ಹೆಜಮಾಡಿ ವ್ಯಕ್ತಿ ಅಬುದಾಬಿಯಲ್ಲಿ ಕೊರೊನಾಗೆ ಬಲಿ
ಮಂಗಳೂರು, ಮೇ 26: ಎಂಟು ವರ್ಷಗಳಿಂದ ಅಬುದಾಬಿಯಲ್ಲಿ ಕೆಲಸ ಮಾಡುತ್ತಿದ್ದ ಹೆಜಮಾಡಿಯ 44 ವರ್ಷದ ವ್ಯಕ್ತಿಯೊಬ್ಬರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ.
ಮಂಗಳೂರಿನ ಹೆಜಮಾಡಿಯ ಬ್ರಹ್ಮಸ್ಥಾನ ಮೂಲದ ಇವರು ಅಬುದಾಬಿಯಲ್ಲಿ ಎಂಟು ವರ್ಷಗಳಿಂದಲೂ ವಾಸವಿದ್ದರು. ವಿಶ್ವದಾದ್ಯಂತ ಕೊರೊನಾ ವೈರಸ್ ಕಾಣಿಸಿಕೊಂಡು, ಲಾಕ್ ಡೌನ್ ಆದ ಪರಿಣಾಮ ವಾಪಸ್ ಅವರು ಊರಿಗೆ ಬರಲಾಗಲಿಲ್ಲ. ಇವರು ಕೆಲಸದಲ್ಲಿದ್ದ ಸ್ಥಳದಲ್ಲಿ ಕೊರೊನಾ ಪರೀಕ್ಷೆ ನಡೆದಿದ್ದು, ಎರಡು ಬಾರಿಯೂ ಇವರ ಫಲಿತಾಂಶ ನೆಗೆಟಿವ್ ಬಂದಿತ್ತು.

ಆದರೆ ಮೂರನೇ ಬಾರಿಯ ಪರೀಕ್ಷೆ ವೇಳೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಕೊರೊನಾ ವೈರಸ್ ಸೋಂಕು ತಗುಲಿದ್ದು ಕಂಡುಬಂದ ನಂತರ ಅಲ್ಲಿನ ಶೇಖ್ ಖಲೀಫಾ ಆಸ್ಪತ್ರೆಗೆ ಇವರನ್ನು ದಾಖಲಿಸಲಾಗಿತ್ತು. ಅವರ ಪತ್ನಿ ಹಾಗೂ ಪುತ್ರಿ ಪುಣೆದಲ್ಲಿದ್ದಾರೆ. ಅಲ್ಲಿಂದ ಮೃತದೇಹವನ್ನು ತರಲು ಸಾಧ್ಯವಾಗದ್ದರಿಂದ ಇಂದು ಅಬುದಾಬಿಯಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ.












Click it and Unblock the Notifications