ಹಲ್ಲೆಗೊಳಗಾದ ಮುಸ್ಲಿಂ ಯುವಕ ಮಾಡಿದ ತಪ್ಪೇನು ಗೊತ್ತಾ?
ಮಂಗಳೂರು, ಆಗಸ್ಟ್, 25 : ಅನ್ಯ ಕೋಮಿನ ಇಬ್ಬರು ಸಹೋದ್ಯೋಗಿಗಳ ಮಾತುಕತೆ ನಗರದಲ್ಲಿ ಭಾರೀ ಸಂಘರ್ಷಕ್ಕೆ ಕಾರಣವಾಗಿದ್ದು, ಕೆಲವು ಘಂಟೆಗಳ ಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಮುಸ್ಲಿಂ ಯುವಕ ತನ್ನ ಸಹೋದ್ಯೋಗಿ ಹಿಂದೂ ಮಹಿಳೆಯೊಂದಿಗೆ ಮಾತಿಗಿಳಿರುವುದನ್ನು ಕಂಡ ಭಜರಂಗ ದಳದ 13 ಯುವಕರ ತಂಡ ಯುವಕನ ಮೇಲೆ ದಾಳಿ ನಡೆಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂಬಂಧ ಯುವಕರನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.[ಮತಾಂತರ ಏಕೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ?]

ಮಂಗಳೂರಿನ ಕೂಳೂರು ನಿವಾಸಿಯಾದ ಶಕೀರ್ ಮತ್ತು ಮೂಡಿಗೆರೆ ನಿವಾಸಿಯಾದ ಯುವತಿ ಇಬ್ಬರು ಸೂಪರ್ ಮಾರ್ಕೆಟಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಇವರಿಬ್ಬರನ್ನು ಕಾರಿನಲ್ಲಿ ಕಂಡ ಭಜರಂಗ ದಳದ ಕಾರ್ಯಕರ್ತರು ಆತನನ್ನು ತಡೆದು ಅರೆಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿ ಹಾಕಿ ಹೊಡೆದಿದ್ದಾರೆ.
ಮಂಗಳೂರಿನ ಅತ್ತಾವರ ಬಾಬು ಗಡ್ಡೆಯಲ್ಲಿ ಈ ಘಟನೆ ನಡೆದಿದ್ದು, ಶಕೀರ್ ಮತ್ತು ಯುವತಿಯ ಕಾರನ್ನು ಹಿಂಬಾಲಿಸಿದ ಹಿಂದೂ ಸಂಘಟನಾ ಕಾರ್ಯಕರ್ತರು ಅವರಿಬ್ಬರಿದ್ದ ಕಾರು ಅತ್ತಾವರ ಬಾಬುಗುಡ್ಡೆ ಹತ್ತಿರ ಬರುತ್ತಿದ್ದಂತೆ ದಾರಿಯಲ್ಲಿ ಅಡ್ಡಗಟ್ಟಿ ದಾಂಧಲೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಯುವಕ ಯುವತಿಯರಿಂದ ಹೇಳಿಕೆ ಪಡೆದದ ಪೊಲೀಸರು ತನಿಖೆ ಆರಂಭಿಸಿದ್ದು, ನಗರದಲ್ಲಿ ಅಶಾಂತಿ ನಿರ್ಮಿಸಿ ತಲೆಮರೆಸಿಕೊಂಡ ಭಜರಂಗ ದಳದ ಕೆಲವು ಯುವಕರ ಹುಡುಗಾಟದಲ್ಲಿ ತೊಡಗಿದ್ದಾರೆ.
Mangalore:Alleged right-wing activists strip & thrash man for being in the company of a woman from another community https://t.co/f19zAWQJW5
— TIMES NOW (@TimesNow) August 25, 2015 











Click it and Unblock the Notifications