ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುರ್ತು ಸಂದರ್ಭಗಳಲ್ಲಿ ನಿಮ್ಮನ್ನು ಕಾಪಾಡಲಿದೆ 'ಸೇವಿಯರ್ ಆ್ಯಪ್'

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 28 : ತುರ್ತು ಸಂದರ್ಭಗಳಲ್ಲಿ ಸಿಂಗಲ್ ಕ್ಲಿಕ್ ಮಾಡುವ ಮೂಲಕ ಆಂಬ್ಯುಲೆನ್ಸ್ ಸೇವೆ ಪಡೆಯಲು 'ಸೇವಿಯರ್' ಮೊಬೈಲ್ ಅಪ್ ವೊಂದನ್ನು ಮಂಗಳೂರಿನ ಕೋಡ್‌ ಕ್ರಾಫ್ಟ್ ಟೆಕ್ನಾಲಜಿಸ್ ತಯಾರಿಸಿದೆ.

ತುರ್ತು ಸಂದರ್ಭಗಳಲ್ಲಿ ಅಪಾಯದಲ್ಲಿರುವವರ ಪ್ರಾಣ ರಕ್ಷಣೆಗೆ ಜನಸಾಮಾನ್ಯರೇ ಮುಂದಾಗುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು, ಸ್ವಯಂ ಸೇವಕರಾಗಿ ತರಬೇತಿ ನೀಡುವುದರ ಜತೆಗೆ ಅತ್ಯಂತ ಕಡಿಮೆ ಸಮಯದಲ್ಲಿ ತುರ್ತು ಸ್ಥಳಕ್ಕೆ ಆಂಬ್ಯುಲೆನ್ಸ್ ತಲುಪುವುದನ್ನು ಈ ಅಪ್ ಖಾತರಿಪಡಿಸಲಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನೋಟ್ಸ್ ಆ್ಯಪ್ ತಯಾರುಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನೋಟ್ಸ್ ಆ್ಯಪ್ ತಯಾರು

ಈ ಅಪ್ ಮೂಲಕ ತುರ್ತು ಚಿಕಿತ್ಸೆ ಕುರಿತಂತೆ ಆಂದೋಲವನ್ನೂ ನಡೆಸಲಾಗುತ್ತಿದ್ದು, ಗೂಗಲ್ ಪ್ಲೇ ಸ್ಟೋರ್ ಮೂಲಕ ಉಚಿತವಾಗಿ ಈ ಅಪ್ ನ್ನು ಡೌನ್‌ ಲೋಡ್ ಮಾಡಿಕೊಳ್ಳಬಹುದಾಗಿದೆ.

ಡೌನ್‌ಲೋಡ್ ಮಾಡಿಕೊಂಡವರು ತಮಗೆ ಅಥವಾ ಇತರ ಯಾರಿಗಾದರೂ ತುರ್ತು ಚಿಕಿತ್ಸೆಯ ಅಗತ್ಯವಿದ್ದಲ್ಲಿ ಈ ಅಪ್ ನಲ್ಲಿನ 'ಎಮರ್ಜೆನ್ಸಿ'ಗೆ ಕ್ಲಿಕ್ ಮಾಡುವ ಮೂಲಕ ಈ ಸೇವೆಯನ್ನು ಪಡೆಯಬಹುದು.

ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?

. ಅಪಘಾತ, ಹೃದಾಯಾಘಾತ ಮೊದಲಾದ ತುರ್ತು ಸಂದರ್ಭಗಳಲ್ಲಿ ರೋಗಿಯ ಪ್ರಥಮ 15 ನಿಮಿಷಗಳು ಅತೀ ಮುಖ್ಯವಾಗಿದ್ದು, ಈ ಸಂದರ್ಭದಲ್ಲಿ ಸೂಕ್ತ ಪ್ರಥಮ ಚಿಕಿತ್ಸೆ ಒದಗಿಸಿದರೆ ಪ್ರಾಣಾಪಾಯದಿಂದ ಕಾಪಾಡಬಹುದು.

ತುರ್ತು ಚಿಕಿತ್ಸಾ ತಜ್ಞ ಡಾ.ಜೀತು ಹೇಳುವುದೇನು?

ತುರ್ತು ಚಿಕಿತ್ಸಾ ತಜ್ಞ ಡಾ.ಜೀತು ಹೇಳುವುದೇನು?

