ಪಿಣರಾಯಿ ಕಾರ್ಯಕ್ರಮಕ್ಕೆ 3,400 ಪೊಲೀಸರಿಂದ ಭದ್ರತೆ

ಕೇರಳ ಸಿ ಎಂ ಪಿಣರಾಯಿ ವಿಜಯನ್ ಫೆ. 25 ರಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಒಟ್ಟು 3,400ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಮಂಗಳೂರು, ಫೆಬ್ರವರಿ 23: ಕೇರಳ ಸಿ ಎಂ ಪಿಣರಾಯಿ ವಿಜಯನ್ ಫೆ. 25 ರಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಒಟ್ಟು 3,400 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಸೇಖರ್ 'ಒನ್ ಇಂಡಿಯಾ'ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಮ್ಮಿಕೊಂಡಿರುವ ಸೌಹಾರ್ದ ರ್ಯಾಲಿ ಮತ್ತು ಬಹಿರಂಗ ಸಭೆಗೆ ಪಿಣರಾಯಿ ವಿಜಯನ್ ಆಗಮನವನ್ನು ಸಂಘಪರಿವಾರ ವಿರೋಧಿಸಿ ಅದೇ ದಿನ ಬಂದಿಗೆ ಕರೆ ನೀಡಿದೆ. ಬಂದ್, ಹರತಾಳ ಕರೆ ನೀಡುವವರಿಗೆ ಸೆಕ್ಷನ್ 102 ರ ಅಡಿಯಲ್ಲಿ ನೋಟೀಸ್ ಜಾರಿ ಮಾಡಲಾಗುವುದು ಎಂದು ಚಂದ್ರಸೇಖರ್ ಹೇಳಿದ್ದಾರೆ.[ದಕ್ಷಿಣ ಕನ್ನಡ ಬಂದ್ ಬಿಸಿ ಹೆಚ್ಚಳ : ಮದ್ಯ ಮಾರಾಟ ನಿಷೇಧ]

Mangaluru: After bundh call, high police security for Pinarayi program

ಈಗಾಗಲೇ ಸಂಘ ಪರಿವಾರದ 44 ಮಂದಿ ಕಾರ್ಯಕರ್ತರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಕಾರ್ಯಕ್ರಮದ ದಿನ ಹೊರ ರಾಜ್ಯದ 2 ಸಾವಿರ ಪೊಲೀಸರು ಕೇರಳ ಮುಖ್ಯಮಂತ್ರಿ ಭದ್ರತೆಗೆ ಬರಲಿದ್ದಾರೆ. ಜತೆಗೆ ರಾಜ್ಯದ 1,400 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದು ಚಂದ್ರಸೇಖರ್ ತಿಳಿಸಿದ್ದಾರೆ.[ಉಳ್ಳಾಲ ವಲಯದ ಸಿಪಿಐಂ ಕಚೇರಿಗೆ ದುಷ್ಕರ್ಮಿಗಳಿಂದ ಬೆಂಕಿ]

ಶುಕ್ರವಾರ ಬೆಳಗ್ಗೆ ಉಳ್ಳಾಲ ವ್ಯಾಪ್ತಿಯ ಸಿಪಿಎಂ ಕಚೇರಿಗೆ ಬೆಂಕಿ ಹಾಕಿದ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತಂಡವನ್ನು ನೇಮಕ ಮಾಡಲಾಗಿದೆ. ಅತೀ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+