ಮತ್ತೊಂದು ಬಲಿ ಪಡೆದ ದೇರೇಬೈಲ್ ಗುಡ್ಡ

ಮಂಗಳೂರು, ಮೇ 1 : ಮಂಗಳೂರಿನ ದೇರೇಬೈಲ್ ಬಳಿ ನಿರ್ಮಾಣ ಹಂತದ ಕಟ್ಟಡ ಹಿಂಭಾಗದ ಗುಡ್ಡ ಕುಸಿದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಮಳೆಯಿಂದಾಗಿ ಮಣ್ಣು ಶಿಥಲಗೊಂಡಿದ್ದೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

ಬುಧವಾರ ಕಾರ್ಮಿಕರು ಎಂದಿನಂತೆ ಕೆಲಸದಲ್ಲಿ ತೊಡಗಿದ್ದಾಗ ಗುಡ್ಡ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದ ಕಾಶಿಯಪ್ಪ ಅವರು ಮಣ್ಣಿನಡಿ ಸಿಲುಕಿದರು. ಅಗ್ನಿ ಶಾಮಕದಳದ ಸಿಬ್ಬಂದಿ ಬಂದು ರಕ್ಷಿಸುವ ವೇಳೆಗೆ ಅವರು ಮೃತಪಟ್ಟಿದ್ದರು. ಕಾಶಿಯಪ್ಪ (40) ಬಾದಾಮಿಯ ನರಗುಂದ ನಿವಾಸಿಯಾಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಹಂಪಿ ಮೂಲದ ಶಿವನಾಯಕ್ (21), ಸ್ವಾಮಿ ನಾಯಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಕಾಶಿಯಪ್ಪನ ಪತ್ನಿ ಮಹಾದೇವಿಗೂ ಅವರಿಗೂ ಸಣ್ಣಪುಟ್ಟ ಗಾಯವಾಗಿದೆ. 2012 ರಲ್ಲಿಯೂ ಈ ಸ್ಥಳದಲ್ಲಿ ಗುಡ್ಡ ಕುಸಿದು ಒಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಗುಡ್ಡ ಕುಸಿದು ಬಿದ್ದ ಚಿತ್ರಗಳು [ಚಿತ್ರಗಳು : Isaac Richard , Mangalore]

ಮಣ್ಣಿನಡಿ ಸಿಲುಕಿ ಕಾರ್ಮಿಕ ಸಾವು

ಮಣ್ಣಿನಡಿ ಸಿಲುಕಿ ಕಾರ್ಮಿಕ ಸಾವು

ಮಂಗಳೂರಿನ ದೇರೇಬೈಲ್ ಬಳಿ ನಿರ್ಮಾಣ ಹಂತದ ಕಟ್ಟಡ ಹಿಂಭಾಗದ ಗುಡ್ಡ ಕುಸಿದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ರಕ್ಷಣೆ ಸಾಧ್ಯವಾಗಲಿಲ್ಲ

ರಕ್ಷಣೆ ಸಾಧ್ಯವಾಗಲಿಲ್ಲ

ವಿಕ್ಟೋರಿಯಾ ಬಿಲ್ಡರ್ಸ್ ಗೆ ಸೇರಿದ ನಿವೇಶನದಲ್ಲಿ ಹೊಂಡ ತೋಡುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದಿದ್ದರಿಂದ ಕಾರ್ಮಿಕರ ಮೇಲೆ ಮಣ್ಣು ಬಿದ್ದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡುವ ಮೊದಲೇ ಕಾಶಿಯಪ್ಪ ಎಂಬುವವರು ಸಾವನ್ನಪ್ಪಿದ್ದರು.

ದುಡಿಯಲು ಬಂದು ಪ್ರಾಣ ಬಿಟ್ಟರು

ದುಡಿಯಲು ಬಂದು ಪ್ರಾಣ ಬಿಟ್ಟರು

ದೇರೇಬೈಲ್ ಬಳಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರು ತುತ್ತು ಅನ್ನ ಹುಡುಕಿಕೊಂಡು ಬಂದವರು. ಘಟನೆಯಲ್ಲಿ ಮೃತಪಟ್ಟ ಕಾಶಿಯಪ್ಪ (40) ಬಾದಾಮಿಯ ನರಗುಂದ ನಿವಾಸಿಯಾಗಿದ್ದಾರೆ. ಗಾಯಗೊಂಡವರು ಹಂಪಿ ಮೂಲದ ಶಿವನಾಯಕ್ (21) ಮತ್ತು ಸ್ವಾಮಿ ನಾಯಕ್.

ಕಾಶಿಯಪ್ಪ ಪತ್ನಿಗೂ ಗಾಯ

ಕಾಶಿಯಪ್ಪ ಪತ್ನಿಗೂ ಗಾಯ

ಕೆಲಸದಲ್ಲಿ ನಿರತರಾಗಿದ್ದ ಕಾಶಿಯಪ್ಪನ ಪತ್ನಿ ಮಹಾದೇವಿಗೂ ಅವರಿಗೂ ಸಣ್ಣಪುಟ್ಟ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಎರಡನೇ ದುರಂತ

ಎರಡನೇ ದುರಂತ

2012 ರಲ್ಲಿಯೂ ಈ ಸ್ಥಳದಲ್ಲಿ ಗುಡ್ಡ ಕುಸಿದು ಒಬ್ಬರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+