ಮಂಗಳೂರು: ಡಿಸೆಂಬರ್ 26ರಿಂದ ಮೂರು ದಿನಗಳ ಕಾಲ KSRTC ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ
ಮಂಗಳೂರು, ಡಿಸೆಂಬರ್, 25: ಮೂಡುಬಿದಿರೆಯಲ್ಲಿ ಜಾಂಬೂರಿ ನಡೆಯುತ್ತಿದ್ದು, ಈ ಹಿನ್ನೆಲೆ ರಾಜ್ಯ, ಹೊರ ರಾಜ್ಯಗಳಿಂದ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ 50,000ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಜಾಂಬೂರಿಗೆ ಆಗಮಿಸಿದ್ದಾರೆ. ಅಲ್ಲದೇ ಅವರ ಜೊತೆಗೆ ಪೋಷಕರು, ಶಿಕ್ಷಕರು ಸಹ ಆಗಮಿಸಿದ್ದಾರೆ. ಇವರೆಲ್ಲರೂ ಜಾಂಬೂರಿ ಮುಗಿಸಿ ತಮ್ಮ ಊರುಗಳಿಗೆ ಹಿಂದಿರುಗುವ ವೇಳೆ ಡಿಸೆಂಬರ್ 26ರಿಂದ 28ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಹೊರಬಿದ್ದಿದೆ.

KSRTC ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ
ಕಾರ್ಯಕ್ರಮ ಮುಗಿಸಿ ತಮ್ಮ ಊರುಗಳಿಗೆ ಹಿಂತಿರುಗುವಾಗ ಮೂಡಬಿದಿರೆಯಿಂದ ರಾಜ್ಯದ ವಿವಿಧ ಸ್ಥಳಗಳಿಗೆ, ರೈಲು ನಿಲ್ದಾಣಗಳಿಗೆ ಹೆಚ್ಚುವರಿ ಸಾರಿಗೆಗಳ ವ್ಯವಸ್ಥೆ ಮಾಡಿ ವಾಹನಗಳನ್ನು ನಿಯೋಜಿಸಬೇಕಾಗಿರುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದ್ದರಿಂದ ಧರ್ಮಸ್ಥಳ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಾಸರಗೋಡು ವಲಯಗಳಲ್ಲಿ ಕಾರ್ಯಾಚರಣೆಯಲ್ಲಿರುವ ಬಸ್‌ಗಳ ಕೊರತೆ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆಯಲ್ಲಿ ಜಾಂಬೂರಿ ಕಾರ್ಯಕ್ರಮ
ಮೂಡುಬಿದಿರೆ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದ್ದರು. ಎಲ್ಲರಿಗೂ ಕನ್ನಡದಲ್ಲಿಯೇ ನಮಸ್ಕಾರ ಎಂದು ಭಾಷಣ ಆರಂಭಿಸಿದ ಅವರು, ಐವತ್ತು ಸಾವಿರ ಸ್ಕೌಟ್ಸ್, ಗೈಡ್ಸ್ ಪ್ರಶಿಕ್ಷಣಾರ್ಥಿಗಳು ಜಾಂಬೂರಿಯಲ್ಲಿ ಪಾಲ್ಗೊಂಡಿರುವುದು ಖುಷಿಯ ವಿಚಾರವಾಗಿದೆ. ಹಲವಾರು ಮೇಳಗಳನ್ನು ಜಾಂಬೂರಿಯಲ್ಲಿ ಗಮನಸೆಳೆದಿವೆ. ಇಂತಹ ಸಾಂಸ್ಕೃತಿಕ ಹಬ್ಬವು ಎಲ್ಲರ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.

ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಯೋಧರಾಗಿ ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ದೇಶವು ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ಸ್ವಚ್ಚತಾ ಅಭಿಯಾನ ಬಹುದೊಡ್ಡ ಯೋಗಧಾನ ಆಗಿದೆ ಎಂದು ಹೇಳಿದರು. ಯುವ ಜನರಿಗೆ ಖೇಲೋ ಇಂಡಿಯಾ, ಭಾರತೀಯ ಕ್ರೀಡೆ ಕಬಡ್ಡಿಯನ್ನು ಉರ್ಜೀತಗೊಳಿಸುವುದಕ್ಕೆ ದೇಶದ ಎಲ್ಲ ಸಂಸದರಿಗೆ ನೀಡಿದ್ದಾರೆ ಎಂದರು. ಭಾರತವು ಒಂದೇ ಕುಟುಂಬ, ವಸುಧೈವ ಕುಟುಂಬದ ಆಶಾದಾಯಕ ಭಾವನೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದರು.












Click it and Unblock the Notifications