಯ ಏನಾದರೂ ಉಳಿದಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

ಸರ್ಕಾರ ರಾಜಕೀಯ ಮಾಡಲು ಹೋಗುವುದಿಲ್ಲ
ಸಿಸಿಟಿವಿ ದೃಶ್ಯಗಳನ್ನು ಅವಲೋಕಿಸುವುದಾದರೆ, ಇದೊಂದು ಪೂರ್ವನಿಯೋಜಿತ ಕೃತ್ಯ ಎನ್ನುವುದು ಸ್ಪಷ್ಟವಾಗುತ್ತದೆ. ಸರಕಾರ ಇದರ ತನಿಖೆಯನ್ನು ಸಿಐಡಿಗೆ ವಹಿಸಿದೆ. ಮಂಗಳೂರು ಹಿಂಸಾಚಾರದ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್ ಅವರ ವಿರುದ್ದ ಪ್ರಕರಣ ದಾಖಲಾಗಿರುವ ಬಗ್ಗೆ, ಇದರಲ್ಲಿ ಸರ್ಕಾರ ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟನೆಯನ್ನು ನೀಡಿದ್ದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications