ಮಂಗಳೂರು: ನಿಂತಲ್ಲಿಯೇ ಧಗಧಗ ಹೊತ್ತಿ ಉರಿದ ಕಾರು
ಮಂಗಳೂರು: ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಕಾರೊಂದು ಬೆಂಕಿಗೆ ಆಹುತಿಯಾದ ಘಟನೆ ಮಂಗಳೂರಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ನಗರ ಹೊರವಲಯದ ಕಾವೂರು ಎಂಬಲ್ಲಿ ಈ ಘಟನೆ ಸಂಭವಿಸಿದೆ. ಶಾರ್ಟ್ ಸರ್ಕೀಟ್‌ಗೆ ಒಳಗಾದ ಕಾರು ನಿಂತಿದ್ದ ಜಾಗದಲ್ಲಿಯೇ ಬೆಂಕಿ ಹತ್ತಿಕೊಂಡು ಧಗಧಗನೆ ಉರಿದು ಹೋಗಿದೆ.
ಬಜ್ಪೆ ನಿವಾಸಿಯಾದ ಜಯರಾಜ್ ಎಂಬುವವರು ರಾತ್ರಿ ಮಂಗಳೂರಿನ ಕಾವೂರಿನಲ್ಲಿ ರಸ್ತೆ ಬದಿ ಐ 20 ಹುಂಡೈ ಕಾರನ್ನು ನಿಲ್ಲಿಸಿ, ಸಾಮಾನು ಖರೀದಿಗೆ ಸಮೀಪದಲ್ಲೇ ಇದ್ದ ಅಂಗಡಿಯೊಂದಕ್ಕೆ ಹೋಗಿದ್ದರು.

ಆ ವೇಳೆಗೆ ಕಾರ್‌ಗೆ ಬೆಂಕಿ ಹೊತ್ತಿಕೊಂಡಿದೆ. ಎಲ್ಲರೂ ನೋಡ ನೋಡುತ್ತಿದ್ದಂತೆ ಜ್ವಾಲೆ ಉಗುಳುತ್ತಾ ಉರಿಯತೊಡಗಿದೆ. ಬಳಿಕ ಅಗ್ನಿಶಾಮಕ ದಳ ಹಾಗು ಪೊಲೀಸರು ಸೇರಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಕಾರು ಸಂಪೂರ್ಣ ಉರಿದು ಹೋಗಿತ್ತು.
ಬಜ್ಪೆ ನಿವಾಸಿ ಜಯರಾಜ್ ಅವರು ಮಂಗಳೂರಿಗೆ ಆಗಮಿಸಿ ಹಿಂತಿರುಗಿ ಹೋಗುವ ಮಧ್ಯೆ ಘಟನೆ ನಡೆದಿದೆ.












Click it and Unblock the Notifications