ಅಮೆರಿಕ: ವಿಜ್ಞಾನ ಸ್ಪರ್ಧೆಯಲ್ಲಿ ಮಂಗಳೂರು ವಿದ್ಯಾರ್ಥಿಗಳಿಗೆ ರಜತ
ವಿದ್ಯಾರ್ಥಿಗಳಿಬ್ಬರು ಭಾರತವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ತೋರಿ ಬೆಳ್ಳಿ ಪದಕವನ್ನು ಗಳಿಸುವುದರೊಂದಿಗೆ ಗ್ರಾಮೀಣ ಜನತೆಯ ಜೀವನದಲ್ಲಿ ಹಾಸುಹೊಕ್ಕಾಗಿರುವ ಸುಪ್ತ ಜ್ಞಾನಕ್ಕೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗೌರವದ ಮನ್ನಣೆ ಒದಗಿಸಿದ್ದಾರೆ.
ಮಂಗಳೂರು, ಮೇ 8 : ಅಮೆರಿಕಾದ ಟೆಕ್ಸಾಸ್ - ಹ್ಯೂಸ್ಟನ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಸ್ಪರ್ದೆಯಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ೯ನೆಯ ವಿಧ್ಯಾರ್ಥಿಗಳಾದ ಎ.ಯು ನಚಿಕೇತ್ ಕುಮಾರ್(15) ಮತ್ತು ಅಮನ್(15) ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಈ ವಿದ್ಯಾರ್ಥಿಗಳಿಬ್ಬರು ಭಾರತವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ತೋರಿ ಬೆಳ್ಳಿ ಪದಕವನ್ನು ಗಳಿಸುವುದರೊಂದಿಗೆ ಗ್ರಾಮೀಣ ಜನತೆಯ ಜೀವನದಲ್ಲಿ ಹಾಸುಹೊಕ್ಕಾಗಿರುವ ಸುಪ್ತ ಜ್ಞಾನಕ್ಕೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಗೌರವದ ಮನ್ನಣೆ ಒದಗಿಸಿದ್ದಾರೆ.[ಅಮೆರಿಕದಲ್ಲಿ ಹತ್ಯೆಗೀಡಾದವರಿಗೆ ತುರ್ತು ನೆರವು ನೀಡಿ : ನಳಿನ್]

I-sweep ಎಂಬ ಸಂಸ್ಥೆಯು ವಿಶ್ವದ ವಿವಿದ ದೇಶಗಳ ಸ್ಪರ್ದಿಗಳನ್ನು ಕರೆಸಿ ಈ ಸ್ಪರ್ದೆಯನ್ನು ಆಯೋಜಿಸುತ್ತದೆ. ಮರು ಬಳಕೆ ಮಾಡಬಹುದಾದ ನೈಸರ್ಗಿಗ ಉತ್ಪನ್ನಗಳನ್ನು ಬಳಕೆಯನ್ನು ಪ್ರೋತ್ಶಾಹಿಸುವ ಹಾಗು ಪರಿಸರ ಸಂರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು I-sweep ಕಾರ್ಯ ನಿರ್ವಹಿಸುತ್ತಿದೆ.
ರಬ್ಬರ್ ಹಾಲನ್ನು( ರಬ್ಬರ್ ಲ್ಯಾಟೆಕ್ಸ್) ಭೂಮಿಗೂ ಹಾಗೂ ಮಾನವನಿಗೂ ಅಪಾಯಕಾರಿಯೆನಿಸಿರುವ ರಾಸಾಯನಿಕ ಆಸಿಡ್ಬಳಸದೆ ಬಿಂಬುಳಿ (bilinje) ಎಂಬ ಹುಳಿ ಹಣ್ಣಿನ ರಸವನ್ನು ಬಳಸಿ ಗುಣಮಟ್ಟದ ರಬ್ಬರ್ ಶೀಟ್( ಘನಿಕೃತ) ತಯಾರು ಮಾಡುವ ಪ್ರಾಜೆಕ್ಟ್ ಗೆ ಈ ಬೆಳ್ಳಿಪದಕ ದೊರೆತಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ I-sweep ಆಯೋಜಿಸುವ ಅಂತರಾಷ್ಟ್ರೀಯ ವಿಜ್ಞಾನ ಸ್ಪರ್ದೆಗೆ ಹಿಂದೆಯೂ ಹಲವಾರು ಮಂದಿ ಭಾಗವಹಿಸಿದ್ದರೂ ಪ್ರಶಸ್ತಿ ಬಂದದ್ದು ಇದೆ ಮೊದಲ ಬಾರಿ ಎನ್ನಲಾಗುತ್ತಿದೆ.[ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಎಸ್ಎಂ ಕೃಷ್ಣಗೆ ಅವಮಾನ]

