ಕಲ್ಲಡ್ಕ ಪ್ರಭಾಕರ ಭಟ್ ಗೆ ಫೇಸ್ಬುಕ್ ನಲ್ಲಿ ಜೀವ ಬೆದರಿಕೆ
ಮಂಗಳೂರು, ಜುಲೈ 7: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಜೀವ ಬೆದರಿಕೆ ಹಾಕಲಾಗಿದೆ. 'ಮಂಗಳೂರು ಮುಸ್ಲಿಂ' ಎಂಬ ಫೇಸ್ಬುಕ್ ಪೇಜ್ ನಲ್ಲಿ ಜೀವ ಬೆದರಿಕೆ ಹಾಕಿದ್ದಾರೆ.
ಕಲ್ಲಡ್ಕ ಪ್ರಭಾಕರ ಭಟ್ ರನ್ನು ಭಯೋತ್ಪಾದಕರಿಗೆ ಹೋಲಿಸಿರುವ ಪೇಜ್, "ಭಯೋತ್ಪಾದಕ ಕಲ್ಲಡ್ಕ ಪ್ರಭಾಕರ ಭಟ್ಟ ಸತ್ತರೆ ಅವನಿಗೆ ರಾಷ್ಟ್ರ ಧ್ವಜ ಹಾಕಿ ಗೌರವಿಸುತ್ತೀರೋ ಇಲ್ಲಾ ಕೇಸರಿ ಧ್ವಜ ಹಾಕುತ್ತಿರೋ? ಇವತ್ತು ಅವನ ಕೊನೆಯ ದಿನ .. ತೀರ್ಮಾನಿಸಿ." ಎಂದು ಬರೆಯಲಾಗಿದೆ.

ಇಂದು ಬೆಳಿಗ್ಗೆ ಬಿ.ಸಿ.ರೋಡ್ ನಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಹಲ್ಲೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಯ ಹಿನ್ನಲೆಯಲ್ಲಿ ಫೇಸ್ಬುಕ್ ನಲ್ಲಿ ಈ ಬೆದರಿಕೆ ಹಾಕಲಾಗಿದೆ.












Click it and Unblock the Notifications