ತೆಂಗು, ಅಡಿಕೆ ಇಳಿಸಲು ಯಂತ್ರ ಕಂಡುಹಿಡಿದ ಬಂಟ್ವಾಳದ ಹುಡುಗರು
ಬಂಟ್ವಾಳ ತಾಲೂಕಿನ ಕೃಷಿ ಮೂಲ ಕುಟುಂಬದಿಂದ ಬಂದ ಪ್ರಮೀತ್ ಶೆಟ್ಟಿ ತನ್ನ ಸಹಪಾಠಿ ವೆಂಕಟೇಶ್ ಪ್ರಭು ಜೊತೆ ಸೇರಿ ಕೃಷಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಆಟೋಮೇಟೆಡ್ ಕೋಕನಟ್ ಪ್ಲಕ್ಕರ್ ವಿತ್ ಕ್ಯಾಮರಾ' ಎಂಬ ವಿಶೇಷ ಯಂತ್ರವನ್ನು ತಯಾರಿಸಿದ್ದಾರೆ.
ಮಂಗಳೂರು, ಏಪ್ರಿಲ್ 3: ರೈತರನ್ನು ಕಾಡುವ ಸಮಸ್ಯೆಗಳಲ್ಲಿ ಕಾರ್ಮಿಕರ ಸಮಸ್ಯೆಯೂ ಒಂದು. ಅದರಲ್ಲೂ ತೆಂಗು ಮತ್ತು ಅಡಿಕೆ ಹೆಚ್ಚಾಗಿ ಬೆಳೆಯುವ ದಕ್ಷಿಣ ಕನ್ನಡ ಭಾಗದಲ್ಲಿ ಕೃಷಿ ಕಾರ್ಮಿಕರು ಕೈಗೆ ಸಿಗುವುದೇ ಇಲ್ಲ. ಮರ ಹತ್ತುವವರ ಕೊರತೆಯಂತೂ ಹೇಳ ತೀರದು.
ಈ ಸಮಸ್ಯೆ ನೀಗಿಸಲು ನಮ್ಮ ಕಥೆಯ ಈ ಇಬ್ಬರು ಯುವಕರು ಮುಂದಾಗಿದ್ದಾರೆ. ಮರ ಹತ್ತಲು ಹಲವು ಆಧುನಿಕ ಯಂತ್ರೋಪಕರಣಗಳ ಆವಿಷ್ಕಾರ ನಡೆಯುತ್ತಿದೆ. ಇದರ ಮಧ್ಯೆ ಈ ಯುವಕರು ಮರ ಹತ್ತುವ ಸಾಧನ ಕಂಡು ಹಿಡಿದಿದ್ದು ಗಮನ ಸೆಳೆಯುತ್ತಾರೆ.[ಮರಳು ಮಾಫಿಯಾ ಅಡ್ಡೆ ಮೇಲೆ ದಾಳಿ, ಉಡುಪಿ ಡಿಸಿ ಕೊಲೆ ಯತ್ನ]
ಬಂಟ್ವಾಳ ತಾಲೂಕಿನ ಕೃಷಿ ಮೂಲ ಕುಟುಂಬದಿಂದ ಬಂದ ಪ್ರಮೀತ್ ಶೆಟ್ಟಿ ತನ್ನ ಸಹಪಾಠಿ ವೆಂಕಟೇಶ್ ಪ್ರಭು ಜೊತೆ ಸೇರಿ ಕೃಷಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಆಟೋಮೇಟೆಡ್ ಕೋಕನಟ್ ಪ್ಲಕ್ಕರ್ ವಿತ್ ಕ್ಯಾಮರಾ' ಎಂಬ ವಿಶೇಷ ಯಂತ್ರವನ್ನು ತಯಾರಿಸಿದ್ದಾರೆ. ಈ ಮೂಲಕ ರೈತ ವರ್ಗದ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಯಾವ ಮರವಾದರೂ ಒಕೆ
ಒನ್ ಇಂಡಿಯಾ ಕನ್ನಡ ಜೊತೆಗೆ ಮಾತನಾಡಿದ ಪ್ರಮೀತ್ ಅಡಿಕೆ ಮರವಿರಲಿ, ತೆಂಗಿನ ಮರವಿರಲಿ ಈ ಯಂತ್ರಕ್ಕೆ ಸಮಸ್ಯೆಯೇ ಅಲ್ಲ. ಎಷ್ಟೇ ಎತ್ತರ ಮತ್ತು ಯಾವುದೇ ಸುತ್ತಳತೆಯ ಮರವನ್ನಾದರೂ ಇದು ತಾನಾಗಿಯೇ ಏರಬಲ್ಲದು ಎಂದು ತಮ್ಮ ಯಂತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೊಯ್ಲು, ಔಷಧಿ ಸಿಂಪಡನೆಗೆ ಉಪಯುಕ್ತ