ಇವರ ವೈಜ್ಞಾನಿಕ ಸಂಶೋಧನೆಯು ಪುತ್ತೂರಿನಲ್ಲಿ ನಡೆದ ವಿಭಾಗೀಯ ಮಟ್ಟದಲ್ಲೂ , ರಾಜ್ ಕೋಟ್ ನಲ್ಲಿ ನಡೆದ ರಾಷ್ಟ್ರ ಮಟ್ಟದಲ್ಲೂ ಚಿನ್ನದ ಪದಕ ಪಡೆದು ಅಮೇರಿಕಾದಲ್ಲಿ ನಡೆಯುವ ಐ ಸ್ವೀಪ್ -2017 ಎಂಬ ವಿಜ್ಞಾನ ಸಂಶೋಧನಾ ಸ್ಪರ್ದ ಕಣಕ್ಕೆ ಆಯ್ಕೆಗೊಂಡಿತ್ತು.
ಆರ್ಥಿಕವಾಗಿ ಲಾಭದಾಯಕವೆನಿಸಿದ ರಬ್ಬರ್ ಕೃಷಿಕರ ಪಾಲಿಗೆ ಆರೋಗ್ಯ ರಕ್ಷಕವಾಗಿದ್ದ ಬಿಂಬುಲಿ ( ಆಂಗ್ಲ ಭಾಷೆಯಲ್ಲಿ ಬಿಲಿಂಬಿ ) ಎಂಬ ಹಣ್ಣಿನ ರಸವನ್ನು ಬಳಸಿ ಅತ್ಯುತ್ತಮ ಗುಣಮಟ್ಟದಲ್ಲಿ ರಬ್ಬರ್ ಶೀಟ್ ತಯಾರಿಸಬಹುದೆಂಬ ಈ ವಿಧ್ಯಾರ್ಥಿಗಳ ಪ್ರಯೋಗ ತೀರ್ಪುಗಾರರಗಮನ ಸೆಳೆದು ವಿಭಾಗವಾರು ನೆಲೆಯಲ್ಲಿ ದ್ವೀತಿಯ ಸ್ಥಾನಿಯಾಗಿ ಬೆಳ್ಳಿ ಪದಕ ಗಳಿತು.[ಹಳದಿ ಜೋಡಿ ಅನಕೊಂಡಗಳ ಆಗಮನಕ್ಕೆ]
ವಿಧ್ಯಾರ್ಥಿಗಳಿಂದ ಸೂಚಿಸಲ್ಪಟ್ಟ ಈ ವಿಜ್ಞಾನ ಪ್ರಯೋಗವನ್ನು ಅಗತ್ಯ ಮಾರ್ಗದರ್ಶನ - ಸಹಾಯ- ಸಹಕಾರವನ್ನಿತ್ತು , ವಿಧ್ಯಾರ್ಥಿ ಗಳೊಂದಿಗೆ ಒರ್ವ ವಿಜ್ಞಾನ ಶಿಕ್ಷಕಿಯನ್ನು ನಿಯುಕ್ತಿಗೊಳಿಸಿ ವಿಧ್ಯಾರ್ಥಿಗಳ ಸಂಶೋಧನೆಯನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ಬೆಳ್ಳಿ ಪದಕದ ಗೌರವ ದೊರಕಿಸಿ ಕೊಡುವಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಸಂಚಾಲಕರಾದ ಯು ಎಸ್ ಎ ನಾಯಕ್ ಹಾಗೂ ಪ್ರಾಂಶುಪಾಲರಾದ ರವೀಂದ್ರ ಧರ್ಬೆ ಯವರ ಸಹಕಾರವೂ ಪ್ರಾಧನ್ಯತೆಯನ್ನು ಪಡೆದಿದೆ.
ಬೆಳ್ಳಿಪದಕ ವಿಜೇತ ವಿಧ್ಯಾರ್ಥಿಗಳಾದಎ ಯು ನಚಿಕೇತ್ ಕುಮಾರ್ ಉಪ್ಪಿನಂಗಡಿಯ ಪತ್ರಕರ್ತ ಯು ಎಲ್ ಉದಯ್ ಕುಮಾರ್ ಹಾಗೂ ವಿನಯ ದಂಪತಿಗಳ ಮಗನಾಗಿದ್ದು, ಅಮನ್ ಕೆ ಎ ಪ್ರಸಕ್ತ ಪುತ್ತೂರು ಅಗ್ನಿಶಾಮಕ ದಳದಲ್ಲಿ ಉದ್ಯೋಗಿಯಾಗಿರುವ ನಿವೃತ್ತ ಯೋಧ ಅಬ್ದುಲ್ ಅಜೀಜ್ ಹಾಗೂ ಆರೋಗ್ಯ ಇಲಾಖಾ ಉದ್ಯೋಗಿ ಶ್ರೀಮತಿ ರಹೆಮತ್ ಬೇಗಮ್ ದಂಪತಿಗಳ ಮಗನಾಗಿದ್ದಾರೆ.
ಮಾರ್ಗದರ್ಶಕ ಶಿಕ್ಷಕಿಯಾಗಿರುವ ಶ್ರೀಮತಿ ನಿಶಿತಾ ರವರು ಪುತ್ತೂರಿನ ದೃಶ್ಯ ಮಾದ್ಯಮ ವರದಿಗಾರ ಸುಧಾಕರ್ ರವರ ಪತ್ನಿಯಾಗಿದ್ದಾರೆ.












Click it and Unblock the Notifications