ಮನೆಗೆ ಮರಳುತ್ತಿದ್ದವನಿಗೆ ಜವರಾಯನಾದ ಲಾರಿ
ಮಂಗಳೂರು. ಸೆ. 6: ರುಚಿಯಾದ ಮನೆ ಊಟ ಸವಿಯಲು ಮೀನು ಕೊಂಡೊಯ್ಯುತ್ತಿದ್ದ ತಂದೆ ರಸ್ತೆ ಮಧ್ಯೆಯೇ ದಾರುಣ ಸಾವಿಗೀಡಾಗಿದ್ದಾರೆ. ತೆಗೆದುಕೊಂಡು ಹೋಗುತ್ತಿದ್ದ ಮಲ್ಲಿಗೆ ಹೂವು ರಸ್ತೆಯಲ್ಲೇ ಬಿದ್ದು ಬಾಡಿಹೋಗಿದೆ.

ಇಂಥ ಹೃದಯವಿದ್ರಾವಕ ಘಟನೆ ನಡೆದಿರುವುದು ಮಂಗಳೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ. ಮಂಗಳೂರಿನ ಮಾಡೂರು ನಿವಾಸಿ ಜಯಪ್ರಕಾಶ್ (53) ರಸ್ತೆ ಅಪಘಾತದಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ನೋಂದಣಿಯ ಲಾರಿಗೆ ಅಪ್ಪಳಿಸಿದ ಸ್ಕೂಟಿಯಲ್ಲಿದ್ದ ಜಯಪ್ರಕಾಶ್ ಶನಿವಾರ ಮುಂಜಾವು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ರಿಯಲ್ ಎಸ್ಟೇಟ್ ದಲ್ಲಾಳಿ ಕೆಲಸ ಮಾಡುತ್ತಿದ್ದ ಜಯಪ್ರಕಾಶ್ ಮಗಳನ್ನು ತೊಕ್ಕೊಟ್ಟುವಿನಲ್ಲಿರುವ ಶಾಲೆಗೆ ಬಿಟ್ಟು ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚರಿಸುತ್ತಿದ್ದ ಲಾರಿ ಅಪ್ಪಳಿಸಿದೆ. ಪರಿಣಾಮ ಜಯಪ್ರಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಲಾರಿ ಚಾಲಕ ಪರಾರಿಯಾಗಿದ್ದು ಉಲ್ಲಾಳ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications