ಇದು ಮಂಗಳೂರು ಟ್ರಾಫಿಕ್ ಪೊಲೀಸರ ಸಿನಿಮೀಯ ಚೇಸಿಂಗ್ ಸ್ಟೋರಿ..!
ಅಪಘಾತವೆಸಗಿ ಸ್ಥಳದಿಂದ ಪರಾರಿಯಾಲು ಯತ್ನಿಸಿದ ಚಾಲಕನನ್ನು ಮಂಗಳೂರು ಟ್ರಾಫಿಕ್ ಪೊಲೀಸ್ ಬಾಬು ಶೆಟ್ಟಿ ಬೆನ್ನಟ್ಟಿ ಹಿಡಿದು ಭೇಷ್ ಎನಿಸಿಕೊಂಡಿದ್ದಾರೆ.
ಮಂಗಳೂರು, ಏಪ್ರಿಲ್ 2: ಅಪಘಾತವೆಸಗಿ ಸ್ಥಳದಿಂದ ಪರಾರಿಯಾಲು ಯತ್ನಿಸಿದ ಚಾಲಕನನ್ನು ಮಂಗಳೂರು ಟ್ರಾಫಿಕ್ ಪೊಲೀಸರು ಬೆನ್ನಟ್ಟಿ ಹಿಡಿದು ಭೇಷ್ ಎನಿಸಿಕೊಂಡಿದ್ದಾರೆ.
ಆದಿತ್ಯವಾರ ಬೆಳ್ಳಂಬೆಳಿಗ್ಗೆ ಮಂಗಳೂರಿನ ಟ್ರಾಫಿಕ್ ಪೊಲೀಸ್ ಬಾಬು ಶೆಟ್ಟಿ ಇಲ್ಲಿನ ನಂತೂರು ವೃತ್ತದ್ದಲ್ಲಿ ಎಂದಿನಂತೆ ಸಂಚಾರ ನಿಯಂತ್ರಣದಲ್ಲಿ ತೊಡಗಿಸಿಕೊಂಡಿದ್ದರು. 8.35ರ ಸುಮಾರಿಗೆ ಬಂದ ಬೃಹತ್ ಸರಕು ಸಾಗಾಟದ ಲಾರಿಯೊಂದು ಇಲ್ಲಿನ ಟ್ರಾ ಟ್ರಾಫಿಕ್ ಸಿಗ್ನಲ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು.[ಬಿಸಿಲ ಬೇಗೆಯ ನಡುವೆ ಮಂಗಳೂರಲ್ಲಿ ಶುರುವಾಯಿತೇ ನೀರಿನ ದಂಧೆ ?]

ಡಿಕ್ಕಿ ಹೊಡೆದರೂ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ. ಇದನ್ನ ನೋಡಿದ ಸಂಚಾರ ನಿಯಂತ್ರಕ ಬಾಬು ಶೆಟ್ಟಿ ಲಾರಿಯನ್ನು ಬೆನ್ನಟ್ಟಿದರು. ಕೊನೆಗೆ ಲಾರಿಯನ್ನು ಅಡ್ಡ ಹಾಕಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಬಾಬು ಶೆಟ್ಟಿ ಲಾರಿ ಹತ್ತಿ ಚಾಲಕನನ್ನು ತರಾಟೆಗೆ ತೆಗೆದುಕೊಂಡರು.[ಸೌಜನ್ಯಾ ಪ್ರಕರಣ: ಹೆಗ್ಗಡೆ ಕುಟುಂಬದ ಅರ್ಜಿ ವಜಾ]

ಲಾರಿಯನ್ನು ಕದ್ರಿ ಠಾಣೆಗೆ ಕೊಂಡೊಯ್ದು ಪ್ರಕರಣ ದಾಖಲಿಸಲಾಗಿದ್ದು ದಂಡ ಹಾಕಲಾಗಿದೆ. ಲಾರಿಯನ್ನು ಬೆನ್ನತ್ತಿ ಬಾಬು ಶೆಟ್ಟಿ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದಾರೆ.












Click it and Unblock the Notifications