ಮಂಗಳೂರು: ನೀರಿನ ಟ್ಯಾಂಕಲ್ಲಿ ಸತ್ತ ಹೆಬ್ಬಾವು ಕಂಡು ಬೆಚ್ಚಿ ಬಿದ್ದ ಜನ.!
ಮಂಗಳೂರು, ಎಪ್ರಿಲ್ 6: ಪಂಚಾಯತ್ , ಪಾಲಿಕೆಯ ಕಡೆಯಿಂದ ಸರಬರಾಜು ಆಗುವ ಸಾರ್ವಜನಿಕ ನೀರಿನ ಪರಿಶುದ್ಧತೆ ಪರಿಶೀಲಿಸಲು ಯಾರೂ ಹೋಗುವುದೇ ಇಲ್ಲ. ಒಮ್ಮೊಮ್ಮೆ ಇದೇ ಯಡವಟ್ಟಿಗೆ ಕಾರಣವಾಗುತ್ತದೆ.
ಇಲ್ಲೂ ಆಗಿದ್ದು ಇದೇ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುನಡುಗೋಡು ಗ್ರಾಮದ ಮಜದೋಡಿ ಎಂಬ ಊರಿನಲ್ಲಿ ನೀರಿನ ಟ್ಯಾಂಕ್ ಇದೆ. ಕಳೆದ ಆರು ದಿನಗಳಿಂದ ಈ ಟ್ಯಾಂಕ್ ನಿಂದ ಸರಬರಾಜು ಆಗುವ ನೀರು ವಾಸನೆ ಬೀರುತ್ತಿತ್ತು. ಹೆಚ್ಚಿನವರು ಬೋರ್ ವೆಲ್ ನೀರು ಅಲ್ವಾ..? ಹೀಗಾಗಿ ಸ್ಪಲ್ಪ ವಾಸನೆ ಬರುತ್ತಿದೆ ಅಂದುಕೊಂಡಿದ್ದರು. ಇನ್ನು ಕೆಲವರು ಕಬ್ಬಿಣದ ಪೈಪ್ ನ ವಾಸನೆ ಇರಬೇಕು ಅಂದುಕೊಂಡಿದ್ದರು. ಆದರೆ ಗುರುವಾರ ಈ ನೀರು ಯಾಕೆ ವಾಸನೆ ಬರುತ್ತಿದೆ ಎಂಬುದರ ಸತ್ಯಾಂಶ ಬದಲಾದಾಗ ಊರಿನ ಜನರು ಬೆಚ್ಚಿಬಿದ್ದಿದ್ದಾರೆ.[ಬಿರು ಬೇಸಿಗೆಯಲ್ಲೂ ಪಿಲಿಕುಳದಲ್ಲಿ ಪ್ರಾಣಿಗಳು ಕೂಲ್.. ಕೂಲ್..!]

ಸ್ಥಳೀಯರ ದೂರಿನ ಮೇರೆಗೆ ಕೊನೆಗೂ ಪಂಚಾಯತ್ ಅಧಿಕಾರಿಗಳು ನೀರಿನ ಟ್ಯಾಂಕ್ ಪರಿಶೀಲಿಸುವುದಕ್ಕೆ ಹೊರಟರು. ನೀರಿನ ಟ್ಯಾಂಕ್ ನ ಮುಚ್ಚಳ ತೆಗೆದು ನೋಡಿದಾಗ ದೊಡ್ಡ ಗಾತ್ರದ ಹೆಬ್ಬಾವು ಸತ್ತು ಬಿದ್ದಿರುವುದು ಕಂಡು ಬಂತು. ಕೊನೆಗೆ ನೀರಿನ ಟ್ಯಾಂಕನ್ನ ಸ್ವಚ್ಚಗೊಳಿಸಲಾಯಿತು. ಇದೀಗ ಈ ಊರಿನ ಜನರಲ್ಲಿ ಏನಾದರೂ ರೋಗ ಬಂದಿತೇ ಎಂಬ ಭಯ ಶುರುವಾಗಿದೆಯಂತೆ. ಜತೆಗೆ ಹೆಬ್ಬಾವು ಸತ್ತು ಬಿದ್ದಿದ್ದ ನೀರು ಕುಡಿದ ಜನರು ಹಿಡಿಶಾಪ ಹಾಕುತ್ತಿದ್ದಾರೆ.[ಮಂಗಳೂರು: ಮಲ್ಯ ಒಡೆತನದ ಎಂಸಿಎಫ್ ನಲ್ಲಿ ಜಲಕ್ಷಾಮ]












Click it and Unblock the Notifications