ಆಸ್ಪತ್ರೆಯಿಂದ ಹೊರ ಬಂದ ಮಂಗಳೂರು ಸ್ಫೋಟದ ಆರೋಪಿ, ಎನ್‌ಐಎ ಕಸ್ಟಡಿಗೆ
ಮಂಗಳೂರು ಸ್ಫೋಟದ ಆರೋಪಿ ಆಸ್ಪತ್ರೆಯಿಂದ ಹೊರ ಬಂದಿದ್ದು ಆತನನ್ನು ಎನ್‌ಐಎ ಕಸ್ಟಡಿಗೆ ಪಡೆದಿದೆ.
ಮಂಗಳೂರು ಆಟೋ ರಿಕ್ಷಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಸೋಮವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 19 ರಂದು ಆಟೋ ರಿಕ್ಷಾದಲ್ಲಿ ಸ್ಫೋಟ ಸಂಭವಿಸಿದ್ದು, ಅದರ ಚಾಲಕ ಪುರುಷೋತ್ತಮ್ ಮತ್ತು ಪ್ರಯಾಣಿಕ ಗಾಯಗೊಂಡಿದ್ದಾರೆ. 24 ವರ್ಷದ ತೀರ್ಥಹಳ್ಳಿ ಮೂಲದ ಆರೋಪಿ ಶಾರಿಕ್ ಪ್ರೆಶರ್ ಕುಕ್ಕರ್‌ನಲ್ಲಿ ಇರಿಸಲಾದ ಸುಧಾರಿತ ಸ್ಫೋಟಕ ಸಾಧನದೊಂದಿಗೆ (ಐಇಡಿ) ಪ್ರಯಾಣಿಸುತ್ತಿದ್ದಾಗ ಅದು ಸ್ಫೋಟಗೊಂಡಿದೆ.

ಸ್ಫೋಟದಲ್ಲಿ ಶಾರಿಕ್ 25% ಕ್ಕಿಂತ ಹೆಚ್ಚು ಸುಟ್ಟಗಾಯಗಳಾಗಿತ್ತು. ಸ್ಫೋಟದ ಹೊಗೆ ಅವನ ಶ್ವಾಸಕೋಶವನ್ನು ತುಂಬಿದ ನಂತರ ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದರಿಂದ ಶಂಕಿತನ ವಿಚಾರಣೆಯನ್ನು ವಿಳಂಬಗೊಳಿಸಲಾಯಿತು. ಆತ ಎರಡೂವರೆ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದನು. ಮೊಹಮ್ಮದ್ ಶಾರಿಕ್ ಅವರನ್ನು ಡಿಸೆಂಬರ್ 17, 2022 ರಂದು ಮಂಗಳೂರಿನ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಎರಡು ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿರುವುದರಿಂದ ಎನ್‌ಐಎ ಆತನ ಕಸ್ಟಡಿಗೆ ಪಡೆದುಕೊಂಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ, ಖೊರಾಸನ್ ಪ್ರಾಂತ್ಯದ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್‌ಕೆಪಿ) ಕಳೆದ ವರ್ಷ ಮಂಗಳೂರಿನಲ್ಲಿ ನಡೆದ ಸ್ಫೋಟದ ಹೊಣೆಗಾರಿಕೆಯನ್ನು ಹೊತ್ತುಕೊಂಡಿತು.

ಮಂಗಧಿಳೂರು ಗೋಡೆ ಬರಹ ಪ್ರಕರಣದ ಆರೋಪಿ
ಬಂಧಿತ ಎನ್ನಲಾದ ಮಹಮ್ಮದ್ ಶಾರೀಕ್(25) ಮಂಗಧಿಳೂರು ಗೋಡೆ ಬರಹ ಪ್ರಕರಣದ ಆರೋಪಿಯೂ ಹೌದು. ಈತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ. ಸ್ಪೋಟದ ದಿನ ಮಂಗಳೂರಿನ ನಾಗುರಿ ವೈನ್ ಶಾಪ್ ಒಂದಕ್ಕೆ ಇನ್ನೊಬ್ಬ ವ್ಯಕ್ತಿ ಜತೆ ಈತ ಒಂದು ಬಾಟಲಿ ಮದ್ಯ ಖರೀದಿಸಿದ್ದಾನೆ.
ಇದಾದ ಬಳಿಕ ಇಬ್ಬರೂ ಎರಡೆರಡು ಬಾರಿ ಅತ್ತಿಂದಿತ್ತ ಸುತ್ತಾಡಿದ್ದರು. ರಿಕ್ಷಾದಲ್ಲಿ ಕುಕ್ಕರ್ ಸಾಗಿಸುವಾಗ ಒಂದರ ಮೇಲೆ ಒಂದರಂತೆ ಮೂರು ಅಂಗಿಗಳನ್ನು ಧರಿಸಿರುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಇದರಿಂದ ಆತ ಸುಸೈಡ್ ಬಾಂಬರ್ ಆಗಿಯೇ ಬಂದಿರುವ ಸಾಧ್ಯತೆಯಿದೆ. ಆತ ಕುಕ್ಕರ್ ಬಾಂಬನ್ನು ನಗರದ ಯಾವುದೋ ಜನನಿಬಿಡ ಪ್ರದೇಶದಲ್ಲಿಡಲು ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ವೈನ್ ಶಾಪ್‌ಗೆ ಶಾಕೀರ್ ಜತೆ ಮದ್ಯ ಖರೀದಿಗೆ ಬಂದ ವ್ಯಕ್ತಿ ಯಾರು ಎನ್ನುವುದನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಪ್ರಯತ್ನ ಆರಂಭಿಸಿದ್ದಾರೆ. ಶಾಕೀರ್ ರಿಕ್ಷಾದಲ್ಲಿ ತೆರಳಿದ ಮೇಲೆ ಆತ ಆ ಸ್ಥಳದಿಂದ ನಾಪತ್ತೆಯಾಗಿದ್ದು ಆತನಿಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಈತ ಮಂಗಳೂರಿನ ಕದ್ರಿ ಮಂಜುನಾಥಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಟಾರ್ಗೆಟ್ ಇಟ್ಟಿದ್ದ. ಪ್ರಮುಖವಾಗಿ ಕದ್ರಿ ದೇವಸ್ಥಾನಕ್ಕೆ ಬಾಂಬ್ ಇಡುವ ಪ್ಲಾನ್ ಇತ್ತು. ಇದು ಮಿಸ್ಸಾದ್ರೆ ಬೇರೆ ಕಡೆ ಇಡುವ ಪ್ಲಾನ್ ಹೊಂದಿದ್ದ. ಇನ್ನು ಇಷ್ಟೆಲ್ಲಾ ಅಂಶಗಳು ಪೊಲೀಸರು ಮತ್ತು ಎನ್.ಐ.ಎ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ತಿಳಿದು ಬಂದಿತ್ತು. ಹೆಚ್ಚಿನ ತನಿಖೆಗಾಗಿ ಆತನನ್ನು ವಶಕ್ಕೆ ಪಡೆಯಲಾಗಿದೆ.












Click it and Unblock the Notifications