ಸುಂಕದಕಟ್ಟೆ ಮದರಸಾದಲ್ಲಿ ಧರ್ಮಸ್ಥಳದ ಭಕ್ತರಿಗೆ ಆಶ್ರಯ!

ಪುತ್ತೂರು, ಫೆ.17 : ಧರ್ಮದ ವಿಚಾಕ್ಕಾಗಿ ಹೊಡೆದಾಟಗಳು ನಡೆಯುವ ಇಂದಿನ ಕಾಲದಲ್ಲಿ ಪುತ್ತೂರಿನ ಜನರು ಇತರರಿಗೆ ಮಾದರಿಯಾಗಿದ್ದಾರೆ. ಧರ್ಮಸ್ಥಳ ಮತ್ತು ಸುಬ್ರಮಣ್ಯಕ್ಕೆ ಯಾತ್ರೆ ಹೊರಟಿದ್ದ ಭಕ್ತಾದಿಗಳಿಗೆ ಮದರಸಾದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟು ಧಾರ್ಮಿಕ ಸಾಮರಸ್ಯ ಸಾರಿದ್ದಾರೆ.

ಕೊಡಗಿನ ಕೆಲವು ಭಕ್ತರು ಕಾಲ್ನೆಡಿಗೆಯಲ್ಲಿ ಧರ್ಮಸ್ಥಳ ಮತ್ತು ಸುಬ್ರಮಣ್ಯದ ಯಾತ್ರೆ ಕೈಗೊಂಡಿದ್ದರು. ಸೋಮವಾರ ರಾತ್ರಿ ಅವರು ಸುಂಕದಕಟ್ಟೆ ಪ್ರವೇಶಿಸಿದ್ದರು. ರಾತ್ರಿಯಾಗಿದ್ದರಿಂದ ಪ್ರಯಾಣ ಮುಂದುವರೆಸುವುದು ಕಷ್ಟವೆಂದು ಅರಿತ ಅವರು ಅಲ್ಲಿಯೇ ಉಳಿಯಲು ತೀರ್ಮಾನಿಸಿದರು.

Madrasa

ಆಗ ಸ್ಥಳೀಯ ಮುಸ್ಲಿಂ ಮುಖಂಡರ ಬಳಿ ಮದರಸಾದಲ್ಲಿ ಉಳಿಯಲು ಜಾಗ ನೀಡುವಂತೆ ಭಕ್ತಾದಿಗಳು ಮನವಿ ಮಾಡಿದರು. ಸುಂಕದಕಟ್ಟೆ ಜಮಾ ಮಸೀದಿಯ ಮುಖಂಡರು ಭಕ್ತಾದಿಗಳು ಮನವಿಗೆ ಸ್ಪಂದಿಸಿದರು. ಮದರಸಾದಲ್ಲಿಯೇ ಅವರಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟರು. [ತುಂಟ ಬಾಲಕನಿಗೆ ಮದರಸಾದಲ್ಲಿ ಅಮಾನವೀಯ ಶಿಕ್ಷೆ]

ಮಂಗಳವಾರ ಬೆಳಗ್ಗೆ ಭಕ್ತಾದಿಗಳು ಮದರಸಾದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿ ತಮ್ಮ ಕಾಲ್ನೆಡಿಗೆಯನ್ನು ಮುಂದುವರೆಸಿದ್ದಾರೆ. ಧರ್ಮದ ವಿಚಾರದಲ್ಲಿ ಹೊಡೆದಾಟಗಳುವ ಇಂದಿನ ಕಾಲದಲ್ಲಿ ಮದರಸಾದವರ ಧಾರ್ಮಿಕ ಸಾಮರಸ್ಯ ಮೆಚ್ಚಬೇಕಾದದ್ದು.

ಮಸೀದಿ ಮೇಲೆ ಕಲ್ಲು ತೂರಾಟ : ಬಜಪೆಯ ಕೇಂದ್ರ ಜುಮ್ಮಾ ಮಸೀದಿಯ ಹಾಗೂ ಪೊರ್ಕೋಡಿ ದ್ವಾರದ ಬಳಿಯ ಈದ್ಗಾ ಮಸೀದಿಗೆ ಶನಿವಾರ ರಾತ್ರಿ ಕೀಡಿಗೇಡಿಗಳು ಕಲ್ಲು ತೂರಿದ್ದಾರೆ. ರಾತ್ರಿ ಸುಮಾರು 2.20ರ ವೇಳೆ ಮಸೀದಿಗೆ ಕಲ್ಲು ಬೀಸಿದ ಕೀಡಿಗೇಡಿಗಳು ಬೈಕ್‌ನಲ್ಲಿ ಬಂದಿದ್ದರು ಎಂದು ತಿಳಿದುಬಂದಿದೆ. ಕಲ್ಲು ತೂರಾಟದಿಂದ ಮಸೀದಿಯ ಕಿಟಕಿಯ ಗಾಜುಗಳು ಪುಡಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+