ಚೈತ್ರಾ ಕುಂದಾಪುರ ಬೀದಿ ಹೆಣವಾಗಬೇಕು: ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟ

ಮಂಗಳೂರು, ಅಕ್ಟೋಬರ್. 25: ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಬುಧವಾರ (ಅ.24) ನಡೆದ ಹಿಂದೂ ಜಾಗರಣ ವೇದಿಕೆ ಮುಖಂಡನ ಮೇಲಿನ ಹಲ್ಲೆ ಖಂಡಿಸಿ ಸುಬ್ರಹ್ಮಣ್ಯ ನಾಗರಿಕರು ಇಂದು ಗುರುವಾರ ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಿದ್ದಾರೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂಡ ನಿನ್ನೆ ರಾತ್ರಿ ಹಿಂದೂ ಜಾಗರಣಾ ವೇದಿಕೆ ಮುಖಂಡ ಗುರುಪ್ರಸಾದ್ ಪಂಜ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪದಡಿ ಸುಬ್ರಹ್ಮಣ್ಯ ಸಾರ್ವಜನಿಕರು ಈ ಬಂದ್ ಗೆ ಕರೆ ನೀಡಿದ್ದಾರೆ.

ಈ ಬೀದಿ ಕಾಳಗ ಘಟನೆಗೆ ಸಂಬಂಧಿಸಿದಂತೆ ಹಿಂದೂ ಜಾಗರಣಾ ವೇದಿಕೆ ಮುಖಂಡ ಗುರುಪ್ರಸಾದ್ ಪಂಜ ಹಾಗೂ ಚೈತ್ರಾ ಕುಂದಾಪುರ ತಂಡದ ವಿರುದ್ಧ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಒಬ್ಬರು ಇದೀಗ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚೈತ್ರಾ ಕುಂದಾಪುರ ಜೊತೆಗೆ ಬಂದ 6 ಮಂದಿಯನ್ನು ಸುಬ್ರಹ್ಮಣ್ಯ ಪೋಲೀಸರು ಬಂಧಿಸಿದ್ದಾರೆ. ಅಲ್ಲದೆ ಚೈತ್ರಾ ಕುಂದಾಪುರ ಉಪಯೋಗಿಸಿದ ಇನ್ನೋವಾ ಕಾರನ್ನೂ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇದರ ನಡುವೆಯೇ ಇನ್ನೊಂದು ವಿಚಾರ ಬೆಳವಣಿಗೆಯಾಗಿದೆ ಅದೇನೆಂದು ಮುಂದೆ ಓದಿ...

 ವಿವಾದಾತ್ಮಕ ಪೋಸ್ಟ್

ವಿವಾದಾತ್ಮಕ ಪೋಸ್ಟ್

ಈ ನಡುವೆ ಮಂಗಳೂರು ಮುಸ್ಲಿಂ ಪೇಜ್ ಎಂಬ ಫೇಸ್ ಬುಕ್ ಖಾತೆಯಲ್ಲಿ ಚೈತ್ರಾ ಕುಂದಾಪುರ ಅವರ ವಿರುದ್ಧ ಅವಹೇಳನಕಾರಿಯಾಗಿ ಬರೆದು ವಿವಾದಾತ್ಮಕ ಪೋಸ್ಟ್ ಪ್ರಕಟಿಸಲಾಗಿದೆ. "ನಿನ್ನ ಅಹಂಕಾರಕ್ಕೆ ಇಲ್ಲಿಂದಲೇ ಅಂಕುಶ ಬೀಳಲಿ. ಹಿಂದುತ್ವವಾದಿಗಳೇ ನೀವೇ ಇವಳ ಕೈ ಕಾಲು ಮುರಿಯಿರಿ" ಎಂದು ಫೇಸ್ ಬುಕ್ ಪೇಜ್ ನಲ್ಲಿ ಬರೆಯಲಾಗಿದೆ.

 ಬೀದಿ ಹೆಣವಾಗಬೇಕು

ಬೀದಿ ಹೆಣವಾಗಬೇಕು

"ದುರ್ಗಾವಾಹಿನಿ ಭಯೋತ್ಪಾದಕಿ ಚೈತ್ರಾ ಕುಂದಾಪುರ ಕೈ ಕಾಲು ಮುರಿಯಿರಿ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ" ಎಂದು ಮಂಗಳೂರು ಮುಸ್ಲಿಂ ಪೇಜ್ ಫೇಸ್ ಬುಕ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ.

 ಅಲ್ಲಾಹುನಲ್ಲಿ ಬೇಡಿಕೊಳ್ಳುತ್ತೇನೆ

ಅಲ್ಲಾಹುನಲ್ಲಿ ಬೇಡಿಕೊಳ್ಳುತ್ತೇನೆ

"ಈ ಮಾರಾಮಾರಿ ಚೈತ್ರಾ ಕುಂದಾಪುರ ಬೀದಿ ಹೆಣವಾಗುವ ತನಕ ಹೋಗಲಿ ಎಂದು ಅಲ್ಲಾಹುನಲ್ಲಿ ಬೇಡಿಕೊಳ್ಳುತ್ತೇನೆ" ಎಂದು ವಿವಾದಾತ್ಮಕ ಪೋಸ್ಟ್ ಪ್ರಕಟಿಸಿದ್ದಾರೆ.

 ಚೈತ್ರಾಳಿಗೆ ಬಿದ್ದ ಒದೆಗಳಿಂದ ಸಂತೋಷವಾಗಿದೆ

ಚೈತ್ರಾಳಿಗೆ ಬಿದ್ದ ಒದೆಗಳಿಂದ ಸಂತೋಷವಾಗಿದೆ

'ಸುಬ್ರಹ್ಮಣ್ಯ ದೇವಸ್ಥಾನದ ಆಸ್ತಿಯ ವಿಷಯಕ್ಕೆ ಸಂಬಂಧಿಸಿ ಅಧಿಕ ಪ್ರಸಂಗ ಮಾಡಿದ 3 ಕಾಸಿನ ಬೀದಿ ಹೆಣ್ಣನ್ನು ಅಡ್ಡ ಗಟ್ಟಿ ತರಾಟೆಗೆ ತೆಗೆದುಕೊಂಡಾಗ ಬಿದ್ದ ಒದೆಗಳು ನೋಡಿ ಬಹಳ ಸಂತೋಷವಾಗಿದೆ. ಚೈತ್ರಾಳಿಗೆ ಬಿದ್ದ ಒದೆಗಳಿಂದ ಕೆರಳಿದ ಚೈತ್ರಾ ಸಂಗಡಿಗರು ತಮ್ಮ ವಾಹನದಲ್ಲಿ ಬಚ್ಚಿಟ್ಟಿದ್ದ ಮಾರಾಕಾಯುಧಗಳಿಂದ ದೇಶ ದ್ರೋಹಿ, ಹಿಂದುತ್ವವಾದಿ ಭಯೋತ್ಪಾದಕರ ಇನ್ನೊಂದು ಸಂಘಟನೆಯಾದ ಹಿಂದೂ ಜಾಗರಣ ವೇದಿಕೆಯ ಗುರುಪ್ರಸಾದ್ ಪೂಂಜಾ ಅವರ ಮೇಲೆ ದಾಳಿ ಮಾಡಿದ್ದಾರೆ' ಎಂದು ಫೇಸ್ ಬುಕ್ ಪೇಜ್ ನಲ್ಲಿ ಬರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+