ಪ್ರತೀ ವರ್ಷ 140,000 ಮಂದಿ ಪ್ರಥಮ ಚಿಕಿತ್ಸೆ ಅಲಭ್ಯತೆಯಿಂದಾಗಿ ಪ್ರಾಣ ಕಳೆದುಕೊಂಡರೆ, 5 ಮಿಲಿಯ ಮಂದಿ ರಕ್ತಸ್ರಾವದಿಂದಾಗಿ ಕೊನೆಯುಸಿರೆಳೆಯುತ್ತಾರೆ. ಈ ನಿಟ್ಟಿನಲ್ಲಿ ಈ ಅಪ್ ಜೀವ ರಕ್ಷಕವಾಗಿ ಕಾರ್ಯಾಚರಿಸಲಿದೆ ಎಂದು ತುರ್ತು ಚಿಕಿತ್ಸಾ ತಜ್ಞ ಡಾ.ಜೀತು ರಾಧಾಕೃಷ್ಣನ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಅಪ್ ಬಗ್ಗೆ ಹೃದ್ರೋಗ ತಜ್ಞ ಡಾ.ಮನೀಶ್ ರೈ ಮಾತು

ಅಪ್ ಬಗ್ಗೆ ಹೃದ್ರೋಗ ತಜ್ಞ ಡಾ.ಮನೀಶ್ ರೈ ಮಾತು

ಇನ್ನು ಹೃದ್ರೋಗ ತಜ್ಞ ಡಾ.ಮನೀಶ್ ರೈ ಮಾತನಾಡಿ, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಹುತೇಕರಾಗಿ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಇದರಿಂದಾಗಿಯೇ ಆಸ್ಪತ್ರೆಗೆ ತಲುಪುವ ವೇಳೆ ಸೂಕ್ತ ಪ್ರಥಮ ಚಿಕಿತ್ಸೆಯ ಅಲಭ್ಯತೆಯಿಂದಾಗಿ ಸಾಕಷ್ಟು ಸಾವು ಪ್ರಕರಣಗಳು ಸಂಭವಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಈ ಸ್ವಯಂಸೇವಕರು ಜೀವರಕ್ಷಕರಾಗಿ ಕಾರ್ಯ ನಿರ್ವಹಿಸಬಹುದು ಎಂದರು.

ಎಂಟು ಆಸ್ಪತ್ರೆಗಳ ಜತೆ ಒಪ್ಪಂದ

ಎಂಟು ಆಸ್ಪತ್ರೆಗಳ ಜತೆ ಒಪ್ಪಂದ

ಈ ಅಪ್ ನಿಂದ ಅತ್ಯಲ್ಪ ಅವಧಿಯಲ್ಲಿ ಆಂಬ್ಯುಲೆನ್ಸ್ ತುರ್ತು ಸ್ಥಳಕ್ಕೆ ಧಾವಿಸಲು ನೆರವಾಗಲಿದೆ. ಇದಕ್ಕಾಗಿ ಈಗಾಗಲೇ ನಗರದ ಎಂಟು ಆಸ್ಪತ್ರೆಗಳ ಜತೆ ಸಂಸ್ಥೆಯು ಮಾತುಕತೆ ನಡೆಸಿ, ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆಯನ್ನು ನೀಡಲು ಒಪ್ಪಿಗೆ ಸೂಚಿಸಿವೆ.

ಸೇವಿಯರ್’ ಅಪ್ ನ ಸ್ವಯಂ ಸೇವಕರಾಗಬಹುದು

ಸೇವಿಯರ್’ ಅಪ್ ನ ಸ್ವಯಂ ಸೇವಕರಾಗಬಹುದು

ಅಪ್ ಡೌನ್‌ಲೋಡ್ ಮಾಡಿಕೊಳ್ಳುವರಿಗೆ ನಗರದ ಯಾವುದಾದರೂ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಒದಗಿಸುವ ಬಗ್ಗೆ ಒಂದು ದಿನದ ತರಬೇತಿ ಒದಗಿಸಿ (ವೈದ್ಯಕೀಯವಾಗಿ ಪ್ರಮಾಣಪತ್ರವನ್ನು ಹೊಂದಿದ) ಅವರನ್ನು ಸ್ವಯಂ ಸೇವಕರನ್ನಾಗಿಸಲಾಗುವುದು. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಂದ ತರಬೇತಿ ಪಡೆದ ಸ್ವಯಂ ಸೇವಕರು ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯನ್ನು ಒದಗಿಸಿ ಅಪಾಯದಲ್ಲಿರುವವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಬಹುದು ಎಂಬುವುದು ಕೋಡ್‌ ಕ್ರಾಫ್ಟ್ ಟೆಕ್ನಾಲಜಿಸ್ ನ ದೀಕ್ಷಿತ್ ರೈ ಅವರ ಮಾತು.

English summary
Life-saving app called the "Saviour" app launched by CodeCraft Technologies for Emergency. Get an Ambulance anytime and anywhere with the tap of a Button.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X