ತಣ್ಣೀರುಬಾವಿ ತೂಗು ಸೇತುವೆಗೆ ಅಂತೂ ಬಂತು ಅನುದಾನ
ಮಂಗಳೂರು, ಏ. 17: ಲೋಕೋಪಯೋಗಿ ಇಲಾಖೆಯಿಂದ ತಣ್ಣೀರುಬಾವಿ-ಸುಲ್ತಾನ್ ಬತ್ತೇರಿ ತೂಗು ಸೇತುವೆ ಕಾಮಗಾರಿಗೆ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ತಿಳಿಸಿದ್ದಾರೆ.
ಹಲವು ವರುಷಗಳಿಂದ ಅನುದಾನ ಅನಿಶ್ಚಿತತೆಯಲ್ಲಿ ಕಾಮಗಾರಿಯು ನನೆಗುದಿಗೆ ಬಿದ್ದಿದ್ದು, ಇದಕ್ಕೆ ಮರುಜೀವ ಕೊಡುವುದು ನನ್ನ ಉದ್ದೇಶವಾಗಿತ್ತು. 410 ಮೀ. ಉದ್ದ, 10 ಅಡಿ ಅಗಲದ ತೂಗುಸೇತುವೆ ಜಲಮಟ್ಟದಿಂದ 25 ಅಡಿ ಎತ್ತರದಲ್ಲಿ ನಿರ್ಮಾಣಗೊಳ್ಳಬೇಕಿತ್ತು. ಈ ಯೋಜನೆಯು 2006 ರಲ್ಲಿ ಪ್ರಾರಂಭಗೊಂಡು, 2008ರವರೆಗೆ ಅರ್ಧಬಂರ್ದ ಕೆಲಸ ಆಗಿತ್ತು. ಕುಂಟುತ್ತಾ ಸಾಗಿದ ಕಾಮಗಾರಿಗೆ ಈಗ ಮತ್ತೆ ಜೇವ ಬಂದಂಥಾಗಿದೆ.[ಮಂಗಳೂರು ವಿವಿಯಲ್ಲಿದೆ ಕೃತಿ ಚೌರ್ಯ ತಡೆ ತಂತ್ರಾಂಶ]

ಪ್ರವಾಸೋದ್ಯಮ ಇಲಾಖೆಯಲ್ಲಿ ಅನುದಾನದ ಕೊರತೆ ಇರುವ ಕಾರಣ, ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಯಿತು. ಮೊದಲ ಹಂತದಲ್ಲಿ 6 ಕೋಟಿ ಬಿಡುಗಡೆಯಾಗಿದ್ದು ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.[ಕುಡ್ಲದಲ್ಲಿ ಮಿಡಿದ ಜೀವಂತ ಹೃದಯ ಬೆಂಗಳೂರಿಗೆ]
ಯೋಜಜೆಗೆ ಒಟ್ಟು ಇನ್ನು 12 ಕೋಟಿ ಅಂದಾಜು ಮಾಡಲಾಗಿದ್ದು ಮುಂದಿನ ಹಂತದಲ್ಲಿ ಬಿಡುಗಡೆಗೊಳಿಸಲಾಗುವುದು. 2 ವರ್ಷದೊಳಗೆ ಈ ತೂಗು ಸೇತುವೆ ಕಾಮಗಾರಿಯನ್ನು ಪೂರ್ಣಗೊಳ್ಳುವ ಭರವಸೆ ಇದೆ ಎಂದು ಜೆ.ಆರ್. ಲೋಬೊ ತಿಳಿಸಿದರು.












Click it and Unblock the Notifications