ಸ್ಕೇಟಿಂಗ್ ಚಾಂಪಿಯನ್ ಶಿಪ್; ಮಂಗಳೂರಿನ ಅನಘಾಗೆ ಮೂರು ಚಿನ್ನದ ಪದಕ

ಮಂಗಳೂರು, ಜೂನ್ 26: ರಾಜ್ಯ ಮಟ್ಟದ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಬಾಲಕಿ ಅನಘಾ ಮೂರು ಚಿನ್ನದ ಪದಕ ಜಯಿಸಿದ್ದಾಳೆ. ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್ 2019ರಲ್ಲಿ ಅನಘಾ ಮೂರು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.

ಮೈಸೂರಿನ ರಾವ್ಸ್ ಸ್ಕೇಟಿಂಗ್ ರಿಂಕ್ ನಲ್ಲಿ ಜೂನ್ 21 ರಿಂದ 23 ರವರೆಗೆ ನಡೆದ ಸ್ಕೇಟಿಂಗ್ ಚಾಂಪಿಯನ್ ಶಿಪ್ ನ 9 ರಿಂದ 11 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 500 ಮೀಟರ್ ರಿಂಕ್ ರೇಸ್, 1000 ಮೀಟರ್ ರಿಂಕ್ ರೇಸ್ ಹಾಗೂ 1 ಲ್ಯಾಪ್ ರೋಡ್ ರೇಸ್ ನಲ್ಲಿ ತಲಾ ಮೂರು ಚಿನ್ನದ ಪದಕ ಪಡೆದ ಅನಘಾ, ರಾಜ್ಯಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.

Mangaluru girl bags 3 gold medals in skating

ಮಂಗಳೂರಿನ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿ ಮಗಳಾದ ಅನಘಾ ಮಂಗಳೂರಿನ ಬಿಜೈ ಲೂರ್ಡ್ಸ್ ಸಿಬಿಎಸ್ಇ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ. ಮಂಗಳೂರಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ನ ಸದಸ್ಯೆಯಾಗಿದ್ದು, ತರಬೇತುದಾರರಾದ ಮೋಹನ್ ದಾಸ್.ಕೆ ಹಾಗೂ ಜಯರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+