Get Updates
Get notified of breaking news, exclusive insights, and must-see stories!

ಮೊದಲ ಸ್ಟಾರ್ಟ್ ಅಪ್ ಯೋಜನೆಗೆ ಮಂಗಳೂರು ಆಯ್ಕೆ

ಮಂಗಳೂರು, ಮೇ 22 : ಕೇಂದ್ರ ಸರಕಾರದ ಸ್ಟಾರ್ಟ್ ಅಪ್ ಯೋಜನೆಗೆ ಭಾರತದಲ್ಲೇ ಮೊದಲ ನಗರವಾಗಿ ಶೀಘ್ರದಲ್ಲಿಯೇ ಮಂಗಳೂರು ನಗರ ಆಯ್ಕೆಗೊಳ್ಳಲಿದೆ. ಈ ಮೂಲಕ ಶಿಕ್ಷಣದ ಕಾಶಿ ಎಂಬ ಹೆಸರು ಪಡೆದಿರುವ ಮಂಗಳೂರು ನಗರಕ್ಕೆ ಮತ್ತೊಂದು ಕೀರ್ತಿ ಮುಡಿಗೇರಲಿದೆ.

ಕೇಂದ್ರ ಸರಕಾರದ ವಾಣಿಜ್ಯ ಮತ್ತು ಬೃಹತ್ ಕೈಗಾರಿಕಾ ಸಚಿವಾಲಯ ಮಂಗಳೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಸುರತ್ಕಲ್ ನ ಎನ್‍ ಐಟಿಕೆ ಮತ್ತು ನಿಟ್ಟೆಯ ಎನ್ ಎಮ್ ಎಎಮ್ ವಿದ್ಯಾಸಂಸ್ಥೆಗಳನ್ನು ಆರಿಸಿಕೊಂಡಿದೆ. ಈ ಮೂಲಕ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಈ ಕಾರ್ಯವನ್ನು ಕೈಗೊಂಡಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಾಣಿಜ್ಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು, "ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಮಂಗಳೂರನ್ನು ದೇಶದ ಮೊದಲ ಸ್ಟಾರ್ಟ್ ಅಪ್ ಸಿಟಿ ಎಂದು ಘೋಷಣೆ ಮಾಡಲಿದ್ದೇವೆ. ಈ ಮೂಲಕ ಮೊದಲ ಹೆಜ್ಜೆಯನ್ನು ಇಟ್ಟಿದ್ದೇವೆ" ಎಂದಿದ್ದಾರೆ.

 ಮಂಗಳೂರು ಯಾಕೆ ಆಯ್ಕೆ?

ಮಂಗಳೂರು ಯಾಕೆ ಆಯ್ಕೆ?

ಹತ್ತಕ್ಕಿಂತಲೂ ಹೆಚ್ಚು ವೈದ್ಯಕೀಯ ಜತೆಗೆ ಅಷ್ಟೇ ಪ್ರಮಾಣದಲ್ಲಿ ಇಂಜಿನಿಯರಿಂಗ್ ಕಾಲೇಜು ಹೊಂದಿರುವ ದೇಶದ ಏಕೈಕ ನಗರ ಅಂದರೆ ಅದು ಮಂಗಳೂರು. ಆದ್ದರಿಂದಲೇ ದೇಶ ವಿದೇಶದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇಲ್ಲಿನ ಶಿಕ್ಷಣ ಗುಣಮಟ್ಟವು ಅತ್ಯಂತ ಉತ್ತಮವಾಗಿದೆ. ಜೊತೆಗೆ ಮೂರು ಸಾರಿಗೆ ಸಂಪರ್ಕಗಳಾದ ವಿಮಾನಯಾನ, ನೌಕಾಯಾನ ಹಾಗೂ ರಸ್ತೆಯಾನವನ್ನು ಹೊಂದಿದೆ. ಜೊತೆಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವುದರಿಂದ ಮಂಗಳೂರನ್ನು ಆಯ್ಕೆ ಮಾಡಿದ್ದಾರೆ.