ಅಡಿಕೆ, ತೆಂಗಿನ ಕೊಯ್ಲಿಗೆ ಈ ಯಂತ್ರ ಪರಿಣಾಮಕಾರಿಯಾಗಿ ಬಳಕೆ ಮಾಡಬಹುದಾಗಿದೆ. ಅಡಿಕೆಗೆ ಔಷಧಿ ಸಿಂಪಡಣೆಗೂ ಇದನ್ನು ಬಳಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಗೊನೆಯಲ್ಲಿರುವ ಕೆಲವು ಕಾಯಿಗಳನ್ನಷ್ಟೇ ಕೀಳಬೇಕು ಎಂದರೂ ಇದರಲ್ಲಿ ವ್ಯವಸ್ಥೆಯಿದೆ.[ಉಡುಪಿ ಡಿಸಿ, ಎಸಿ ಕೊಲೆ ಯತ್ನ, ಬಂಧಿತರ ಸಂಖ್ಯೆ 13ಕ್ಕೆ ಏರಿಕೆ]

ಬ್ಯಾಟರಿ ಚಾಲಿತ
12 ವೋಲ್ಟ್ ಬ್ಯಾಟರಿಯಿಂದ ಚಾಲನೆಗೊಳ್ಳುವ ಈ ಯಂತ್ರ, ಒಂದು ಬಾರಿ ಬ್ಯಾಟರಿ ಫುಲ್ ಚಾರ್ಜ್ ಮಾಡಿದರೆ 150 ಮರಗಳಿಂದ ಕಾಯಿ ಕೀಳುವ ಸಾಮರ್ಥ್ಯ ಹೊಂದಿದೆ. ಯಂತ್ರದಲ್ಲಿ ಕ್ಯಾಮರಾ ಇದ್ದು, ಡಿಸ್ಪ್ಲೇಯಲ್ಲಿ ಮರದ ತುತ್ತ ತುದಿಯ ಚಿತ್ರಗಳನ್ನೂ, ಗೊನೆ, ಕಾಯಿಗಳ ವೀಕ್ಷಣೆಯನ್ನೂ ಸುಲಭದಲ್ಲಿ ಮಾಡಬಹುದಾಗಿದೆ. ಈ ಮೂಲಕ ಯಂತ್ರಕ್ಕೆ ನಿರ್ದೇಶನಗಳನ್ನು ನೀಡಬಹುದು.

ಪ್ರಶಸ್ತಿ ಗೆದ್ದ ಯಂತ್ರ
ಪ್ರಮೀತ್ ಶೆಟ್ಟಿ ಮೂಡಬಿದಿರೆ ಎಸ್ ಎನ್ ಪಾಲಿಟೆಕ್ನಿಕ್ಕಿನ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ. ರಾಜ್ಯ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ವತಿಯಿಂದ ಬಾಗಲಕೋಟೆ ಸರಕಾರಿ ಪಾಲಿಟೆಕ್ನಿಕ್ಕಿನಲ್ಲಿ ಇತ್ತೀಚೆಗೆ ಆಯೋಜಿಸಿದ ರಾಜ್ಯಮಟ್ಟದ ನೀವೇ ಮಾಡಿ ನೋಡಿ,' ತಾಂತ್ರಿಕ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಈ ಯಂತ್ರವನ್ನು ತಯಾರಿಸಿ ದ್ವಿತೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಸಾಧನೆ ಮುಂದುವರಿಯಲಿ
ಕೃಷಿ ಕುಟುಂಬದಿಂದ ಬಂದ ಅರಳ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮೀಧರ ಹಾಗೂ ರೂಪಾ ದಂಪತಿಯ ಪುತ್ರನಾಗಿರುವ ಪ್ರಮೀತ್ ಶೆಟ್ಟಿ ಸಾಧನೆ ಮತ್ತಷ್ಟು ಮುಂದುವರಿಸಲು ಮನೆಮಂದಿಯ ಮತ್ತು ಊರವರ ಉತ್ತೇಜನವಿದೆ. ಪ್ರಸ್ತುತ ಈ ಯಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಮೀತ್ ಪ್ರಯತ್ನ ನಡೆಸುತ್ತಿದ್ದಾರೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications