ದೆಹಲಿಯಲ್ಲಿ ಮಂಗಳೂರು ಯುವಕನ ಅಪಹರಣ: 3 ಲಕ್ಷ ರೂ.ಗೆ ಬೇಡಿಕೆ
ಮಂಗಳೂರು, ಜೂನ್ 23: ಪುತ್ತೂರು ತಾಲೂಕಿನ ಹಳೆನೇರಂಕಿ ಎಂಬಲ್ಲಿಯ ಯುವಕನೋರ್ವನನ್ನು ಕೆಲ ದುಷ್ಕರ್ಮಿಗಳು ಅಪಹರಿಸಿದ್ದು ಮೂರೂ ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂಬ ವರದಿಯೊಂದು ಬಂದಿದೆ.
ಹಳೆನೇರಂಕಿ ಕೊರಗಪ್ಪ ಪೂಜಾರಿ ಎಂಬವರ ಪುತ್ರ ಕೃಷ್ಣ ಪ್ರಸಾದ್ (26) ತನ್ನ ನಾಲ್ವರು ಸ್ನೇಹಿತರೊಂದಿಗೆ ಇತ್ತೀಚಿಗೆ ದೆಹಲಿಗೆ ತೆರಳಿದ್ದು ಈ ಸಂದರ್ಭದಲ್ಲಿ ನಾಲ್ವರನ್ನೂ ಅಪಹರಿಸಿ ಹಣದ ಬೇಡಿಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಕೃಷ್ಣ ಪ್ರಸಾದ್ ನಾಪತ್ತೆಯಾದ ಬಗ್ಗೆ ಅವರ ತಂದೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುತ್ರನನ್ನು ಬಿಡಿಸುವ ದೆಸೆಯಲ್ಲಿ ಕ್ರಮ ಕೈಗೊಳ್ಳುವಂತೆ ಸಚಿವ ಡಿ.ವಿ ಸದಾನಂದ ಗೌಡರಲ್ಲಿ ಮೊರೆ ಇಟ್ಟಿದ್ದಾರೆ.

ಕೃಷ್ಣ ಪ್ರಸಾದ್ ಜೊತೆ ಅಭಿಲಾಷ್, ಪ್ರಶಾಂತ್ ದೆಹಲಿಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಕೃಷ್ಣ ಪ್ರಸಾದ್ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದೂ, ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ವಿಪ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಹದಿನೈದು ದಿನಗಳ ಹಿಂದೆ ಊರಿಗೆ ಬಂದವನು ಜೂ. 18 ರಂದು ಬೆಂಗಳೂರಿಗೆ ಹಿಂದಿರುಗದ್ದ. ಅಲ್ಲಿಂದ ಜಿಮ್ ಪರಿಕರಗಳ ಖರೀದಿಗೆಂದು ತನ್ನ ಗೆಳೆಯರೊಂದಿಗೆ ದೆಹಲಿಗೆ ತೆರಳಿದ್ದ.
ಜೂ. 20 ರೆಂದು ಮನೆಗ ಕರೆ ಮಾಡಿ ದೆಹಲಿಗೆ ತಲುಪಿರುವ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ಮನೆಗೆ ಕರೆ ಮಾಡಿ ಇಲ್ಲಿ ನನನ್ನು ಯಾರೋ ಅಪಹರಿಸಿದ್ದಾರೆ. ನಮ್ಮಲ್ಲಿದ್ದ ಎಟಿಎಂ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಗಳನ್ನೂ ಕಸಿದುಕೊಂಡಿದ್ದಾರೆ. 3 ಲಕ್ಷ ರೂ. ಬ್ಯಾಂಕ್ ಖಾತೆಯಲ್ಲಿ ಹಾಕುವಂತೆ ಮನೆಯವರಿಗೆ ತಿಳಿಸಲು ಹೇಳಿದ್ದಾರೆ. ನೀವು ಮೂರು ಲಕ್ಷ ರೂ. ಬ್ಯಾಂಕ್ ಗೆ ಹಾಕಿ ಇಲ್ಲದಿದ್ದರೆ ಇವರು ನಮ್ಮ ಪ್ರಾಣ ತೆಗೆಯುತ್ತಾರೆ ಎಂದು ಗೋಗರೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೃಷ್ಣ ಪ್ರಸಾದ್ ನ ಹೆತ್ತರು ತಮ್ಮ ಪುತ್ರನನ್ನು ರಕ್ಷಿಸುವಂತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಮೊರೆ ಹೋಗಿದ್ದಾರೆ. ಯುವಕರು ದೂರವಾಣಿ ಕರೆ ಮಾಡುತ್ತಿರುವುದು ಹರಿಯಾಣ ಮತ್ತು ದಿಲ್ಲಿ ಬಾರ್ಡರ್ ನಿಂದ ಎಂದು ಪತ್ತೆ ಹಚ್ಚಲಾಗಿದೆ. ಪೊಲೀಸರು ಪತ್ತೆ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.












Click it and Unblock the Notifications