ಮಂಗಳೂರು: ಧರಣಿ ನಿರತರ ಬಂಧನ; ಅನಿರ್ಧಿಷ್ಟಾವಧಿ ಜಿಲ್ಲಾ ಬಂದ್‌ಗೆ ಕರೆ
ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಹಾಗೂ ನೇತ್ರಾವತಿ ಉಳಿವಿಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಉಪವಾಸ ನಿರತರಾಗಿದ್ದವರನ್ನು ಬಂಧಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಸಂಸದ ನಳಿನ್ ಕುಮಾರ್ ಸೇರಿದಂತೆ ಹಲವರನ
ಮಂಗಳೂರು, ಫೆಬ್ರವರಿ 10: ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಹಾಗೂ ನೇತ್ರಾವತಿ ಉಳಿವಿಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಉಪವಾಸ ನಿರತರಾಗಿದ್ದವರನ್ನು ಬಂಧಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಸಂಸದ ನಳಿನ್ ಕುಮಾರ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಅಮರಣಾಂತ ಉಪವಾಸ ನಿರತರನ್ನು ಬಂಧಿಸುತ್ತಿದ್ದಂತೆ ಅನಿರ್ಧಿಷ್ಟಾವಧಿ ದಕ್ಷಿಣ ಕನ್ನಡ ಜಿಲ್ಲಾ ಬಂದಿಗೆ ಕರೆ ನೀಡಲಾಗಿದೆ.
ಪೊಲೀಸರು ನೀಡಿದ್ದ ಅನುಮತಿ ಅವಧಿಯನ್ನು ಮೀರಿ ಧರಣಿ ನಡೆಸಿದ್ದರಿಂದ ಪೊಲೀಸರು ಧರಣಿ ನಿರತರನ್ನ ಬಂಧಿಸಿದ್ದಾರೆ. ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಗೆ ಇಂದು ಅಪರಾಹ್ನ 2 ಗಂಟೆಯವರೆಗೆ ಮಾತ್ರ ಧರಣಿ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ಆದರೆ ಬಳಿಕವೂ ಧರಣಿ ನಿರತರು ಸ್ಥಳ ತೆರವುಗೊಳಿಸದ ಕಾರಣ ಸಂಸದ ನಳಿನ್ ಕುಮಾರ್ ಸಹಿತ ಹಲವರನ್ನು ಪೊಲೀಸರು ಬಂಧಿಸಿದರು.













Click it and Unblock the Notifications