• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಪ್‌ವೆಲ್‌ ಮೇಲ್ಸೇತುವೆ ಕೊನೆಗೂ ಉದ್ಘಾಟನೆ, ಆದರೆ ಓಡಾಡುವಂತಿಲ್ಲ!

|

ಮಂಗಳೂರು, ಜನವರಿ 01: ದಶಕದಿಂದಲೂ ಕಾಮಗಾರಿ ಪೂರ್ಣವೇ ಆಗದೆ ಹಾಸ್ಯದ ವಸ್ತುವಾಗಿಬಿಟ್ಟಿರುವ ಪಂಪ್‌ವೆಲ್‌ ಮೇಲ್ಸೇತುವೆ ಕೊನೆಗೂ ಇಂದು ಉದ್ಘಾಟನೆ ಕಂಡಿದೆ. ಹಾಗೆಂದು ಇದು ನಿಜದ ಉದ್ಘಾಟನೆ ಅಲ್ಲ, ಅಣಕು ಉದ್ಘಾಟನೆ.

ಹೌದು, 2009 ರಲ್ಲಿ ಪ್ರಾರಂಭವಾಗಿದ್ದ ಕಾಮಗಾರಿ ಒಂದು ದಶಕವಾದರೂ ಪೂರ್ಣವಾಗಿಲ್ಲ. ಹಾಗಾಗಿ ಸ್ಥಳೀಯ ಕಾಂಗ್ರೆಸ್ಸಿಗರು ಅರ್ಧ ಕಾಮಗಾರಿ ಮುಗಿದಿರುವ ಪಂಪ್‌ವೆಲ್‌ ಮೇಲ್ಸೇತುವೆಯನ್ನು ಅಣಕು ಉದ್ಘಾಟನೆ ಮಾಡಿದ್ದಾರೆ.

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಕೂಡಲೇ ಉದ್ಘಾಟನೆ ಮಾಡುವಂತೆ ಒತ್ತಡ ಹೆಚ್ಚಾದಾಗ, ಜನವರಿ ಮೊದಲ ವಾರದಲ್ಲಿ ಪಂಪ್‌ವೆಲ್‌ ಸೇತುವೆ ಉದ್ಘಾಟನೆ ಖಾಯಂ ಎಂದಿದ್ದರು. ಆದರೆ ಇನ್ನೂ ಕಾಮಗಾರಿ ಮುಗಿದಿಲ್ಲ, ಹಾಗಾಗಿ ಉದ್ಘಾಟನೆ ಸಾಧ್ಯವಿಲ್ಲ. ಇದನ್ನು ಅಣಕ ಮಾಡಲೆಂದು ಕಾಂಗ್ರೆಸ್ ಅಣಕು ಉದ್ಘಾಟನೆ ಮಾಡಿದೆ.

ನಳಿನ್ ಕಟೀಲ್, ಸಿಎಂ ಯಡಿಯೂರಪ್ಪ, ಈಶ್ವರಪ್ಪ ಇನ್ನೂ ಮುಂತಾದ ರಾಜ್ಯ ನಾಯಕರುಗಳ ಚಿತ್ರವನ್ನು ಮುಖವಾಡದಂತೆ ಧರಿಸಿ ತಾವೇ ಪಂಪ್‌ವೇಲ್ ಸೇತುವೆ ಉದ್ಘಾಟನೆ ಮಾಡಿದ್ದಾರೆ. ಈ ಪ್ರತಿಭಟನೆ ಕಾಂಗ್ರೆಸ್ ನಾಯಕ ಐವಾನ್ ಡಿಸೋಜಾ ನೇತೃತ್ವದಲ್ಲಿ ನಡೆದಿದೆ.

ಪಂಪ್‌ವೆಲ್‌ ಮೇಲ್ಸೇತುವೆ ನಳಿನ್ ಕುಮಾರ್ ಅವರನ್ನು ವ್ಯಂಗ್ಯ ಮಾಡಲು ವಸ್ತುವಾಗಿ ಉಪಯೋಗಿಸಲಾಗುತ್ತಿದೆ. ಕೆಲವು ದಿನದ ಹಿಂದೆ ಟೆನ್‌ಇಯರ್ಸ್‌ ಚಾಲೆಂಜ್ ಎಂಬ ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್ ಆದಾಗ, ಪಂಪ್‌ವೆಲ್ ಮೇಲ್ಸೇತುವೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಗೂಗಲ್‌ ನಲ್ಲಿ ಸಹ ಪಂಪ್‌ವೆಲ್‌ ಎಂದು ಇಂಗ್ಲಿಷ್‌ನಲ್ಲಿ ಟೈಪ್ ಮಾಡಿದರೆ ಸಜೆಶನ್‌ಗಳು 'ಪಂಪ್‌ವೆಲ್ ಫ್ಲೈಓವರ್ ಜೋಕ್ಸ್‌', 'ಪಂಪ್‌ವೆಲ್ ಫ್ಲೈಓವರ್ ಮೀಮ್ಸ್‌' ಎಂದು ತೋರಿಸುತ್ತದೆ.

English summary
Mangaluru congress today did mock inauguration of Pumpwell flyover in Mangaluru. Pumpwell flyover work in progress from many years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X