ಚೆನ್ನೈ ಪ್ರವಾಹದಲ್ಲಿ ಸಿಲುಕಿದ ಮಂಗಳೂರು ಮಂದಿ
ಮಂಗಳೂರು ಡಿಸೆಂಬರ್, 04 : ಭಾರೀ ಮಳೆಯಿಂದ ತತ್ತರಿಸಿರುವ ಚೆನ್ನೈ ಜಲಪ್ರಳಯದಲ್ಲಿ ಕರಾವಳಿಗರು ಕೂಡಾ ಸಿಲುಕಿದ್ದು, ಅತಂತ್ರ ಸ್ಥಿತಿಯಲ್ಲಿದ್ದಾರೆ. ಚೆನ್ನೈನ ಸಿ.ಎಂ.ಬಿ.ಟಿ. ಬಸ್ ನಿಲ್ದಾಣ ಬಳಿಯ ಚೂಳೈಮೇಡು ಎಂಬಲ್ಲಿ ವಾಸಿಸುತ್ತಿರುವ 9 ಮಂದಿ ಸದಸ್ಯರಿರುವ ವಿಟ್ಲದ ಕುಟುಂಬವೊಂದು ಅತಿವೃಷ್ಟಿಗೆ ಸಿಲುಕಿ ಸಂಕಷ್ಟಕ್ಕೊಳಗಾಗಿದೆ.
ವಿಟ್ಲ ಅಡ್ಡದಬೀದಿಯ ರತ್ನಾಕರ ಜೋಷಿ, ಅವರ ಪತ್ನಿ ವಿಜಯಾ, ಹಿರಿಯ ಪುತ್ರ ಸುರೇಶ, ಅವರ ಪತ್ನಿ ವಾಣಿ, ಪುಟಾಣಿ ಮಕ್ಕಳಾದ ದುರ್ಗೇಶ್, ನವ್ಯಾ, ರತ್ನಾಕರ ಅವರ ಕಿರಿಯ ಪುತ್ರ ಹರೀಶ್, ಅವರ ಪತ್ನಿ ಅಪರ್ಣಾ ಪುತ್ರ ಎಲ್.ಅನೀಶ್ ಚೆನ್ನೈನ ರುದ್ರನರ್ತನಕ್ಕೆ ತತ್ತರಗೊಂಡಿದ್ದಾರೆ.[ಚೆನ್ನೈ ಪ್ರವಾಹದಲ್ಲಿ ಸಿಲುಕಿ ತತ್ತರಗೊಂಡ ಕನ್ನಡಿಗರು]

ಹರೀಶ್ ಅವರು ಚೆನ್ನೈನಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅವರ ಪತ್ನಿ ಅಪರ್ಣಾ ಚೆನ್ನೈ ಆಲ್ ಇಂಡಿಯಾ ರೇಡಿಯೊ ಎಫ್.ಎಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು ವಾಸವಾಗಿರುವ ಮನೆಯ ನೆಲಮಹಡಿ ಸಂಪೂರ್ಣ ಜಲಾವೃತ ಗೊಂಡಿದ್ದು, ಮನೆಮಂದಿ ಕಳೆದ 3-4 ದಿನಗಳಿಂದ ಮೇಲಿನ ಮಹಡಿಯಲ್ಲಿ ಬೀಡು ಬಿಟ್ಟಿದ್ದಾರೆ.[ಚೆನ್ನೈ ಪ್ರವಾಹ : ಮೈಸೂರಿನ ಇಂಜಿನಿಯರ್ ನಾಪತ್ತೆ]
ಸಂಕಷ್ಟದಲ್ಲಿ ಪೆರ್ಲದ ಅಮೀನ್
ಚೆನ್ನೈಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ವ್ಯಾಸಂಗ ಮಾಡುತ್ತಿರುವ ಪೆರ್ಲ ಸಮೀಪದ ಗೂಣಾಜೆ ನಿವಾಸಿ ಮೊಯ್ದು ಹಾಜಿ ಎಂಬವರ ಪುತ್ರ ಅಮೀನ್ ಪ್ರವಾಹದಲ್ಲಿ ಸಿಲುಕಿದ್ದು, ಆಹಾರ ಸಮಸ್ಯೆ ಎದುರಿಸುತ್ತಿದ್ದಾರೆ. ವಾಹನ, ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಈ ಎಲ್ಲಾ ಕನ್ನಡಿಗರು ಕರ್ನಾಟಕಕ್ಕೆ ತಲುಪಲು ಪರದಾಡುತ್ತಿದ್ದಾರೆ.












Click it and Unblock the Notifications