ತುಳುನಾಡು ರಾಜರ ಸ್ಮರಣೆ, ಗಸ್ತು ವಾಹನಗಳಿಗೆ ಮರುನಾಮಕರಣ

ಮಂಗಳೂರು, ಅಕ್ಟೋಬರ್, 20 : ನಗರ ಪೋಲೀಸ್ ಕಮಿಷನರ್ ವ್ಯಾಪ್ತಿಯ ಗಸ್ತು ವಾಹನಗಳಿಗೆ ಮರುನಾಮಕರಣ ಮಾಡಲಾಗಿದೆ . ತುಳುನಾಡ ಚರಿತ್ರೆಯನ್ನು ಆಧರಿಸಿ ಗಸ್ತು ಮೋಟರ್ ಬೈಕ್ ಗಳಿಗೆ 'ಅಳುಪಸ್', ಜೀಪ್ ಗಳಿಗೆ 'ಪಂದ್ಯಾಸ್' ಎಂದು ಹೆಸರಿಡಲಾಗಿದೆ.

'ಬೇರೆ ಬೇರೆ ಸ್ಥಳಗಳ ಸ್ಥಳೀಯ ಚರಿತ್ರೆ ಆಧರಿಸಿ ಗಸ್ತು ವಾಹನಗಳಿಗೆ ಹೆಸರಿಡಲಾಗಿದೆ. ಹೊಯ್ಸಳ, ಚಾಲುಕ್ಯ ಇವೆಲ್ಲವೂ ಇದಕ್ಕೆ ಉದಾಹರಣೆ. ಅದೇ ರೀತಿ ಮಂಗಳೂರಿನ ಗಸ್ತು ವಾಹನಗಳಿಗೆ ಮರುನಾಮಕರಣ ಮಾಡಲಾಗಿದೆ. ತುಳುನಾಡಿನಲ್ಲಿ ಆಳ್ವಿಕೆ ನಡಸಿದ ಪ್ರಮುಖ ರಾಜ ಮನೆತನಗಳಾದ 'ಆಳುಪರು' ಮತ್ತು 'ಪಾಂಡ್ಯರು' ಎಂದು ನಾಮಕರಣ ಮಾಡಲಾಗಿದೆ' ಎಂದು ಆಯುಕ್ತ ಎಸ್. ಮುರುಗನ್ ಹೇಳಿದರು.[ಚಾಲಕರೇ,ಹಿಂಬದಿ ಸವಾರರೇ ಹೆಲ್ಮೆಟ್ ಧರಿಸಲು ಸಿದ್ಧರಾಗಿ]

Mangaluru City police commissioner vehicles name has changed like 'Alupas' and 'Pandyas'

ನಗರ ಪೋಲೀಸ್ ವಿಭಾಗದಲ್ಲಿ 110 ಮೋಟರ್ ಬೈಕ್ ಗಳಿವೆ. ಎಲ್ಲವನ್ನೂ ವಿವಿಧ ಠಾಣೆಗಳಿಗೆ ಹಂಚಿಕೆ ಮಾಡಿದ್ದು, ಮರುನಾಮಕರಣ ಸಂದರ್ಭದಲ್ಲಿ ಹೊಸದಾಗಿ ಬಣ್ಣ ಬಳಿದು, ದುರಸ್ತಿ ಮಾಡಿಸಲಾಗಿದೆ. ಅಳುಪರ ಮಾದರಿಯಲ್ಲಿ ಜೋಡಿ ಮೀನುಗಳ ಚಿತ್ರವನ್ನು ಬಳಸುತ್ತಿರುವ 13 ಜೀಪ್ ಗಳಿಗೆ 'ಪಂದ್ಯಾಸ್' ಎಂದು ಹೆಸರಿಸಲಾಗಿದೆ .[ಬೆಂಗಳೂರು ಸಂಚಾರ ಸಮಸ್ಯೆ ಬಗೆಹರಿಸಲು ಸಲಹೆ ಕೊಡಿ]

ಹೊಸ ಹೆಸರುಗಳ ಬಳಕೆ ಸಂಬಂಧ ಎಲ್ಲ ಪೋಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಪೋಲೀಸ್ ವೈಯರ್ ಲೆಸ್ ಸಂದೇಶದಲ್ಲೂ ಹೊಸ ಹೆಸರುಗಳನ್ನು ಬಳಕೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ನಗರದಲ್ಲಿ ಇಕ್ಕಟ್ಟಾದ ರಸ್ತೆಗಳಿರುವ ಪ್ರದೇಶಗಳು ಹೆಚ್ಚಿವೆ. ಹಲವು ರಸ್ತೆಗಳಲ್ಲಿ ಜೀಪ್ ಗಳು ಸಂಚರಿಸಲು ಸಾಧ್ಯವಿಲ್ಲದ ಕಡೆಗಳಲ್ಲಿ 'ಅಳುಪಸ್' ನ್ನು ನಿಯೋಜಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ರಾತ್ರಿ ಗಸ್ತನ್ನು ಹೆಚ್ಚಿಸಲಾಗುವುದು ಎಂದು ಮುರುಗನ್ ಹೇಳಿದರು.

ಬದಲಾವಣೆ ಅಗತ್ಯ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನಂತೂರು , ಪೊಂಪ್ವೆಲ್ ಮತ್ತು ಪಡೀಲ್ ಜಂಕ್ಶನ್ ಗಳಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳಿವೆ . ನಂತೂರಿನಲ್ಲಿ ಈಗ ಸಂಚಾರ ಸಿಗ್ನಲ್ ಅಳವಡಿಸಿದ್ದು, ಇದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಕೆಲವು ದಿನಗಳ ಅಧ್ಯಯನದ ಬಳಿಕ ವಾಹನ ದಟ್ಟಣೆ ಆಧರಿಸಿ ಸಿಗ್ನಲ್ ಗಳ ಸಮಯ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+