ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿ ದೀರ್ಘಾಯುಷ್ಯಗಾಗಿ ಧರ್ಮಸ್ಥಳದಲ್ಲಿ ಮಹಾಮೃತ್ಯುಂಜಯ ಹೋಮ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 6: ಪಂಜಾಬ್‌ನ ಮೇಲ್ಸೇತುವೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಕಾರನ್ನು ಇಪ್ಪತ್ತು‌ ನಿಮಿಷ ತಡೆ ಹಿಡಿದ ವಿಚಾರ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Recommended Video

ಭದ್ರತಾ ಲೋಪದ ಹೆಸರಿನಲ್ಲಿ ಮೋದಿ ವಿರುದ್ಧ ಸಂಚು ನಡೆದಿತ್ತಾ? | Oneindia Kannada

ಪ್ರಧಾನಿಯವರನ್ನು ಈ ರೀತಿ ಅಡ್ಡಗಟ್ಟಿಸಿರುವುದು ಭದ್ರತಾ ವೈಫಲ್ಯ ಅಂತಾ ಆಡಳಿತ ಪಕ್ಷ ಟೀಕಿಸಿದರೆ, ಕಾಂಗ್ರೆಸ್ ಮಾತ್ರ ಇದು ಚುನಾವಣಾ ಗಿಮಿಕ್, ಮೋದಿ, ಮೆರವಣಿಗೆಯಲ್ಲಿ ಜನ ಸೇರಲಿಲ್ಲ ಎಂಬ ಕಾರಣಕ್ಕಾಗಿ ಮೋದಿ ಈ ಹೈಡ್ರಾಮ ಮಾಡಿದ್ದಾರೆ ಅಂತಾ ಕಾಂಗ್ರೆಸ್ ಟೀಕಿಸಿದೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಯ ಜೀವಕ್ಕೆ ಕಟಂಕವಾಗುವ ರೀತಿ ಪಂಜಾಬ್ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ ಎಂದು ಟೀಕೆಗಳು ವ್ಯಕ್ತವಾಗಿವೆ.

ನರೇಂದ್ರ ಮೋದಿಯವರ ವಾಹನ ಮೇಲ್ಸೇತುವೆ ಮೇಲೆ ಇಪ್ಪತ್ತು‌ ನಿಮಿಷ ಬಾಕಿಯಾಗುತ್ತಿದ್ದಂತೆಯೇ ಪ್ರಧಾನಿ ಮೋದಿಗೆ ಜೀವಕ್ಕೆ ಕಟಂಕದ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನಲೆಯಲ್ಲಿ ಮೋದಿಯವರ ಜೀವಕ್ಕೆ ಹಾನಿಯಾಗದಂತೆ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ನರೇಂದ್ರ ಮೋದಿಯವರ ದೀರ್ಘಾಯಸ್ಸು ಮತ್ತು ಆರೋಗ್ಯಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲು ತೀರ್ಮಾನಿಸಲಾಗಿದೆ.

Mahamrityunjaya Homa at Dharmasthala for Prime Minister Narendra Modis Long Life


ಜನವರಿ 17ರ ಸೋಮವಾರದಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥನ ಸನ್ನಿಧಾನದಲ್ಲಿ ಮೋದಿಯ ದೀರ್ಘಾಯಸ್ಸಿಗಾಗಿ ಮಹಾ ಮೃತ್ಯುಂಜಯ ನಡೆಸಲು ಹರೀಶ್ ಪೂಂಜಾ ತೀರ್ಮಾನಿಸಿದ್ದಾರೆ. ಈ ಹೋಮ ಬೆಳ್ತಂಗಡಿ ತಾಲೂಕಿನ ಜನರ ಪರವಾಗಿ ಮಾಡಲು ತೀರ್ಮಾನಿಸಿದ್ದು, ಈ ಬಗ್ಗೆ ಪೂರ್ವಭಾವಿ ಸಭೆ ಕರೆದು ತೀರ್ಮಾನಿಸಲಾಗಿದೆ.

ನರೇಂದ್ರ ಮೋದಿಗಾಗಿ ಈ ಮಹಾ ಮೃತ್ಯುಂಜಯ ಹೋಮ ನಡೆಸಲಾಗುತ್ತಿದ್ದು, ವೈದಿಕ ಪಂಡಿತರ ನೇತೃತ್ವದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಜನವರಿ 10ರ ಸೋಮವಾರ ಬೆಳ್ತಂಗಡಿ ತಾಲೂಕಿನ ಎಲ್ಲಾ ಶಿವ ದೇಗುಲಗಳಲ್ಲಿ ಮೃತ್ಯುಂಜಯ ಹೋಮ‌ ನಡೆಸಲು ತೀರ್ಮಾನಿಸಲಾಗಿದೆ. ಆ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳ ದಲ್ಲಿ ಜನವರಿ 17ರ ಸೋಮವಾರ ಮಹಾ ಮೃತ್ಯುಂಜಯ ಹೋಮದಲ್ಲಿ ಪೂರ್ಣಾಹುತಿ ಮಾಡಲಾಗುತ್ತದೆ.

