ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಗೋಲಿಬಾರ್‌ ನಡೆದಿದ್ದು ಏಕೆ? ಕಾರಣ ನೀಡಿದ ಯಡಿಯೂರಪ್ಪ

|
Google Oneindia Kannada News

Recommended Video

ಗೋಲಿಬಾರ್‌ ನಿಂದ ಪ್ರಾಣ ಕಳೆದುಕೊಂಡವರ ಕುಟುಂಬ ಭೇಟಿ ಮಾಡಿದ ಬಿಎಸ್ ವೈ | BSY | MANGALORE | ONEINDIA KANNADA

ಮಂಗಳೂರು, ಡಿಸೆಂಬರ್ 21: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮತ್ತು ಪ್ರತಿಭಟನಾಕಾರರ ಮೇಲೆ ಗೋಲಿಬಾರ್‌ ನಿಂದಾಗಿ ಜರ್ಜರಿತವಾಗಿರುವ ಮಂಗಳೂರಿಗೆ ಇಂದು ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ದರು.

ಗೋಲಿಬಾರ್‌ ನಿಂದಾಗಿ ಪ್ರಾಣ ಕಳೆದುಕೊಂಡ ಇಬ್ಬರು ಪ್ರತಿಭಟನಾಕಾರರ ಕುಟುಂಬವನ್ನು ಈ ಸಮಯ ಗೆಸ್ಟ್‌ಹೌಸ್‌ ಒಂದರಲ್ಲಿ ಭೇಟಿ ಮಾಡಿದ ಯಡಿಯೂರಪ್ಪ, ಕುಟುಂಬಕ್ಕೆ ಧೈರ್ಯ ತುಂಬಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗೋಲಿಬಾರ್‌ ನಡೆದಿದ್ದಕ್ಕೆ ಕಾರಣ ನೀಡಿದ ಯಡಿಯೂರಪ್ಪ, 'ಪ್ರತಿಭಟನಾಕಾರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದರು. ಶಸ್ತ್ರಾಸ್ತ್ರ ಕೊಠಡಿಯ ಗೋಡೆ ಒಡೆದು ಒಳಗೆ ನುಗ್ಗಲು ಯತ್ನಿಸಿದ್ದರಿಂದ ಗೋಲಿಬಾರ್ ಮಾಡಬೇಕಾಯಿತು' ಎಂದು ಹೇಳಿದರು.

Mangaluru Golibar: CM Yediyurappa Explains Why Its Happened

ಕಾನೂನು ರೀತಿ ಪರಿಶೀಲನೆ ನಡೆಸಿ ಮೃತರ ಕುಟುಂಬಗಳಿಗೆ ಪರಿಹಾರ ಕೊಡುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.

'ಇಂದು 3 ಗಂಟೆಯಿಂದ 6 ಗಂಟೆ ವರೆಗೆ ಕರ್ಪ್ಯೂ ಸಡಿಸಲಾಗುವುದು, ನಂತರ ರಾತ್ರಿ ಮತ್ತೆ ಕರ್ಪ್ಯೂ ವಿಧಿಸಲಾಗುವುದು. ಭಾನುವಾರ ಸಂಜೆ ವರೆಗೆ ಕರ್ಪ್ಯೂ ಇರುವುದುದಿಲ್ಲ, ರಾತ್ರಿ ಕರ್ಪ್ಯೂ ವಿಧಿಸಲಾಗುವುದು. ಸೋಮವಾರ ಬೆಳಿಗ್ಗೆಯಿಂದ ಕರ್ಪ್ಯೂ ಇರುವುದಿಲ್ಲ ಆದರೆ ನಿಷೇಧಾಜ್ಞೆ ಇರುತ್ತದೆ' ಎಂದರು.

English summary
CM Yediyurappa explains why Mangaluru golibar happened. He said protesters try to enter weapons room of police station, so police started fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X