• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುರತ್ಕಲ್‌ನಲ್ಲಿ 'ಮೋದಿ' ನಗರ, ಇತರ ಕರಾವಳಿ ಸುದ್ದಿ

|

ಮಂಗಳೂರು, ನ. 17 : ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶ ವಿದೇಶಗಳಲ್ಲಿ ಜನಪ್ರಿಯತೆಗಳಿಸುತ್ತಿದ್ದಾರೆ. ಸುರತ್ಕಲ್‌ನ ಮುಂಚೂರು ಗ್ರಾಮಸ್ಥರು ತಮ್ಮ ಊರಿಗೆ 'ಮೋದಿ ನಗರ' ಎಂದು ಮರುನಾಮಕರಣ ಮಾಡುವ ಮೂಲಕ ಮೋದಿ ಮೇಲಿನ ಅಭಿಮಾನವನ್ನು ತೋರಿಸಿದ್ದಾರೆ.

ಭಾನುವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ರಜನಿ ದುಗ್ಗಣ್ಣ, ಕಾರ್ಪೊರೇಟರ್ ಸುಮಿತ್ರಾ, ಸ್ಥಳೀಯ ಉದ್ಯಮಿ ಸತೀಶ್ ಮುಂಚೂರು ಮುಂತಾದವರು ಸೇರಿ ಮೋದಿ ನಗರ ಎಂಬ ನಾಮಕರಣ ಕಾರ್ಯಕ್ರಮ ಮಾಡಿದರು. ಇದಕ್ಕೆ ಊರಿನ ಎಲ್ಲರ ಒಪ್ಪಿಗೆಯೂ ದೊರೆತಿದೆ.

ಕಂಬಳ ನಡೆಸುವ ಕುರಿತು ಚರ್ಚೆ : ಉಡುಪಿ ಮತ್ತು ದಕ್ಷಿಣ ಕನ್ನಡದ ಜಾನಪದ ಕ್ರೀಡೆಯಾದ ಕಂಬಳವನ್ನು ನಿಷೇಧಿಸಿರುವ ಕ್ರಮದ ಕುರಿತು ಕೇಂದ್ರ ಸಚಿವರ ಜೊತೆ ಸಮಾಲೋಚನೆ ನಡೆಸಲಾಗುವುದು ಎಂದು ಕ್ರೀಡಾ, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಉಡುಪಿ ಜಿಲ್ಲಾ ಕಂಬಳ ಸಮಿತಿಯ ತುರ್ತುಸಭೆಯಲ್ಲಿ ಭರವಸೆ ನೀಡಿದ್ದಾರೆ.

ಕಂಬಳವನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆಯೇ ಹೊರತು ರಾಜ್ಯ ಸರ್ಕಾರ ನಿಷೇಧ ಮಾಡಿಲ್ಲ. ಸುಪ್ರೀಂ ತೀರ್ಪಿನ ಬಗ್ಗೆ ಕೇಂದ್ರ ಸಚಿವರ ಜೊತೆ ಸಮಾಲೋಚನೆ ನಡೆಸುವುದಾಗಿ ಸಚಿವರು ಹೇಳಿದರು. ಜಲ್ಲಿಕಟ್ಟನ್ನು ನಿಷೇಧವನ್ನು ಮಾಡಿದ ಮಾತ್ರಕ್ಕೆ ಆ ತೀರ್ಪು ಕಂಬಳಕ್ಕೆ ಅನ್ವಯವಾಗುವುದಿಲ್ಲ. ಜಾನಪದ ಮತ್ತು ಇತಿಹಾಸವುಳ್ಳ ಕ್ರೀಡೆ ನಿಷೇಧಿಸಬಾರದು ಎಂದು ಸಮಿಯವರು ಸಚಿವರಿಗೆ ಮನವಿ ಸಲ್ಲಿಸಿದರು.

ಮಂಗಳವಾರದಿಂದ ದೀಪೋತ್ಸವ : ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ತಿಕ ಮಾಸದ ಲಕ್ಷದೀಪೋತ್ಸವ ನ. 18ರಿಂದ ಪ್ರಾರಂಭವಾಗಲಿದೆ. ನ. 21ರಂದು ಸರ್ವಧರ್ಮ ಸಮ್ಮೇಳನದ 82ನೇ ಅಧಿವೇಶನ ಹಾಗೂ ನ. 22ರಂದು 82ನೇ ಸಾಹಿತ್ಯ ಸಮ್ಮೇಳನ ನಡೆಯಲಿದೆ. ರಾಜ್ಯಪಾಲ ವಜೂಭಾಯಿವಾಲಾ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಕಾರ್ತಿಕ ಮಾಸದ ಲಕ್ಷ ದೀಪೋತ್ಸದ ಅಂಗವಾಗಿ ನ.18ರಿಂದ 22ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಧರ್ಮಸ್ಥಳ ಪ್ರೌಢ ಶಾಲಾ ಆವರಣದಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ನ.18 ರಂದು ಉದ್ಘಾಟಿಸಲಿದ್ದಾರೆ. [ನ.18ರಿಂದ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ]

ಕೆರಾಡಿ ಗ್ರಾಮ ಆಯ್ಕೆ : ಸಂಸದ ಆದರ್ಶ ಗ್ರಾಮ ಯೋಜನೆಗೆ ಕುಂದಾಪುರ ತಾಲೂಕಿನ ಅತೀ ಹಿಂದುಳಿದ ಪ್ರದೇಶವಾಗಿರುವ ಕೆರಾಡಿ ಗ್ರಾಮವನ್ನು ಆಯ್ಕೆಯಾಗಲಿದೆ. ಈ ಹಿಂದೆ ಗಂಗೊಳ್ಳಿ ಗ್ರಾಮವನ್ನು ದತ್ತು ಸ್ವೀಕಾರ ಮಾಡುವುದಾಗಿ ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದರು. ದತ್ತು ಪಡೆಯುವ ಗ್ರಾಮ ಸುಮಾರು 13 ಸಾವಿರದಷ್ಟು ಜನಸಂಖ್ಯೆ ಹೊಂದಿರಬೇಕಾದ ಕಾರಣ ಸದ್ಯ, ಕೆರಾಡಿಯನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangaluru news for Monday, November 17 : The annual Laksha Deepotsava celebrations will begin at Sri Kshetra Dharmasthala from November 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more