Mahamrityunjaya Homa at Dharmasthala for Prime Minister Narendra Modis Long Life

ಪಂಜಾಬ್‌ನಲ್ಲಿ ನಡೆದ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಹರೀಶ್ ಪೂಂಜಾ, "ಇಪ್ಪತ್ತು ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಪ್ರಧಾನಿಯವರ ಕಾನ್ವಾಯ್ ನಿಲ್ಲುವಂತೆ ಮಾಡಿ ಭಾರತದ ಭದ್ರತಾ ತಾಕತ್ತನ್ನೆ ಪ್ರಶ್ನಿಸುವಂತೆ ಮಾಡಿದ ಕಾಂಗ್ರೆಸ್‌ನ ಕೊಳಕು ರಾಜಕಾರಣಕ್ಕೆ ಧಿಕ್ಕಾರವಿರಲಿ. ದೇಶದ ಪ್ರಧಾನಿಯನ್ನು ಸರ್ಕಾರಿ ಕಾರ್ಯಕ್ರಮಕ್ಕೆ ಹೋಗುವುದನ್ನು ತಡೆದು ನಿಲ್ಲಿಸುವಷ್ಟು ಕೀಳು ಮಟ್ಟಕ್ಕೆ ಕಾಂಗ್ರೆಸ್ ಇಳಿದಿರುವುದು ಹೀನ ಸಂಗತಿ. ಬಿಜೆಪಿ ಕಾರ್ಯಕರ್ತರು ಇದನ್ನು ಸವಾಲಾಗಿ ಸ್ವೀಕರಿಸಿದರೆ ದೇಶದಲ್ಲಿ ಕಾಂಗ್ರೆಸ್ ಮತ್ತು ಅವರ ನಾಯಕರೇ ಏಳು ಜನ್ಮ ಎತ್ತಿ ಬಂದರೂ ನಿಮ್ಮಿಂದ ಒಂದು ಸಭೆ ನಡೆಸಲು ಸಾಧ್ಯವಿಲ್ಲ ನೆನಪಿಡಿ,'' ಅಂತಾ ಆಕ್ರೋಶ ವ್ಯಕ್ತಪಡಿಸಿದ್ದರು.

Mahamrityunjaya Homa at Dharmasthala for Prime Minister Narendra Modis Long Life

ಮೃತ್ಯುಂಜಯ ಹೋಮದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಹರೀಶ್ ಪೂಂಜಾ, "ಪ್ರಧಾನಿ ನರೇಂದ್ರ ಮೋದಿಯವರ ಪ್ರಾಣಕ್ಕೆ ಆಪತ್ತಿಗಾಗಿ ದೇಶ ದ್ರೋಹಿಗಳು ಸಂಚು ಹಾಕುತ್ತಿದ್ದಾರೆ. ಅವರ ಆರೋಗ್ಯ ಮತ್ತು ದೀರ್ಘಾಯಸ್ಸಿಗಾಗಿ ಧರ್ಮಸ್ಥಳದ ಮಂಜುನಾಥ ಸ್ವಾಮಿ‌ ಸನ್ನಿಧಾನದಲ್ಲಿ ಮಹಾ ಮೃತ್ಯುಂಜಯ ಹೋಮ ಮಾಡಲಿದ್ದೇವೆ. ಈ ಕಾರ್ಯ ಸೀಮಿತ ಸಂಖ್ಯೆಯ ಜನರ ಸಮ್ಮುಖದಲ್ಲಿ‌ನಡೆಯಲಿದೆ. ಆದರೆ ಇದಕ್ಕೂ ಮುನ್ನ ತಾಲೂಕಿನ ಎಲ್ಲಾ ಶಿವ ದೇಗುಲಗಳಲ್ಲಿ ಮೃತ್ಯುಂಜಯ ಹೋಮ ನಡೆಯಲಿದ್ದು, ಈ ಕಾರ್ಯದಲ್ಲಿ ಗ್ರಾಮದ ಪ್ರಮುಖರು ಭಾಗವಹಿಸಲಿದ್ದಾರೆ," ಅಂತಾ ಹೇಳಿದ್ದಾರೆ.

ಒಟ್ಟಿನಲ್ಲಿ ಪಂಜಾಬ್ ಘಟನೆ ಬಗ್ಗೆ ನಾನಾ ವಾದ ಪ್ರತಿವಾದ ನಡೆಯುತ್ತಿದ್ದು, ಈ ವಿಚಾರ ಅಂತಿಮ ಘಟ್ಟ ತಲುಪುವಾಗ ಯಾವ ರೂಪ ಪಡೆದುಕೊಳ್ಳುತ್ತದೆ ಅನ್ನುವುದನ್ನು ಕಾದುನೋಡಬೇಕಿದೆ.

English summary
Mahamrityunjaya Homa is scheduled to be held at Srikshetra Dharmasthala for the long life and health of PM Narendra Modi on January 17 under the leadership of Belthangady MLA Harish Poonja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X