 ಒಂದು ಖಾಸಗಿ ಮತ್ತೊಂದು ಸರ್ಕಾರಿ ಕಾಲೇಜು ಆಯ್ಕೆ

ಒಂದು ಖಾಸಗಿ ಮತ್ತೊಂದು ಸರ್ಕಾರಿ ಕಾಲೇಜು ಆಯ್ಕೆ

ಈ ಯೋಜನೆಗೆ ಮುಖ್ಯವಾಗಿ ಒಂದು ಸರಕಾರಿ ಹಾಗೂ ಒಂದು ಖಾಸಗಿ ವಲಯದ ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಎನ್‍ ಐಟಿಕೆ ಸಂಸ್ಥೆಯನ್ನು ರಾಜ್ಯಸರಕಾರವು 1960ರಿಂದ ನಡೆಸಿಕೊಂಡು ಬಂದಿದೆ. ಈವರೆಗೆ ಅಸಂಖ್ಯಾತ ಪ್ರತಿಭೆಗಳು ಈ ಸಂಸ್ಥೆಯಿಂದ ದೇಶಕ್ಕೆ ದೊರೆತಿದೆ. ಅದೇ ರೀತಿ ಖಾಸಗಿ ವಲಯದ ನಿಟ್ಟೆ ಸಂಸ್ಥೆಯ ಅಡಿಯಲ್ಲಿ ಬರುವ ಎನ್.ಎಮ್.ಎ.ಎಮ್ ಸಂಸ್ಥೆಯೂ ಮಂಗಳೂರು ಅಲ್ಲದೇ ದೇಶ ವಿದೇಶದಲ್ಲಿ ಉತ್ತಮ ಹೆಸರು ಮಾಡಿರುವುದರಿಂದ ಮೊದಲ ಭಾಗವಾಗಿ ಈ ಎರಡು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

 ಶಾಸಕ ಜೆ.ಆರ್.ಲೋಬೋ ಹರ್ಷ

ಶಾಸಕ ಜೆ.ಆರ್.ಲೋಬೋ ಹರ್ಷ

ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಮಾತನಾಡಿ" ಇದು ಅಭಿವೃದ್ದಿಯ ಉತ್ತಮ ಹೆಜ್ಜೆ. ಮೊದಲನೆಯದಾಗಿ ಮಂಗಳೂರನ್ನು ಸ್ಟಾರ್ಟ್ ಅಪ್ ಸಿಟಿ ಎಂಬ ಸುದ್ದಿ ಕೇಳಿ ಖುಷಿ ಹೊಂದಿದ್ದೇನೆ. ಈ ಹಿಂದಿನಿಂದಲೂ ಬ್ಯಾಂಕಿಂಗ್, ಹೋಟೇಲ್, ಆರೋಗ್ಯಕ್ಕೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಇದು ಅದರ ಮುಂದಿನ ಭಾಗ" ಎಂದು ಹೇಳಿದ್ದಾರೆ.

 ಏನಿದು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ?

ಏನಿದು ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ?

ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯು ಭಾರತ ಸರ್ಕಾರದ ಮಹದುದ್ದೇಶದ ಯೋಜನೆಯಾಗಿದೆ. ಹೊಸ ಅನುಶೋಧನೆ ಮತ್ತು ಆರಂಭಿಕ ಕಂಪನಿಗಳನ್ನು ಸೂಕ್ತವಾಗಿ ಬೆಳೆಯಲು ಅಗತ್ಯವಾದ ಪ್ರಬಲ ವಾತಾವರಣವನ್ನು ಸೃಷ್ಟಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದು ಎಲ್ಲರನ್ನೂ ಸೇರಿಸಿಕೊಂಡ ಹಾಗೂ ಧೀರ್ಘಾವಧಿಯಲ್ಲಿ ಸುಸ್ಥಿರ ಆರ್ಥಿಕ ಪ್ರಗತಿಯ ಚಾಲನಾ ಶಕ್ತಿಯಾಗಲಿದದೆ. ಇದರ ಜತೆಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಸೃಷ್ಟಿಸುವಲ್ಲಿ ನೆರವಾಗಲಿದೆ. ಅಂತಿಮವಾಗಿ ಜೀವನಾಧಾರ ಭದ್ರತೆ ಹಾಗೂ ಬಡತನ ನಿರ್ಮೂಲನೆಗೆ ಕೂಡಾ ಇದು ನೆರವಾಗಲಿದೆ. ಈ ವಿನೂತನ ಯೋಜನೆ ಮೂಲಕ ಸ್ಟಾರ್ಟ್ ಅಪ್ ಯೊಜನೆಗಳನ್ನು ಅನುಶೋಧನೆ ಹಾಗೂ ವಿನ್ಯಾಸದ ಮೂಲಕ ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಇದು ಸ್ಪರ್ಧಾತ್ಮಕತೆಯನ್ನು ಬೆಳೆಸುವ ಹಾಗೂ ದೇಶದ ಮೌಲ್ಯವರ್ಧನೆಗೆ ಪೂರಕವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+